ಉದ್ಯೋಗಿಗಳಿಗೆ EPFOದಿಂದ ಗುಡ್ ನ್ಯೂಸ್, ‘ಪಾಸ್‌ಬುಕ್ ಲೈಟ್’ ಸೇವೆ ಆರಂಭ! ಏನಿದು? ಹೊಸ ಬದಲಾವಣೆಗಳೇನು? ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು ತನ್ನ ಸದಸ್ಯರಿಗೆ ‘ಪಾಸ್‌ಬುಕ್ ಲೈಟ್’ ಸೌಲಭ್ಯ ಮತ್ತು ಸುಲಭ ಪಿಎಫ್ ವರ್ಗಾವಣೆ ಪ್ರಕ್ರಿಯೆ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ಪರಿಚಯಿಸಿದೆ. ಪಾಸ್‌ಬುಕ್ ಲೈಟ್ ಮೂಲಕ ಪಿಎಫ್ ಖಾತೆ ಸಾರಾಂಶವನ್ನು ತ್ವರಿತವಾಗಿ ವೀಕ್ಷಿಸಬಹುದಾಗಿದೆ ಅಲ್ಲದೆ ಉದ್ಯೋಗ ಬದಲಾಯಿಸುವಾಗ ಪಿಎಫ್ ವರ್ಗಾವಣೆಯನ್ನು ಸುಲಭವಾಗಿ ಮಾಡಬಹುದು. ಇದಲ್ಲದೆ ಕ್ಲೇಮ್ ಇತ್ಯರ್ಥ ಪ್ರಕ್ರಿಯೆಯನ್ನೂ ಸರಳಗೊಳಿಸಲಾಗಿದೆ.

ಹಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ‘ಪಾಸ್‌ಬುಕ್ ಲೈಟ್’ ಎಂಬ ಹೊಸ ಸೇವೆ ಆರಂಭ, ಪಿಎಫ್ ಖಾತೆಯ ಸಾರಾಂಶವನ್ನು ತ್ವರಿತವಾಗಿ ವೀಕ್ಷಿಸಲು ಅನುಕೂಲ ಉದ್ಯೋಗ ಬದಲಾಯಿಸುವಾಗ ಸರಳವಾಗಿ ಪಿಎಫ್ ಖಾತೆ ವರ್ಗಾವಣೆಗೆ ಕ್ರಮ ಪಿಎಫ್ ಸಾರಾಂಶವನ್ನು ಸುಲಭವಾಗಿ ನೋಡಲು ಪಾಸ್‌ಬುಕ್ ಲೈಟ್ ಸೇವೆಯನ್ನು ಇಪಿಎಫ್‌ಒ ಜಾರಿಗೆ ತಂದಿದೆ.(ಗ್ಯಾಲರಿ- Agencies) ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ತನ್ನ ಸದಸ್ಯರಿಗೆ ಹಲವು ಹೊಸ ಸೌಲಭ್ಯಗಳನ್ನು ಪರಿಚಯಿಸಿದೆ.

ಉದ್ಯೋಗಿಗಳ ನಿವೃತ್ತಿ ನಿಧಿಯನ್ನು ನಿರ್ವಹಿಸುವ ಸಂಸ್ಥೆಯು ಇಪಿಎಫ್‌ಒ 3.0 ಸುಧಾರಣೆಗಳ ಅಡಿಯಲ್ಲಿ, ‘ಪಾಸ್‌ಬುಕ್ ಲೈಟ್’ ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಅಲ್ಲದೆ ಉದ್ಯೋಗ ಬದಲಾಯಿಸುವಾಗ ಪಿಎಫ್ ಖಾತೆಯನ್ನು ವರ್ಗಾವಣೆ ಮಾಡುವ ಸರಳೀಕೃತ ವಿಧಾನವನ್ನು ಜಾರಿಗೆ ತಂದಿದೆ. ಏನಿದು ಪಾಸ್‌ಬುಕ್ ಲೈಟ್? ಈ ಹೊಸ ಸೌಲಭ್ಯವು ಇಪಿಎಫ್‌ಒ ಸದಸ್ಯರಿಗೆ ತಮ್ಮ ಪಿಎಫ್ ಖಾತೆಯ ಸಾರಾಂಶ ವನ್ನು ತ್ವರಿತವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಇದರ ಮೂಲಕ, ಸದಸ್ಯರು ತಮ್ಮ ಕೊಡುಗೆಗಳು, ಹಿಂಪಡೆದ ಮೊತ್ತ ಮತ್ತು ಪ್ರಸ್ತುತ ಬ್ಯಾಲೆನ್ಸ್ ಅನ್ನು ಸುಲಭವಾಗಿ ನೋಡಬಹುದಾಗಿದೆ. ಇದಕ್ಕಾಗಿ ಪಾಸ್‌ಬುಕ್ ಪೋರ್ಟಲ್‌ಗೆ ಪ್ರತ್ಯೇಕವಾಗಿ ಲಾಗಿನ್ ಆಗುವ ಅಗತ್ಯ ಇಲ್ಲ.”

Leave a comment