“ಕರ್ನಾಟಕಕ್ಕೆ ಒಳ್ಳೆದಾಗಬೇಕೆಂದು ಕಾವೇರಿ ಆರತಿ ಮಾಡ್ತಿದ್ದೇವೆ, ರೈತರ ವಿರೋಧವಿಲ್ಲ: ಡಿಕೆ ಶಿವಕುಮಾರ್ ಶ್ರೀ ರಂಗಪಟ್ಟಣ ದಸರಾ ಹಿನ್ನೆಲೆ ಕೆಆರ್‌ಎಸ್‌ನಲ್ಲಿ ಸೆ. 26ರಿಂದ ಆರಂಭಗೊಂಡು ಸೆ. 30ರವರೆಗೆ ಕಾವೇರಿ ಆರತಿ ನಡೆಯಲಿದೆ. 5 ದಿನ ಕಾವೇರಿ ಆರತಿ ಜತೆಗೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಗಂಗಾ ಆರತಿಯಂತೆ ನಡೆಯುವ ಕಾವೇರಿ ಆರತಿ ವೀಕ್ಷಿಸಲು ದೇಶ ಮತ್ತು ರಾಜ್ಯದ ಹಲವು ಕಡೆಗಳಿಂದ ಜನರು ಬರುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಕಾರ್ಯಕ್ರಮಕ್ಕೆ ಬರುವವರಿಗೆ ಸಿಹಿವಿತರಣೆಯ ವ್ಯವಸ್ಥೆಯೂ ಇರಲಿದೆ

ಕಾವೇರಿ ಆರತಿ ಸ್ಥಳ ವಿಕ್ಷಣೆಗೆ ಹೊರಟ ಡಿಸಿಎಂ ಡಿಕೆ ಶಿವಕುಮಾರ್ ಸೆ. 26ರಿಂದ ಸೆ. 30ರವರೆಗೆ ಐದು ದಿನ ನಡೆಯಲಿರುವ ಕಾವೇರಿ ಆರತಿ ಕಾವೇರಿ ಆರತಿ ವೀಕ್ಷಣೆಗೆ ಬರುವವರಿಗೆ ಲಾಡು ವಿತರಣೆ ವ್ಯವಸ್ಥೆ ಗಂಗಾ ಆರತಿ ಮಾದರಿಯಲ್ಲಿ ದಸರಾ ಸಂದರ್ಭದಲ್ಲಿ ಕಾವೇರಿ ಆರತಿ ಮೈಸೂರು: ʻಕರ್ನಾಟಕಕ್ಕೆ ಒಳ್ಳೆಯದಾಗಲಿ ಎಂದು ಕಾವೇರಿ ಆರತಿ ಮಾಡುತ್ತಿದ್ದೇವೆ. ಅದರ ಸ್ಥಳ ವಿಕ್ಷಣೇಗೆ ಹೋಗುತ್ತಿದ್ದೇನೆ.
ಕಾವೇರಿ ಆರತಿಗೆ ಯಾವ ರೈತರ ವಿರೋಧವೂ ಇಲ್ಲ. ಪೂಜೆ ಮಾಡಿದರೆ ರೈತರು ಯಾಕೆ ವಿರೋಧ ಮಾಡುತ್ತಾರೇʼ ಎಂದು ಮೈಸೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.”

Leave a comment