ಕಂಬಳವನ್ನು ರಾಜ್ಯ ಕ್ರೀಡೆಯಾಗಿ ಅಧಿಕೃತವಾಗಿ ಪ್ರಕಟಿಸಲು ಸಿದ್ಧವಾದ  ರಾಜ್ಯ ಸರಕಾರ  

33

“ಕಂಬಳಕ್ಕೆ ರಾಜ್ಯ ಕ್ರೀಡೆ ಸ್ಥಾನಮಾನ : ಸರಕಾರದಿಂದ ಶೀಘ್ರ ಅಧಿಕೃತ ಪ್ರಕಟಣೆ, ತಿಂಗಳೊಳಗೆ ಅಸೋಸಿಯೇಷನ್ ಅಸ್ತಿತ್ವಕ್ಕೆ ರಾಜ್ಯ ಸರ್ಕಾರವು ಕಂಬಳವನ್ನು ರಾಜ್ಯ ಕ್ರೀಡೆಯಾಗಿ ಅಧಿಕೃತವಾಗಿ ಘೋಷಿಸಲು ತ ಇದು ಕಂಬಳ ಕ್ರೀಡೆಗೆ ಒಂದು ಮಹತ್ವದ ಮೈಲಿಗಲ್ಲಾಗಲಿದೆ. ಇದರೊಂದಿಗೆ, ಕಂಬಳ ಅಸೋಸಿಯೇಶನ್ ರಚನೆಯಾಗಿದ್ದು, ಕಂಬಳ ಸಮಿತಿ ಅಧ್ಯಕ್ಷರೇ ಇದರ ಅಧ್ಯಕ್ಷರಾಗಿರುತ್ತಾರೆ. ಈ ಕ್ರಮವು ಕಂಬಳಕ್ಕೆ ಹೆಚ್ಚಿನ ಪ್ರೋತ್ಸಾಹ, ಅನುದಾನ ಮತ್ತು ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ರಾಜ್ಯದ ಕ್ರೀಡಾ ಪ್ರಾಧಿಕಾರದಿಂದ ಉಳಿದ ಕ್ರೀಡೆಗಳಿಗೆ ಸಿಗುವ ಸೌಲಭ್ಯಗಳು ಕಂಬಳ ಕ್ರೀಡೆಗೂ ಅನ್ವಯವಾಗಲಿದೆ. ಹೆಚ್ಚಿನ ಪ್ರೋತ್ಸಾಹ ಧನ, ವಿಶೇಷ ಅನುದಾನ, ಓಟಗಾರರು, ಕೋಣದ ಮಾಲೀಕರು, ಇತರರಿಗೆ ಸೌಲಭ್ಯ ದೊರೆಯಲಿದೆ ರಾಜ್ಯ ಸರಕಾರವೇ ಕಂಬಳ ಅಸೋಸಿಯೇಶನ್‌ಗೆ ಬೈಲಾ ಸಿದ್ಧಪಡಿಸುತ್ತಿದೆ. 

ಮಂಗಳೂರು: ರಾಜ್ಯ ಸರಕಾರ ಕರುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಕ್ರೀಡೆಯಾಗಿ ಮಾನ್ಯತೆ ನೀಡಲು ನಿರ್ಧರಿಸಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಈ ಮೂಲಕ ಕಂಬಳ ಕ್ರೀಡೆಗೆ ಮತ್ತೊಂದು ಹಂತದ ಯಶಸ್ಸು ಸಿಗಲಿದೆ. ಕಂಬಳ ಕ್ರೀಡೆಗೆ ರಾಜ್ಯ ಸರಕಾರಕ್ಕೆ ಅಧಿಕೃತ ಮಾನ್ಯತೆ ಘೋಷಣೆಯಾದರೆ ರಾಜ್ಯದ ಕ್ರೀಡಾ ಪ್ರಾಧಿಕಾರದಿಂದ ಉಳಿದ ಕ್ರೀಡೆಗಳಿಗೆ ಸಿಗುವ ಸೌಲಭ್ಯಗಳು ಕಂಬಳ ಕ್ರೀಡೆಗೂ ಅನ್ವಯವಾಗಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಬಳಕ್ಕೆ ರಾಜ್ಯ ಕ್ರೀಡೆ ಮಾನ್ಯತೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.”

Leave a comment

Leave a Reply

Your email address will not be published. Required fields are marked *

Related Articles

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿರುವ ಪಾಕಿಸ್ತಾನಕ್ಕೆ ಐಸಿಸಿ ಎಚ್ಚರಿಕೆ ಬಾಲ ಮುದುರಿಕೊಂಡ ಪಾಕಿಸ್ತಾನ

ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿರುವ ಮಾತುಗಳನ್ನಾಡುತ್ತಿದ್ದ ಪಾಕಿಸ್ತಾನದ ಬಾಲ ಮುದುರಿಕೊಂಡಂತೆ...

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಿಕ ಪಂದ್ಯದಲ್ಲೇ ಭಾರತ ತಂಡಕ್ಕೆ ಭರ್ಜರಿ ಜಯದೊಂದಿಗೆ  ಟೂರ್ನಿಯಲ್ಲಿ ಶುಭಾರಂಭ

“ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಭಾರತ ತಂಡ ಭರ್ಜರಿ ಜಯ ಸಾಧಿಸುವ...

6ನೇ ಬಾರಿಗೆಅಂಡರ್ 19 ವರ್ಲ್ಡ್ ಕಪ್ ಗೆದ್ದ ಭಾರತೀಯ ಯುವ ತಂಡ

ಐಸಿಸಿ ಅಂಡರ್-19 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಭಾರತ ದಾಖಲೆಯ...

ಸತತ ಎರಡನೇ ಬಾರಿ ಮಹಿಳಾ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು

“ವಡೋದರಾದಲ್ಲಿ ನಡೆದ ಡಬ್ಲ್ಯುಪಿಎಲ್ 2026 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ತಂಡದ ವಿರುದ್ಧ...