ಹೆಚ್ಚಳ ಕಂಡಿದ್ದ ಚಿನ್ನದ ಬೆಲೆ ಭಾರಿ ಇಳಿಕೆ ಆಗುವ ಮೂಲಕ ಚಿನ್ನಾಭರಣ ಪ್ರಿಯರಲ್ಲಿ ತುಸು ಸಮಾಧಾನ ತರಿಸಿದೆ.

42

ದೇಶೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ 10 ಶುಕ್ರವಾರದಂದು, 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 12,229 ರೂಪಾಯಿಗೆ ತಲುಪಿದೆ. ಶುಕ್ರವಾರ ಅಕ್ಟೋಬರ್ 10 ರಂದು 1860 ರೂಪಾಯಿ ಕುಸಿತ ಕಂಡಿದೆ. ಅಂತರಾಷ್ಟ್ರೀಯ ಕಾರಣಗಳು ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ 

ಬೆಂಗಳೂರು: ಆಶ್ಚರ್ಯಕರ ರೀತಿಯಲ್ಲಿ ಚಿನ್ನದ ಬೆಲೆ ಭಾರಿ ಕುಸಿದಿದೆ. ವಾರದ ಆರಂಭದಿಂದಲೂ ದಾಖಲೆ ಮಟ್ಟದಲ್ಲಿ ಹೆಚ್ಚಳ ಕಂಡಿದ್ದ ಚಿನ್ನದ ಬೆಲೆ ಇಂದು ಏಕಾಏಕಿ ಇಳಿಕೆ ಆಗಿದ್ದು, ಚಿನ್ನದ ಬೆಲೆಯಲ್ಲಿ ಶುಕ್ರವಾರ ಅಕ್ಟೋಬರ್ 10 ರಂದು 1860 ರೂಪಾಯಿ ಕುಸಿತ ಕಂಡಿದೆ.

ದೇಶೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ 10 ಶುಕ್ರವಾರದಂದು, 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 12,229 ರೂಪಾಯಿಗೆ ತಲುಪಿದೆ. ಇಂದು ಗ್ರಾಂ ಒಂದಕ್ಕೆ ಬೆಲೆ ಬರೋಬ್ಬರಿ 186 ರೂಪಾಯಿ ಇಳಿಕೆ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 170 ರೂಪಾಯಿ ಇಳಿಕೆ ಆಗಿದ್ದು, 11,210 ರುಪಾಯಿ ಆಗಿದೆ. 10 ಗ್ರಾಂ ಬೆಲೆ ಎಷ್ಟು? 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 1860 ರೂಪಾಯಿ ಕಡಿಮೆ ಆಗಿ, 1,22,290 ರುಪಾಯಿ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1700 ರೂ ಕಡಿಮೆ ಆಗಿ, 1,12,100 ರೂಪಾಯಿಗೆ ಇಳಿಕೆ ಆಗಿದೆ.

ಬೆಂಗಳೂರಿನ ಚಿನ್ನದ ಬೆಲೆ ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12,229 ರೂ ಇದೆ. ಬೆಳ್ಳಿಯ ಬೆಲೆ ಮಾತ್ರ ಇಂದೂ ಕೂಡಾ 3 ರೂಪಾಯಿ ಹೆಚ್ಚಳ ಆಗಿದ್ದು ಕೆಜಿ ಬೆಲೆ 1,70,000 ರೂ ಆಗಿದೆ.

ಚಿನ್ನದ ಬೆಲೆಯನ್ನು ಯಾರು ನಿರ್ಧರಿಸುತ್ತಾರೆ? ಬಂಗಾರದ ದರವನ್ನು ಫಿಕ್ಸ್‌ ಮಾಡೋ ವಿಚಿತ್ರ ವಿಧಾನ ಹೇಗಿದೆ? ರೇಟ್‌ ಫಿಕ್ಸ್‌ ಮಾಡುವ ಅದೃಶ್ಯದ ಕೈಗಳು ಯಾವುವು? ಚಿನ್ನದ ಬೆಲೆ ಇಳಿಕೆಗೆ ಕಾರಣಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಲು ಪ್ರಮುಖ ಕಾರಣವೆಂದರೆ, ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸುವ ಸಾಧ್ಯತೆಗಳು.

ಬಡ್ಡಿದರ ಹೆಚ್ಚಳವಾದರೆ ಚಿನ್ನದ ಮೇಲಿನ ಹೂಡಿಕೆ ಲಾಭದಾಯಕವಾಗುವುದಿಲ್ಲ ಎಂಬ ಆತಂಕ ಹೂಡಿಕೆದಾರರಲ್ಲಿದೆ. ಅಲ್ಲದೆ ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಜಾಕ್ಕಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಯ ಮೊದಲ ಹಂತಕ್ಕೆ ಒಪ್ಪಿಗೆ ದೊರೆತಿದೆ. ಇದು ಕದನ ವಿರಾಮ ಮತ್ತು ಒತ್ತೆಯಾಳುಗಳ ವಿನಿಮಯ ಒಪ್ಪಂದವಾಗಿದ್ದು, ಇಸ್ರೇಲ್‌ನ ಎರಡು ವರ್ಷಗಳ ಯುದ್ಧವನ್ನು ಕೊನೆಗೊಳಿಸುವ ಸಾಧ್ಯತೆ ಇದೆ. ಈ ಯುದ್ಧವನ್ನು ವಿಶ್ವಸಂಸ್ಥೆ ಜನಾಂಗೀಯ ಹತ್ಯೆ ಎಂದು ಕರೆದಿದೆ.

“ಇಸ್ರೇಲ್ ಮತ್ತು ಹಮಾಸ್ ನಡುವಿನ ಮೊದಲ ಹಂತದ ಒಪ್ಪಂದದ ಮಹತ್ವವು ಹೂಡಿಕೆದಾರರ ಮೇಲೆ ಪ್ರಭಾವ ಬಿದ್ದು, ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ. ಒಟ್ಟಿನಲ್ಲಿ ಭಾರಿ ಹೆಚ್ಚಳ ಕಂಡಿದ್ದ ಚಿನ್ನದ ಬೆಲೆ ಕೊಂಚ ಇಳಿಕೆ ಆಗುವ ಮೂಲಕ ಚಿನ್ನಾಭರಣ ಪ್ರಿಯರಲ್ಲಿ ತುಸು ಸಮಾಧಾನ ತರಿಸಿದೆ.”

Leave a comment

Leave a Reply

Your email address will not be published. Required fields are marked *

Related Articles

ದಾಖಲೆಯ 17ನೇ ಬಜೆಟ್ ಮಂಡಿಸಲು ಸಿಎಂ ಸಿದ್ದರಾಮಯ್ಯ ತಯಾರಿ

ಬೆಂಗಳೂರು ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮತ್ತೆ ಜೋರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ...

ಫೆಬ್ರವರಿ 1 ಕೇಂದ್ರ ಬಜೆಟ್: ನಿರ್ಮಲಾಸೀತಾರಾಮನ್ ಹಣಕಾಸು ಸಚಿವೆ ಆಗಿ ಸತತವಾಗಿ ಒಂಬತ್ತನೆಯ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡನೆ...

ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ

ಹೊಸದಿಲ್ಲಿ : ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ ಯಾವುದೇ...

ಪ್ರತಿ ಡಾಲರ್ ಗೆ 91.07 ರೂ. ಇದ್ದ ರುಪಾಯಿ ಮೌಲ್ಯ ತ್ವರಿತವಾಗಿ ಚೇತರಿಕೆ

ಮುಂಬೈ : ಸತತ 10 ದಿನಗಳಿಂದ ಇಳಿಕೆಯಾಗಿದ್ದ ರುಪಾಯಿ ಮೌಲ್ಯ ಡಿ. 17ರಂದು ಕೊಂಚ ಏರಿಕೆ....