‘ಕಾಂತಾರ: ಚಾಪ್ಟರ್ 1’ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ

24

ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ದಾಖಲೆ ಕಲೆಕ್ಷನ್ ‘ಕಾಂತಾರ: ಚಾಪ್ಟರ್ 1’ ಸಿನಿಮಾವು ಮೊದಲ ನಾಲ್ಕು ದಿನಗಳಿಗೆ ಗಳಿಸಿದ್ದೆಷ್ಟು ಕೋಟಿ? ಉತ್ತರ ಭಾರತದಲ್ಲಿ ಹೆಚ್ಚಾಯ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಹವಾ ‘ಕಾಂತಾರ: ಚಾಪ್ಟರ್ 1’ ಚಿತ್ರದ ಮೊದಲ ವಾರಾಂತ್ಯದ ಕಲೆಕ್ಷನ್ ರಿಪೋರ್ಟ್ ಔಟ್; ವಿಶ್ವಾದ್ಯಂತ ದಾಖಲೆ ಪ್ರಮಾಣದ ಗಳಿಕೆ! ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ಕಾಂಬಿನೇಷನ್‌ನ ‘ಕಾಂತಾರ: ಚಾಪ್ಟರ್ 1’ ಸಿನಿಮಾವು ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ದಿನ ಕಳೆದಂತೆ, ಕಲೆಕ್ಷನ್‌ನಲ್ಲಿ ಏರಿಕೆ ಕಂಡು ಬಂದಿದೆ. ಈಗಾಗಲೇ ಈ ಚಿತ್ರದ ಗಳಿಕೆ 300 ಕೋಟಿ ರೂ. ದಾಟಿದೆ. ಈ ವರ್ಷ ಕನ್ನಡ ಯಾವ ಸಿನಿಮಾವೂ ಮಾಡಿರದಂತಹ ಸಾಧನೆಯನ್ನು ‘ಕಾಂತಾರ: ಚಾಪ್ಟರ್ 1’ ಮಾಡಿದೆ. ಅಲ್ಲದೇ, ಭಾರತ ವಿವಿಧ ಭಾಷೆಗಳ ಪ್ಯಾನ್ ಇಂಡಿಯಾ ಸಿನಿಮಾಗಳ ದಾಖಲೆ ಕೂಡ ಛಿದ್ರವಾಗಿದೆ. ಹಾಗಾದರೆ, ಈವರೆಗೂ ಆಗಿರುವ ಗಳಿಕೆ ಎಷ್ಟು?

ನಾಲ್ಕು ದಿನಗಳಿಗೆ 335 ಕೋಟಿ ರೂಪಾಯಿ ಗಳಿಕೆ ಮೂಲಗಳ ಪ್ರಕಾರ, ‘ಕಾಂತಾರ: ಚಾಪ್ಟರ್ 1’ ಸಿನಿಮಾವು ಮೊದಲ ನಾಲ್ಕು ದಿನಗಳಿಗೆ 335 ಕೋಟಿ ರೂ.ಗಳನ್ನು ವಿಶ್ವಾದ್ಯಂತ ಬಾಚಿಕೊಂಡಿದೆ. ಅಕ್ಟೋಬರ್ 2ರ ಗಾಂಧಿ ಜಯಂತಿ ರಜಾ ದಿನದಂದು ಈ ಸಿನಿಮಾ ತೆರೆಕಂಡಿತ್ತು. ನಂತರ ವೀಕೆಂಡ್‌ ರಜೆಗಳನ್ನು ಕೂಡ ಸರಿಯಾಗಿ ಬಳಕೆ ಮಾಡಿಕೊಂಡಿದೆ. ಲಾಂಗ್ ವೀಕೆಂಡ್ ಇದ್ದಿದ್ದರಿಂದ ಉತ್ತಮವಾದ ಕಲೆಕ್ಷನ್ ಆಗಿದೆ.  

ಕರ್ನಾಟಕದಲ್ಲಿ ಮೊದಲ ನಾಲ್ಕು ದಿನಗಳಿಗೆ ಭಾರಿ ಮೊತ್ತದ ಕಲೆಕ್ಷನ್ ಆಗಿದೆ. ಈವರೆಗೂ ಸುಮಾರು 65+ ಕೋಟಿ ರೂ. ಹಣ ಕರ್ನಾಟಕದಿಂದಲೇ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಸಿಕ್ಕಿದೆ. ನಿನ್ನೆ ಭಾನುವಾರ (ಅ.5) ಒಂದೇ ದಿನ 16 ಕೋಟಿ ರೂ. ವರೆಗೂ ಗಳಿಕೆ ಆಗಿರುವ ಮಾಹಿತಿ ಇದೆ. ಇದರ ಜೊತೆಗೆ ತೆಲುಗು ವರ್ಷನ್‌ಗೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಈವರೆಗೂ ತೆಲುಗು ವರ್ಷನ್‌ನಿಂದ 47 ಕೋಟಿ ರೂ. ಹರಿದುಬಂದಿದ್ದು, ‘ಕಾಂತಾರ: ಚಾಪ್ಟರ್ 1’ ತಮಿಳು ವರ್ಷನ್‌ ಕಲೆಕ್ಷನ್ ಕೂಡ ಚೇತರಿಕೆ ಕಂಡಿದೆ. ಅಲ್ಲಿಂದ ಸುಮಾರು 22+ ಕೋಟಿ ರೂ. ಹಣ ನಾಲ್ಕು ದಿನಗಳಲ್ಲಿ ಆಗಿದೆ.

ಹಿಂದಿ ವರ್ಷನ್‌ಗೆ ಭರ್ಜರಿ ರೆಸ್ಪಾನ್ಸ್ ಉತ್ತರ ಭಾರತದಲ್ಲಿ ಅಂದುಕೊಂಡಮಟ್ಟಕ್ಕೆ ‘ಕಾಂತಾರ: ಚಾಪ್ಟರ್ 1’ ರೀಚ್ ಆಗುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಅದೀಗ ಸುಳ್ಳಾಗಿದೆ. ನಾಲ್ಕನೇ ದಿನ ಅತೀ ಹೆಚ್ಚು ಮೊತ್ತವನ್ನು ‘ಕಾಂತಾರ: ಚಾಪ್ಟರ್ 1’ ಹಿಂದಿ ವರ್ಷನ್ ಪಡೆದುಕೊಂಡಿದೆ. ಬರೀ ಭಾರತದಲ್ಲಿ ಈ ಚಿತ್ರದ ಹಿಂದಿ ವರ್ಷನ್‌ಗೆ 75 ಕೋಟಿ ರೂ. ಹಣ ಸಿಕ್ಕಿದೆ.

ಮೊದಲ ದಿನ – 18.50 ಕೋಟಿ ರೂಪಾಯಿ ಎರಡನೇ ದಿನ – 13.50 ಕೋಟಿ ರೂಪಾಯಿ ಮೂರನೇ ದಿನ – 20 ಕೋಟಿ ರೂಪಾಯಿ ಮೂರನೇ ದಿನ – 23 ಕೋಟಿ ರೂಪಾಯಿ (ಕಾಂತಾರ: ಚಾಪ್ಟರ್ 1 ಹಿಂದಿ ವರ್ಷನ್‌ನ ನಾಲ್ಕು ದಿನಗಳ ಭಾರತದಲ್ಲಿನ ಗಳಿಕೆ) ‘ಕಾಂತಾರ’ ಬಳಿಕ ರಿಷಬ್ ಶೆಟ್ಟಿ ಅವರು ಮತ್ತೊಮ್ಮೆ ‘ಕಾಂತಾರ: ಚಾಪ್ಟರ್ 1’ ಮೂಲಕ ತಮ್ಮ ಹವಾ ಏನೆಂಬುದನ್ನ ತೋರಿಸಿಕೊಟ್ಟಿದ್ದಾರೆ. ವಿವಿಧ ಭಾಷೆಯ ಸಿನಿ ಗಣ್ಯರು ಈ ಚಿತ್ರವನ್ನು ಮನಸಾರೆ ಹೊಗಳುತ್ತಿದ್ದಾರೆ.”

Leave a comment

Leave a Reply

Your email address will not be published. Required fields are marked *

Related Articles

ಕಾಂತಾರ ಚಾಪ್ಟರ್ ಒನ್ ಎಲ್ಲಾ ಕಡೆ ಪಾಸಿಟಿವ್ ರಿವಿವ್ ಬರುತ್ತಿದ್ದು  –  ಚೀನಾ ದೇಶಕ್ಕೆ ರಿಷಬ್ ಶೆಟ್ಟಿ ಧನ್ಯವಾದ ಹೇಳಬೇಕು

ಎಲ್ಲಾ ಭಾಷೆಯಲ್ಲಿ ಭರ್ಜರಿ ಗಳಿಕೆಯಿಂದ ಮುನ್ನುಗ್ಗುತ್ತಿರುವ ಕಾಂತಾರ ಚಾಪ್ಟರ್ ಒನ್ ವಿಶ್ವವನ್ನೇ ಕಾಡಿದ್ದ ಕೊರೊನಾ ಸಂದರ್ಭದಲ್ಲಿ...

ಕೆಲ ಅಭಿಮಾನಿಗಳ ಅತಿರೇಕದ ವರ್ತನೆ ತುಳುವರ ಕೆಂಗಣ್ಣಿಗೆ ಗುರಿ ‘ಕಾಂತಾರ ಚಾಪ್ಟರ್ 1’ ಪ್ರೇಕ್ಷಕರಲ್ಲಿ ಮನವಿ

ಬೆಂಗಳೂರು: ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ‘ಕಾಂತಾರ ಚಾಪ್ಟರ್ 1’...

ಮಲಯಾಳಂ ನಟ ಮೋಹನ್ ಲಾಲ್ ಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ

ನವದೆಹಲಿ: 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನವದೆಹಲಿಯಲ್ಲಿ ನಡೆದಿದ್ದು ಮಲಯಾಳಂ ಚಿತ್ರರಂಗದ ದಂತಕಥೆ...

ಟೈಲರ್ ಕನ್ನಯ್ಯ ಲಾಲ್ ಹತ್ಯೆ ಕಥಾಹಂದರ ಇರುವ ಉದಯಪುರ ಫೈಲ್ಸ್’ ಚಿತ್ರ ಬಿಡುಗಡೆಗೆ ಹೈಕೋರ್ಟ್ ತಡೆ

ನೋಪುಲ್ ಶರ್ಮ ಹೇಳಿಕೆ ನಂತರ ಅಮಾಯಕ ದರ್ಜಿ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ಕಥಾಹಂದರ ಇರುವ...