ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಜೊತೆ 62,370 ಕೋಟಿ ರೂಪಾಯಿಗಳ ಬೃಹತ್ ಒಪ್ಪಂದ

31

97 ತೇಜಸ್ ಯುದ್ಧ ವಿಮಾನ ಖರೀದಿಗೆ ಎಚ್‌ಎಎಲ್‌ ಜೊತೆ ಬರೋಬ್ಬರಿ ₹62,370 ಕೋಟಿ ಒಪ್ಪಂದ ರಕ್ಷಣಾ ಸಚಿವಾಲಯವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಜೊತೆ 62,370 ಕೋಟಿ ರೂಪಾಯಿಗಳ ಒಪ್ಪಂದವನ್ನು ಮಾಡಿಕೊಂಡಿದೆ. ಇದು 97 ತೇಜಸ್ ಎಂಕೆ-1ಎ ಲಘು ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದ್ದು, ಈ ಒಪ್ಪಂದವು ‘ಆತ್ಮನಿರ್ಭರ ಭಾರತ’ ಯೋಜನೆಗೆ ಉತ್ತೇಜನ ನೀಡಲಿದೆ. 2027-28ರಲ್ಲಿ ವಿಮಾನಗಳ ವಿತರಣೆ ಪ್ರಾರಂಭವಾಗಲಿದ್ದು, ಈ ಯೋಜನೆಯಿಂದ ದೇಶದಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದು ದೇಶದ ರಕ್ಷಣಾ ಸಾಮರ್ಥ್ಯವನ್ನು ಸಹ ಹೆಚ್ಚಿಸಲಿದೆ.

ಭಾರತೀಯ ವಾಯುಪಡೆಯನ್ನು ಮತ್ತಷ್ಟು ಬಲಪಡಿಸಲು ರಕ್ಷಣಾ ಸಚಿವಾಲಯದಿಂದ ಬೃಹತ್ ಒಪ್ಪಂದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಜೊತೆ 62,370 ಕೋಟಿ ರೂಪಾಯಿಗಳ ಬೃಹತ್ ಒಪ್ಪಂದಕ್ಕೆ ಸಹಿ ಈ ಒಪ್ಪಂದದ ಅಡಿಯಲ್ಲಿ 97 ಸುಧಾರಿತ ತೇಜಸ್ ಎಂಕೆ-1ಎ ಲಘು ಯುದ್ಧ ವಿಮಾನಗಳ ಖರೀದಿ 68 ಏಕ ಆಸನದ ಮತ್ತು 29 ಎರಡು ಆಸನದ ತರಬೇತಿ ಜೆಟ್‌ಗಳನ್ನು ಖರೀದಿಸಲಿದೆ ರಕ್ಷಣಾ ಇಲಾಖೆ ವಾಯುಪಡೆಗೆ ತೇಜಸ್‌ ಯುದ್ಧ ವಿಮಾನ ಖರೀದಿಗೆ ರಕ್ಷಣಾ ಇಲಾಖೆ ಎಚ್‌ಎಎಲ್‌ ಜೊತೆ ಒಪ್ಪಂದ ಮಾಡಿಕೊಂಡಿದೆ.

ಭಾರತೀಯ ವಾಯುಪಡೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯವು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ಜೊತೆಗೆ 97 ಸುಧಾರಿತ ತೇಜಸ್ ಎಂಕೆ-1ಎ ಲಘು ಯುದ್ಧ ವಿಮಾನಗಳ (ಎಲ್‌ಸಿಎ) ಖರೀದಿಗಾಗಿ ಒಪ್ಪಂದ ಮಾಡಿಕೊಂಡಿದೆ. 62,370 ಕೋಟಿ ರೂಪಾಯಿಗಳ ಬೃಹತ್ ಒಪ್ಪಂದ ಇದಾಗಿದ್ದು, ಈ ಒಪ್ಪಂದವು ಸರ್ಕಾರದ ‘ಆತ್ಮನಿರ್ಭರ ಭಾರತ’ ಯೋಜನೆಗೆ ದೊಡ್ಡ ಉತ್ತೇಜನ ನೀಡಲಿದೆ. ದೇಶೀಯ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು ಕೂಡ ಆಗಲಿದೆ.

ಈ ಬೃಹತ್ ಒಪ್ಪಂದದ ಅಡಿಯಲ್ಲಿ 68 ಏಕ ಆಸನದ (ಸಿಂಗಲ್-ಸೀಟ್) ಫೈಟರ್ ಜೆಟ್‌ಗಳು ಮತ್ತು 29 ಎರಡು ಆಸನದ (ಟ್ವಿನ್ ಸೀಟರ್) ತರಬೇತಿ ಜೆಟ್‌ಗಳನ್ನು ವಾಯುಪಡೆಗೆ ಖರೀದಿಸಲಾಗುತ್ತಿದೆ.

ಇದರ ಜೊತೆ ಜೊತೆಗೆ ವಿಮಾನಗಳಿಗೆ ಬೇಕಾದ ಇತರ ಸಂಬಂಧಿತ ಉಪಕರಣಗಳು ಸಹ ಒಪ್ಪಂದದ ಭಾಗವಾಗಿವೆ. ತಾಳ್ಮೆಯಿಂದ ಇರೋ ಕಾಲ ಮುಗಿತು! ನಿಮ್ಗೆ ಆಗಿಲ್ಲ ಅಂದ್ರೇ ಭರವಸೆ ಏಕೆ ಕೊಡ್ತೀರಿ? ವಾಯುಪಡೆ ಮುಖ್ಯಸ್ಥ ಎಪಿ ಸಿಂಗ್‌ ತೀವ್ರ ಆಕ್ರೋಶ ಇದುವರೆಗೆ ಸ್ವದೇಶಿ ತೇಜಸ್ ವಿಮಾನಗಳಿಗಾಗಿ ಮಾಡಿಕೊಂಡ ಅತಿದೊಡ್ಡ ಒಪ್ಪಂದವು ಇದಾಗಿದೆ.

ಈ ಹಿಂದೆ 2021ರ ಜನವರಿಯಲ್ಲಿ 46,898 ಕೋಟಿ ರೂ. ವೆಚ್ಚದಲ್ಲಿ 83 ತೇಜಸ್ ಎಂಕೆ-1ಎ ಜೆಟ್‌ಗಳಿಗಾಗಿ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಏನು ಈ ಯುದ್ಧ ವಿಮಾನಗಳ ವಿಶೇಷತೆ? ಈ ಹೊಸ ಜೆಟ್‌ಗಳ ವಿಶೇಷತೆಯೆಂದರೆ, ಇದರಲ್ಲಿ ಶೇ. 64ಕ್ಕಿಂತಲೂ ಹೆಚ್ಚು ದೇಶೀಯ ನಿರ್ಮಿತ ಉಪಕರಣಗಳನ್ನು ಬಳಸಲಾಗುತ್ತಿದೆ. ಹಿಂದಿನ ಒಪ್ಪಂದಕ್ಕೆ ಹೋಲಿಸಿದರೆ, ಇದರಲ್ಲಿ 67 ಹೆಚ್ಚುವರಿ ಸ್ವದೇಶಿ ಉಪಕರಣಗಳನ್ನು ಕೂಡ ಅಳವಡಿಸಲಾಗುತ್ತಿದೆ. ಅತ್ಯಾಧುನಿಕ ‘ಉತ್ತಮ್’ ಆಕ್ಟಿವ್ ಎಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ (ಎಇಎಸ್‌ಎ) ರಾಡಾರ್, ‘ಸ್ವಯಂ ರಕ್ಷಾ ಕವಚ’ ಎಂಬ ಎಲೆಕ್ಟ್ರಾನಿಕ್ ವಾರ್‌ಫೇರ್ ಸಿಸ್ಟಮ್, ಮತ್ತು ದೇಶೀಯವಾಗಿ ಅಭಿವೃದ್ಧಿಪಡಿಸಿದ ಕಂಟ್ರೋಲ್ ಸರ್ಫೇಸ್ ಆಕ್ಚುಯೇಟರ್‌ಗಳಂತಹ ಪ್ರಮುಖ ತಂತ್ರಜ್ಞಾನಗಳನ್ನು ಇದರಲ್ಲಿ ಅಳವಡಿಸಲಾಗಿದೆ.

ಇದು ವಿಮಾನದ ಯುದ್ಧ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಿದೆ. ಈ ಯೋಜನೆ ದೇಶದ ಆರ್ಥಿಕತೆಗೂ ಚೈತನ್ಯ ನೀಡಲಿದೆ. ಸುಮಾರು 105 ಭಾರತೀಯ ಕಂಪನಿಗಳು ಈ ವಿಮಾನಗಳ ಬಿಡಿಭಾಗಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದು, ಇದರಿಂದಾಗಿ ಮುಂದಿನ ಆರು ವರ್ಷಗಳ ಅವಧಿಯಲ್ಲಿ ವಾರ್ಷಿಕವಾಗಿ ಸುಮಾರು 11,750 ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಒಪ್ಪಂದದ ಪ್ರಕಾರ, ವಿಮಾನಗಳ ವಿತರಣೆಯು 2027-28ರಲ್ಲಿ ಪ್ರಾರಂಭವಾಗಿ ಆರು ವರ್ಷಗಳ ಒಳಗೆ ಪೂರ್ಣಗೊಳ್ಳಲಿದೆ.

ಈ ಖರೀದಿಯು ರಕ್ಷಣಾ ಸ್ವಾಧೀನ ಕಾರ್ಯವಿಧಾನ 2020ರ ‘ಬೈ (ಇಂಡಿಯಾ-ಐಡಿಡಿಎಂ)’ ವರ್ಗದ ಅಡಿಯಲ್ಲಿ ಬರುವುದರಿಂದ, ಇದು ಭಾರತೀಯ ವಾಯುಪಡೆಯ ಕಾರ್ಯಾಚರಣೆಯ ಸನ್ನದ್ಧತೆಯನ್ನು ಬಲಪಡಿಸಲಿದೆ. ಅಲ್ಲದೆ ದೇಶೀಯ ರಕ್ಷಣಾ ಉದ್ಯಮದ ಬೆಳವಣಿಗೆಗೂ ಸಹಕಾರಿ ಆಗಲಿದೆ.”

Leave a comment

Leave a Reply

Your email address will not be published. Required fields are marked *

Related Articles

ಫೆಬ್ರವರಿ 1 ಕೇಂದ್ರ ಬಜೆಟ್: ನಿರ್ಮಲಾಸೀತಾರಾಮನ್ ಹಣಕಾಸು ಸಚಿವೆ ಆಗಿ ಸತತವಾಗಿ ಒಂಬತ್ತನೆಯ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡನೆ...

ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ

ಹೊಸದಿಲ್ಲಿ : ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ ಯಾವುದೇ...

ಪ್ರತಿ ಡಾಲರ್ ಗೆ 91.07 ರೂ. ಇದ್ದ ರುಪಾಯಿ ಮೌಲ್ಯ ತ್ವರಿತವಾಗಿ ಚೇತರಿಕೆ

ಮುಂಬೈ : ಸತತ 10 ದಿನಗಳಿಂದ ಇಳಿಕೆಯಾಗಿದ್ದ ರುಪಾಯಿ ಮೌಲ್ಯ ಡಿ. 17ರಂದು ಕೊಂಚ ಏರಿಕೆ....

 ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಮಾತನಾಡುವಂತೆ ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು

ಬೆಂಗಳೂರು:  ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು ಮಲ್ಲೇಶ್ವರಂ ಪೊಲೀಸರಿಂದ ಸ್ವಯಂಪ್ರೇರಿತ...