
ಮೋಹನ್ ಲಾಲ್ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬಂದಾಗ ಸಭಾಂಗಣದಲ್ಲಿ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರು. 
ಇದೇ ಕಾರ್ಯಕ್ರಮದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದರು. ಶಾರುಖ್ ಖಾನ್ “ಜವಾನ್” ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಇದು ಅವರ 33 ವರ್ಷಗಳ ಚಲನಚಿತ್ರ ವೃತ್ತಿಜೀವನದ ಒಂದು ಹೆಗ್ಗುರುತು ಕ್ಷಣವಾಗಿದೆ. ನಟ ಶಾರುಖ್ ಖಾನ್ ಹಾಗೂ 12th ಫೇಲ್ ಚಿತ್ರಕ್ಕೆ ವಿಕ್ರಾಂತ್ ಮಾಸ್ಸಿ ಇಬ್ಬರು ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರೆ, ಶ್ರೀಮತಿ ಚಟರ್ಜಿ vs ನಾರ್ವೆ ಚಿತ್ರದಲ್ಲಿನ ಮನಮೋಹಕ ಅಭಿನಯಕ್ಕಾಗಿ ನಟಿ ರಾಣಿ ಮುಖರ್ಜಿ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದರು. 
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ: ಅತ್ಯುತ್ತಮ ನಿರ್ದೇಶಕ: ಸುದೀಪ್ತೋ ಸೇನ್ –The Kerala Story ಅತ್ಯುತ್ತಮ ಚಲನಚಿತ್ರ: 12th Fail ಭಾಷಾ ವಿಭಾಗದ ಅತ್ಯುತ್ತಮ ಕನ್ನಡ ಚಿತ್ರ: ‘ಕಂದೀಲು–ದ ರೇ ಆಫ್ ಹೋಪ್'”
Leave a comment