ಕಾಂತಾರ ಚಾಪ್ಟರ್ ಒನ್ ಎಲ್ಲಾ ಕಡೆ ಪಾಸಿಟಿವ್ ರಿವಿವ್ ಬರುತ್ತಿದ್ದು  –  ಚೀನಾ ದೇಶಕ್ಕೆ ರಿಷಬ್ ಶೆಟ್ಟಿ ಧನ್ಯವಾದ ಹೇಳಬೇಕು

42

ಎಲ್ಲಾ ಭಾಷೆಯಲ್ಲಿ ಭರ್ಜರಿ ಗಳಿಕೆಯಿಂದ ಮುನ್ನುಗ್ಗುತ್ತಿರುವ ಕಾಂತಾರ ಚಾಪ್ಟರ್ ಒನ್ ವಿಶ್ವವನ್ನೇ ಕಾಡಿದ್ದ ಕೊರೊನಾ ಸಂದರ್ಭದಲ್ಲಿ ಹುಟ್ಟಿದ್ದ ಕಥೆಯೇ ಕಾಂತಾರ ಸಿನಿಮಾ ತಮಿಳು ಪ್ರೇಕ್ಷಕರಿಂದ ಭಾರೀ ಹೊಗಳಿಕೆ, ತಮಿಳಿನಲ್ಲೂ ಇಂತಹ ಸಿನಿಮಾ ಬರಲಿ ಎನ್ನುವ ರಿವಿವ್ ಅಸಲಿಗೆ, ರಿಷಬ್ ಶೆಟ್ಟಿ ಚೀನಾ ದೇಶಕ್ಕೆ ಥ್ಯಾಂಕ್ಸ್ ಹೇಳಬೇಕು ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಚಾಪ್ಟರ್ ಒನ್ ಸಿನಿಮಾ, ಬಾಕ್ಸಾಫೀಸ್ ನಲ್ಲಿ ತನ್ನ ಭರ್ಜರಿ ಪ್ರದರ್ಶನವನ್ನು ಮುಂದುವರಿಸಿದೆ.

ವೀಕ್ ಡೇ ಆಗಿದ್ದರೂ, ಗಳಿಕೆಯಲ್ಲಿ ಹೆಚ್ಚಿನ ಏರುಪೇರಾಗದೇ ಇರುವುದರಿಂದ, ಎರಡನೇ ವಾರಾಂತ್ಯಕ್ಕೆ ಕೋಟ್ಯಾಂತರ ರೂಪಾಯಿ ಕಮಾಯಿಸುವ ಸಾಧ್ಯತೆಯಿದೆ. ಮೌತ್ ಪಬ್ಲಿಸಿಟಿ ಚಿತ್ರದ ಯಶಸ್ಸಿಗೆ ಸಾಥ್ ಅನ್ನು ನೀಡುತ್ತಿದೆ. ಪ್ರಮುಖವಾಗಿ, ತಮಿಳುನಾಡು, ಕೇರಳ, ಮಲಯಾಳಂ ಮತ್ತು ಹಿಂದಿ ಭಾಷಿಗರ ರಾಜ್ಯದಲ್ಲಿ ಚಿತ್ರಕ್ಕೆ ಸಿಗುತ್ತಿರುವ ಬಹುದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಇದೇ.

ಎಲ್ಲಾ ಕಡೆ ಪಾಸಿಟಿವ್ ರಿವಿವ್ ಬರುತ್ತಿರುವುದು ಒಂದು ಕಡೆ, ಚಿತ್ರ ನೋಡಿ ಹೊರಬರುವ ಪ್ರೇಕ್ಷಕ, ಕುಟುಂಬ ಸಮೇತ, ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದು ಶಿಫಾರಸು ಮಾಡುತ್ತಿದ್ದಾನೆ. ಮುಂಬೈನ ಸಿನಿಮಾ ವಿತರಕರ ಪ್ರಕಾರ, ಎರಡನೇ ವಾರಾಂತ್ಯದಲ್ಲಿ ಚಿತ್ರ ವೀಕ್ಷಿಸಲು ಜನಸಾಗರವೇ ಹರಿದು ಬರಬಹುದು.   

ಕಾಂತಾರ ಚಾಪ್ಟರ್ ಒನ್ ಸಿನಿಮಾ ನೋಡಿದ ಕೆಲವು ತಮಿಳು ಪ್ರೇಕ್ಷಕರು, ಚಿತ್ರತಂಡ ಚೀನಾ ದೇಶಕ್ಕೆ ಧನ್ಯವಾದ ತಿಳಿಸಬೇಕೆಂದು ಹೇಳುತ್ತಿದ್ದಾರೆ. ಯಾಕೆಂದರೆ, ರಿಷಬ್ ಶೆಟ್ಟಿಯವರೇ ಈ ಸಿನಿಮಾದ ಕಥೆ ಹುಟ್ಟಿದ್ದೇ ಕೋವಿಡ್ ಅವಧಿಯಲ್ಲಿ ಎಂದು ಬಹಳಷ್ಟು ವೇದಿಕೆಯಲ್ಲಿ ಹೇಳಿದ್ದರು. ಚಿತ್ರ ನೋಡಿ ದೈವಿಕ ಭಾವನೆ ಮತ್ತು ಗೂಸ್ ಬಂಪ್ಸ್ ನಿಂದ ಹೊರಬಂದ ತಮಿಳು ಪ್ರೇಕ್ಷಕ ವಿಮರ್ಶೆ ಮಾಡಿದ್ದು ಹೀಗೆ. ” ಇಂತಹ ಸಿನಿಮಾ ತಮಿಳಿನಲ್ಲಿ ಬಂದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ.

ಆದರೂ, ದಕ್ಷಿಣ ಭಾರತದಿಂದ ಕಾಂತಾರ ಎನ್ನುವ ಅದ್ಭುತ ಸಿನಿಮಾ ಬಂದಿರುವುದು ನಮಗೆಲ್ಲರಿಗೂ ಖುಷಿ ಕೊಡುವ ವಿಚಾರ. ನನ್ನ ಪ್ರಕಾರ, ಇಡೀ ಕಾಂತಾರ ಚಿತ್ರತಂಡ, ಚೀನಾ ದೇಶಕ್ಕೆ ಧನ್ಯವಾದ ಹೇಳಬೇಕು” ಎನ್ನುವ ಕುತೂಹಲಕಾರಿ ರಿವಿವ್ ಅನ್ನು ಮಾಡಿದ್ದಾರೆ. ಯಾಕೆ ಚೀನಾ ದೇಶಕ್ಕೆ ರಿಷಬ್ ಶೆಟ್ಟಿ ಧನ್ಯವಾದ ಹೇಳಬೇಕು ಎನ್ನುವುದಕ್ಕೆ ಅವರು ಕೊಟ್ಟ ಕಾರಣವೂ ಸರಿಯಾಗಿದೆ ಅನಿಸುತ್ತೆ. ಯಾಕೆಂದರೆ, ರಿಷಬ್ ಬಹಳಷ್ಟು ಬಾರಿ, ಕಾಂತಾರ ಸಿನಿಮಾದ ಕಥೆ ಮತ್ತು ಐಡಿಯಾ ಬಂದಿದ್ದೇ ವಿಶ್ವವನ್ನೇ ಕಾಡಿದ ಕೋವಿಡ್ ಮತ್ತು ಲಾಕ್ಡೌನ್ ವೇಳೆ.

ಇದನ್ನು, ಬಹಳಷ್ಟು ಬಾರಿ ಸಂದರ್ಶನದಲ್ಲಿ ಮತ್ತು ವೇದಿಕೆಯಲ್ಲಿ ರಿಷಬ್ ಹೇಳಿದ್ದಾರೆ ಕೂಡಾ.. ತಮಿಳು ಪ್ರೇಕ್ಷಕನ ಪ್ರಕಾರ, ವಿಶ್ವಕ್ಕೆ ಕೋವಿಡ್ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದ್ದದ್ದು ಚೀನಾ ದೇಶ ಅಲ್ಲವೇ, ಆ ದೇಶದಿಂದಾಗಿ ಲಾಕ್ಡೌನ್ ಆಯಿತ್ತಲ್ಲವೇ. ಹಾಗಾಗಿ, ಯಾರೂ ಮನೆಬಿಟ್ಟು ಹೋಗಲಾರದ ಪರಿಸ್ಥಿತಿ ಇತ್ತಲ್ಲವೇ, ಹಾಗಾಗಿ, ರಿಷಬ್ ಶೆಟ್ಟಿಗೆ ಇಂತಹ ಅದ್ಭುತ ಕಥೆಯನ್ನು ಬರೆಯಲು ಸಾಧ್ಯವಾಯಿತು ಎನ್ನುವುದು, ತಮಿಳು ಪ್ರೇಕ್ಷಕನ ಅಭಿಪ್ರಾಯವಾಗಿತ್ತು. ಕೋವಿಡ್ ಎನ್ನುವ ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನೇ ಕಾಡಿತ್ತು.

ಅದೆಷ್ಟೋ ಜನರು ಕೆಲಸವನ್ನು ಕಳೆದುಕೊಂಡಿದ್ದರು. ಊರಿಗೆ ಹೋದವರು ವಾಪಸ್ ಬರಲು ಸಾಧ್ಯವಾಗಲಿಲ್ಲ. ಲಾಕ್ಡೌನ್ ಘೋಷಣೆಯ ಹಿನ್ನಲೆಯಲ್ಲಿ, ಮನೆಯಿಂದ ಹೊರಬರಲು ಒಂದೆರಡು ಗಂಟೆ ಮಾತ್ರ ರಿಲ್ಯಾಕ್ಸ್ ಟೈಮ್ ಇರುತ್ತಿತ್ತು. ಖಿನ್ನತೆಗೆ ಜಾರಿದವರು ಅದೆಷ್ಟೋ ಜನ. ಇದೇ ರೀತಿಯ ಪರಿಸ್ಥಿತಿ ನನಗೂ ಬರುವ ಸಾಧ್ಯತೆಯಿತ್ತು ಎಂದು ರಿಷಬ್ ಶೆಟ್ಟಿ ಹೇಳಿದ್ದರು.

Rishab Shetty: ‘ಕಾಂತಾರ’ಗೆ ಸಿಕ್ತು ಭರ್ಜರಿ ರೆಸ್ಪಾನ್ಸ್; ಥಿಯೇಟರ್ ಮುಂದೆ ಕುಣಿದು ಕುಪ್ಪಳಿಸಿದ ರಿಷಬ್ ಶೆಟ್ಟಿ ಪರ್ಮನೆಂಟ್ ಆಗಿ ಊರಲ್ಲಿ (ಉಡುಪಿ ಜಿಲ್ಲೆ, ಕುಂದಾಪುರದ ಕೆರಾಡಿ) ಸೆಟ್ಲ್ ಆಗಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು ರಿಷಬ್ ನಿರ್ಧರಿಸಿದ್ದರು. ನನ್ನ ನಿರ್ಧಾರವನ್ನು ಗೆಳೆಯರಿಗೆ ಹೇಳಿದಾಗ, ಅವರು ಹಾಸ್ಯ ಮಾಡಲು ಆರಂಭಿಸಿದರು. ಆ ವೇಳೆ, ಕೇವಲ 24 ಜನರೊಂದಿಗೆ ಹೀರೋ ಎನ್ನುವ ಸಿನಿಮಾವನ್ನು ತೆಗೆದಿದ್ದೆ. ಆ ವೇಳೆಯೇ, ಕಾಂತಾರ ಸಿನಿಮಾದ ಆಲೋಚನೆ ನನ್ನಲ್ಲಿ ಬಂದಿದ್ದು ಎಂದು ರಿಷಬ್ ಶೆಟ್ಟಿ ಹೇಳಿದ್ದರು.

ಕಂಬಳ, ಜಾನಪದ ಕಲೆ, ದೈವ ಮತ್ತು ಕರಾವಳಿ ಜನರ ಧಾರ್ಮಿಕ ನಂಬಿಕೆಯ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಿದೆ. ಸಂಪೂರ್ಣವಾಗಿ, ನಗರದಿಂದ ಹೊರಗುಳಿದು, ಗ್ರಾಮೀಣ ಭಾಗದಲ್ಲಿ ನೆಲೆಸುವಂತಾಯಿತು ಎಂದು ರಿಷಬ್ ತನ್ನ ಅನುಭವವನ್ನು ಹಂಚಿಕೊಂಡಿದ್ದರು. ಹಾಗಾಗಿ, ತಮಿಳು ಪ್ರೇಕ್ಷಕರೊಬ್ಬರು ಇದನ್ನು ಉಲ್ಲೇಖಿಸಿ, ಚೀನಾ ದೇಶಕ್ಕೆ, ಕಾಂತಾರ ತಂಡ ಧನ್ಯವಾದವನ್ನು ಹೇಳಬೇಕೆಂದು ಹೇಳಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಕೊಡಗು, ಬೀದರ್, ಬಳ್ಳಾರಿ, ಚಿತ್ರದುರ್ಗ ಮತ್ತು ಮೈಸೂರು ಸೇರಿದಂತೆ ರಾಜ್ಯದ ಎಂಟು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭ್ರಷ್ಟ ಅಧಿಕಾರಿಗೆ...

ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆ ಯ ಚಿಂತೆ ಬಿಟ್ಟು ಐಪಿಎಲ್ ಪಂದ್ಯಾಟದ ಉಚಿತ ಟಿಕೆಟ್ ಗೆ ಮುಗಿಬಿದ್ದ ರಾಜ್ಯದ 221 ಶಾಸಕರು

ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್  ಟೂರ್ನಿಯ 11ನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ...

ದಾವಣಗೆರೆ ಉಪ ಚುನಾವಣೆ ಯಾರಿಗೆ ಟಿಕೆಟ್ ಕೊಟ್ಟರೂ ನಾಯಕರಿಂದ ಒಟ್ಟಾಗಿ ಕೆಲಸ ಮಾಡುವ ಭರವಸೆ:: ಡಿಕೆ ಶಿವಕುಮಾರ್

ಬೆಂಗಳೂರು: ಉಪಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಒಮ್ಮತದಿಂದ ಕೆಲಸ ಮಾಡುವುದಾಗಿ ಸಚಿವ ಎಸ್ ಎಸ್...

ಮದುವೆಯಾಗಬೇಕಿದ್ದ ಬಾಲಕಿಯ ಎದೆ ಭಾಗ ಕತ್ತರಿಸಿ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಭಾವಿ ಪತಿ ಸೈಯದ್

ಬೆಂಗಳೂರು: ತನ್ನನ್ನು  ಮದುವೆಯಾಗಬೇಕಿದ್ದ ಬಾಲಕಿಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಭಾವಿ ಪತಿಯೇ ಬರ್ಬರವಾಗಿ...