ಸೆಪ್ಟೆಂಬರ್ 22ರಿಂದ ಮದರ್ ಡೈರಿ ಉತ್ಪನ್ನಗಳ ಬೆಲೆ ಇಳಿಕೆ 

28

ಕಸಟ್ಟಾ ಐಸ್ ಕ್ರೀಮ್, ಉಪ್ಪಿನಕಾಯಿ, ಟೊಮೇಟೊ ಪ್ಯೂರಿ ಮತ್ತು ಸಫಲ್ ಫ್ರೋಜನ್ ಫ್ರೆಂಚ್ ಫ್ರೈಸ್ ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆಗಳು ಸಹ ಕಡಿಮೆಯಾಗಲಿವೆ. 

ನವದೆಹಲಿ: ಜಿಎಸ್‌ಟಿ ದರ ಕಡಿತದ ಶೇ 100 ರಷ್ಟು ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಮದರ್ ಡೈರಿ ಮಂಗಳವಾರ ತಿಳಿಸಿದೆ. ಮೌಲ್ಯವರ್ಧಿತ ಡೈರಿ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಆಹಾರಗಳು (ಸಫಲ್ ಬ್ರಾಂಡ್ ಅಡಿಯಲ್ಲಿ) ಸೇರಿದಂತೆ ಅದರ ಹೆಚ್ಚಿನ ಉತ್ಪನ್ನಗಳು ಸೆಪ್ಟೆಂಬರ್ 22 ರಿಂದ ಕಡಿಮೆ ಬೆಲೆಗೆ ಸಿಗಲಿವೆ.

ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಅಂಗಸಂಸ್ಥೆಯಾದ ಮದರ್ ಡೈರಿ, ಪನೀರ್ (200 ಗ್ರಾಂ) ಬೆಲೆ 95 ರೂ.ಗಳಿಂದ 92 ರೂ.ಗಳಿಗೆ, ತುಪ್ಪದ ಕಾರ್ಟನ್ ಪ್ಯಾಕ್ (1 ಲೀಟರ್) ಬೆಲೆ 675 ರೂ.ಗಳಿಂದ 645 ರೂ.ಗಳಿಗೆ ಮತ್ತು 100 ಗ್ರಾಂ ಬೆಣ್ಣೆ 62 ರೂ.ಗಳಿಂದ 58 ರೂ.ಗಳಿಗೆ ಇಳಿಯಲಿದೆ ಎಂದು ತಿಳಿಸಿದೆ. ಅದೇ ರೀತಿ, ಕಸಟ್ಟಾ ಐಸ್ ಕ್ರೀಮ್, ಉಪ್ಪಿನಕಾಯಿ, ಟೊಮೇಟೊ ಪ್ಯೂರಿ ಮತ್ತು ಸಫಲ್ ಫ್ರೋಜನ್ ಫ್ರೆಂಚ್ ಫ್ರೈಸ್ ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆಗಳು ಸಹ ಕಡಿಮೆಯಾಗಲಿವೆ.

‘ಇತ್ತೀಚಿನ ಜಿಎಸ್‌ಟಿ ಕಡಿತವು ವಿವಿಧ ಶ್ರೇಣಿಯ ಡೈರಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ಮೇಲಿನ ಬಳಕೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ಮತ್ತು ಸುರಕ್ಷಿತ, ಉತ್ತಮ ಗುಣಮಟ್ಟದ ಪ್ಯಾಕೇಜ್ ಮಾಡಿದ ಕೊಡುಗೆಗಳ ಅಳವಡಿಕೆಯನ್ನು ವೇಗಗೊಳಿಸುವ ಪ್ರಗತಿಪರ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ’. ‘ಗ್ರಾಹಕ ಕೇಂದ್ರಿತ ಸಂಸ್ಥೆಯಾಗಿ, ಈ ಸುಧಾರಣೆಯ ಸ್ಫೂರ್ತಿಯನ್ನು ಗಮನದಲ್ಲಿಟ್ಟುಕೊಂಡು, ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವಂತೆ ನಾವು ನಮ್ಮ ಗ್ರಾಹಕರಿಗೆ ಶೇ 100 ರಷ್ಟು ತೆರಿಗೆ ಪ್ರಯೋಜನವನ್ನು ವರ್ಗಾಯಿಸುತ್ತಿದ್ದೇವೆ’ ಎಂದು ಮದರ್ ಡೈರಿಯ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಬ್ಯಾಂಡ್ಲಿಷ್ ಹೇಳಿದರು”

Leave a comment

Leave a Reply

Your email address will not be published. Required fields are marked *

Related Articles

ಫೆಬ್ರವರಿ 1 ಕೇಂದ್ರ ಬಜೆಟ್: ನಿರ್ಮಲಾಸೀತಾರಾಮನ್ ಹಣಕಾಸು ಸಚಿವೆ ಆಗಿ ಸತತವಾಗಿ ಒಂಬತ್ತನೆಯ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡನೆ...

ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ

ಹೊಸದಿಲ್ಲಿ : ಸಾಲ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ, ರಿಸರ್ವ್ ಬ್ಯಾಂಕ್ ಕರಡು ಮಾರ್ಗಸೂಚಿ ಪ್ರಕಟ ಯಾವುದೇ...

ಪ್ರತಿ ಡಾಲರ್ ಗೆ 91.07 ರೂ. ಇದ್ದ ರುಪಾಯಿ ಮೌಲ್ಯ ತ್ವರಿತವಾಗಿ ಚೇತರಿಕೆ

ಮುಂಬೈ : ಸತತ 10 ದಿನಗಳಿಂದ ಇಳಿಕೆಯಾಗಿದ್ದ ರುಪಾಯಿ ಮೌಲ್ಯ ಡಿ. 17ರಂದು ಕೊಂಚ ಏರಿಕೆ....

 ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಮಾತನಾಡುವಂತೆ ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು

ಬೆಂಗಳೂರು:  ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ ವೈರಲ್ ವಂಚಕರ ವಿರುದ್ಧ ದೂರು ಮಲ್ಲೇಶ್ವರಂ ಪೊಲೀಸರಿಂದ ಸ್ವಯಂಪ್ರೇರಿತ...