ಅರಕಲಗೂಡಿನ ಸೇವಂತಿಗೆ ರಾಜ್ಯಾದ್ಯದಂತ ಭಾರಿ ಬೇಡಿಕೆ

22

ನೆರೆರಾಜ್ಯಗಳಿಂದಲೂ ಸೇವಂತಿಗೆ ಹೆಚ್ಚಿದ ಬೇಡಿಕೆ ಅರಕಲಗೂಡು ರೈತರ ಆರ್ಥಿಕ ಬದುಕು ಚೈತನ್ಯ ರೈತರಿಂದಲೇ ನೇರ ಸೇವಂತಿ ಖರೀದಿ ಮಾಡುತ್ತಿರುವ ವ್ಯಾಪಾರಿಗಳು ಹಾಸನದ ಸೇವಂತಿಗೆ ಡಿಮ್ಯಾಂಡ್‌ ಹೆಚ್ಚಳ

ಅರಕಲಗೂಡು: ಅತಿವೃಷ್ಟಿ ಹಾಗೂ ಅನಾವೃಷ್ಟಿ ನಡುವೆ ತಾಲೂಕಿನ ಸೇವಂತಿಗೆಗೆ ಭಾರಿ ಬೇಡಿಕೆ ಬಂದಿದ್ದು, ರಾಜ್ಯ ಹಾಗೂ ದೇವರನಾಡು ಕೇರಳ, ತಮಿಳುನಾಡಿನಲ್ಲೂ ಹೂವಿನ ಪರಿಮಳ ಬೀರುತ್ತಿದ್ದು, ಹೂವಿನ ವಹಿವಾಟು ಕೋಟಿ ರೂ.ದಾಟಿದೆ. ಕಷ್ಟಪಟ್ಟು ಬೆಳೆದ ರೈತರಿಗೂ ಆರ್ಥಿಕವಾಗಿಯೂ ಚೈತನ್ಯ ನೀಡಿದೆ. ಅರಕಲಗೂಡು ಸುತ್ತಮುತ್ತ ಸೇವಂತಿಗೆ ಹೂ ಬೆಳೆ ಬೆಳೆಯುವವರ ಸಂಖ್ಯೆ ಅಕವಾಗಿದೆ. ಆದರೆ ಈ ಬಾರಿ ಹೂವಿಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಎಲ್ಲಬೆಳೆಗಳಂತೆ ಇಲ್ಲಿಹೂವಿನ ಮಾರಾಟದಲ್ಲೂಮಧ್ಯವರ್ತಿಗಳಿದ್ದಾರೆ. ಅವರ ಬೇಡಿಕೆಗೆ ಅನುಗುಣವಾಗಿ ಹೂ ಮಾರಾಟವಾಗುತ್ತಿದೆ.

ಅಕ್ಕಪಕ್ಕದ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಮಂಗಳೂರು ಜಿಲ್ಲೆಗಳಿಂದ ಅಲ್ಲಿನ ವ್ಯಾಪಾರಿಗಳೇ ಬಂದು ನೇರ ರೈತರಿಂದ ಖರೀದಿಸಿ ತಮ್ಮ ವಾಹನಗಳಲ್ಲೇ ತೆಗೆದುಕೊಂಡು ಹೋಗುವ ಪರಿಪಾಠವಿದೆ. ಓಣಂ ವೇಳೆ ಇಲ್ಲಿನ ಹೂವಿನ ವ್ಯಾಪಾರಿಗಳು ಕೇರಳಕ್ಕೆ ಹೋಗಿ ವ್ಯಾಪಾರ ಮಾಡಿ ಬರುತ್ತಾರೆ. ನವರಾತ್ರಿಯಲ್ಲಿಉಡುಪಿ, ಮಂಗಳೂರು, ಕೊಡಗು ಜಿಲ್ಲೆಗಳಿಗೆ ಅಕ ಹೂವು ಸಾಗಣೆಯಾಗುತ್ತದೆ.

ಚೆಂಡು ಹೂವಿಗೂ ಬೇಡಿಕೆ ಗಣಪತಿ ಹಬ್ಬದಿಂದ ದೀಪಾವಳಿ ಹಬ್ಬದವರೆಗೆ ಸೇವಂತಿಗೆ ಹೂವಿನ ವ್ಯಾಪಾರ ಇಲ್ಲಿ ಪ್ರಮುಖ. ಈ ವ್ಯಾಪಾರ ಹಿಂದಿನಿಂದಲೂ ನಡೆದು ಬಂದಿತ್ತಾದರೂ ಇತ್ತೀಚಿನ ವರ್ಷಗಳಲ್ಲಿಚೆಂಡು ಹೂವು ವ್ಯಾಪಾರವೂ ಪ್ರಮುಖ ಪಾತ್ರ ವಹಿಸುತ್ತಿದೆ. ಎಕರೆಗಟ್ಟಲೆ ಚೆಂಡು ಹೂವು ಬೆಳೆಯುತ್ತಿದ್ದಾರೆ. ಪ್ರತಿ ಕೆಜಿ ಚೆಂಡು ಹೂವಿಗೆ 60 ರೂ. ನೀಡಿ ಸ್ಥಳದಲ್ಲೇ ಖರೀದಿಸುತ್ತಿದ್ದಾರೆ. ಇದರಿಂದ ಬೆಳೆಗಾರರಿಗೆ ಉತ್ತಮ ಬೆಲೆ ಸಿಕ್ಕಂತಾಗುತ್ತಿದೆ. ಇನ್ನು ಆ ಹೂವನ್ನು ಮಾಲೆ ಮಾಡಿ ರಾತ್ರಿ ಮಾರುಕಟ್ಟೆಗೆ ಬರುವ ವೇಳೆಗೆ ಕನಿಷ್ಠ 250ರಿಂದ 300 ರೂ.ಗಳಿಗೆ ಒಂದು ಕುಚ್ಚು ಮಾರಾಟಕ್ಕೆ ದೊರಕುತ್ತದೆ. ಅಂದರೆ 5 ಮಾರಿಗೆ ಒಂದು ಕುಚ್ಚು.

ಇದೇ ಹೂವಿನ ಒಂದು ಕುಚ್ಚು ಬೆಳಕು ಹರಿದರೆ 450ರಿಂದ 500 ರೂ.ಗಳಿಗೆ ಮಾರಾಟವಾಗುತ್ತಿದೆ. ಅದೇ ರೀತಿ ಕಳೆದ ಬಾರಿ ನವರಾತ್ರಿ ವೇಳೆಗೆ ಹೋಲ್‌ಸೇಲ್‌ ದರವೇ ಒಂದು ಮಾರಿಗೆ 120-130 ರೂ.ಗೆ ಮಾರಾಟವಾಗಿತ್ತು. ಆಯುಧ ಪೂಜೆ ಹಿಂದಿನ ದಿನ ಸೇವಂತಿಗೆ ಹೂವಿನ ಬೆಲೆ 150 ರೂ.ಗಳನ್ನು ದಾಟಿತ್ತು. ಅದೇನೇ ಇರಲಿ. ಇಂದು ಹೂವಿನ ವ್ಯಾಪಾರ ಒಂದು ದೊಡ್ಡ ವಹಿವಾಟು ಹೊಂದಿದೆ ಎಂದರೆ ತಪ್ಪಿಲ್ಲ. ಅರಕಲಗೂಡಿನ ಹೂ ಮಾರಾಟ ಸಂತೆಯಲ್ಲಿಸುಮಾರು ಅರ್ಧ ಕೋಟಿಗೂ ಅಕ ವ್ಯವಹಾರ ನಡೆದಿತ್ತು ಎಂದರೆ ಅತಿಶಯೋಕ್ತಿಯೇನೂ ಅಲ್ಲ.

(ತೋಟಗಳಳಲ್ಲೇ ಸಾಯುತ್ತಿದೆ ಸೇವಂತಿ ಬೆಳೆ) ಚಿತ್ರದುರ್ಗ: ಮೂರು ಎಕರೆಯಲ್ಲಿ ಸೇವಂತಿ ಹೂವು, ತಿಂಗಳಿಗೆ 30-40 ಸಾವಿರ ರೂ. ಆದಾಯ ಬೆಲೆ, ಕಡಿಮೆ ಮಳೆ ಇದ್ರು ನಷ್ಟವಾಗಿಲ್ಲ ತಾಲೂಕಿನಲ್ಲಿ ಸುಮಾರು 280 ಹೆಕ್ಟೇರ್‌ ಪ್ರದೇಶದಲ್ಲಿಸೇವಂತಿಗೆ ಬೆಳೆಯಲಾಗುತ್ತದೆ. ಚೆಂಡು ಹೂವನ್ನು ಸುಮಾರು 20ರಿಂದ 25 ಹೆಕ್ಟೇರ್‌ ಪ್ರದೇಶದಲ್ಲಿಬೆಳೆಯಲಾಗುತ್ತದೆ. ಅದೇ ರೀತಿ ಕಾಕಡ ಹೂವನ್ನು ಸುಮಾರು 40 ಹೆಕ್ಟೇರ್‌ ಪ್ರದೇಶದಲ್ಲಿಬೆಳೆಯಲಾಗುತ್ತಿದೆ.

ಪ್ರಸಕ್ತ ಹೂವಿನ ಕೃಷಿಗೆ ಸಬ್ಸಿಡಿ ನೀಡಲಾಗುತ್ತಿದೆಯಾದರೂ ಕೇವಲ 5-10 ಹೆಕ್ಟೇರ್‌ ಪ್ರದೇಶದಲ್ಲಿಬೆಳೆದ ಬೆಳೆಗಾರರಿಗೆ ಮಾತ್ರ ಕೊಡಲು ಸಾಧ್ಯವಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಹಾಯಕ ನಿರ್ದೇಶಕರಾದ ರಾಜೇಶ್‌ ಹೇಳಿದರು. ಕಳೆದ ವರ್ಷಕ್ಕಿಂತ ಈ ವರ್ಷ ನವರಾತ್ರಿಯಲ್ಲಿ ಸೇವಂತಿಗೆ ಹೂವಿನ ಬೆಲೆ ಕಡಿಮೆಯಾಗಿದೆ. ಅದಕ್ಕೆ ಅಕಾಲಿಕ ಮಳೆ ಆದದ್ದು ಒಂದು ಕಾರಣವಾದರೆ. ಈ ಬಾರಿ ಅಕ ಪ್ರಮಾಣದಲ್ಲಿ ಹೂವು ಬೆಳೆದಿರುವುದೂ ಕಾರಣ. ಆದರೂ ಬೆಳೆಗಾರರಿಗೆ ನಷ್ಟವೇನೂ ಆಗಿಲ್ಲ ಎಂದು ಹೂವಿನ ಸಗಟು ವ್ಯಾಪಾರಿ ಅನಿಲ್‌ರಾಜ್‌ ಹೇಳಿದರು. ಲೇಖಕರ ಬಗ್ಗೆ”

Leave a comment

Leave a Reply

Your email address will not be published. Required fields are marked *

Related Articles

ಫೆಬ್ರವರಿ 1 ಕೇಂದ್ರ ಬಜೆಟ್: ನಿರ್ಮಲಾಸೀತಾರಾಮನ್ ಹಣಕಾಸು ಸಚಿವೆ ಆಗಿ ಸತತವಾಗಿ ಒಂಬತ್ತನೆಯ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡನೆ...

ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ

ಹೊಸದಿಲ್ಲಿ : ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ ಯಾವುದೇ...

ಪ್ರತಿ ಡಾಲರ್ ಗೆ 91.07 ರೂ. ಇದ್ದ ರುಪಾಯಿ ಮೌಲ್ಯ ತ್ವರಿತವಾಗಿ ಚೇತರಿಕೆ

ಮುಂಬೈ : ಸತತ 10 ದಿನಗಳಿಂದ ಇಳಿಕೆಯಾಗಿದ್ದ ರುಪಾಯಿ ಮೌಲ್ಯ ಡಿ. 17ರಂದು ಕೊಂಚ ಏರಿಕೆ....

 ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಮಾತನಾಡುವಂತೆ ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು

ಬೆಂಗಳೂರು:  ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು ಮಲ್ಲೇಶ್ವರಂ ಪೊಲೀಸರಿಂದ ಸ್ವಯಂಪ್ರೇರಿತ...