ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ತಹಶೀಲ್ದಾರ್ ಎಸ್ ಎ ಪ್ರಸಾದ್ ಎಂಬವರ ವಿರುದ್ಧ ಹೆಬ್ರಿ ತಹಶೀಲ್ದಾರರಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ದಿನದಿಂದಲೂ ಸಾರ್ವಜನಿಕರೊಂದಿಗೆ ದುರ್ನಾಡತೆಯಿಂದ ವರ್ತಿಸುವುದರ ಬಗ್ಗೆ ಆರೋಪ ಕೇಳಿ ಬರುತ್ತಿತ್ತು ಇದೀಗ ದಲಿತ ಸಂಘರ್ಷ ಸಮಿತಿ ವತಿಯಿಂದ ಅಮಾನತ್ತಿಗಾಗಿ ಪ್ರತಿಭಟನೆ ಹೆಬ್ರಿಯಲ್ಲಿ ನಡೆದಿದೆ ಈ ಸಂದರ್ಭದಲ್ಲಿ ತಹಸೀಲ್ದಾರ್ ಅವರ ಏಜೆಂಟ್ ಸ್ಥಳೀಯ ಪಂಚಾಯತ್ ಮುಖಂಡನೊಬ್ಬ ಹೋರಾಟಗಾರರ ಮನವೊಲಿಸುವ ಪ್ರಯತ್ನಪಡುತ್ತಿರುವ ದೃಶ್ಯ ಕೂಡ ಕಂಡುಬಂದಿದೆ ಎನ್ನುವ ಆರೋಪ ಕೂಡ ಸಂಘಟನೆ ಒಳಗೆ ಕೇಳಿಬಂದಿದೆ

, ಹೆಬ್ರಿ ತಾಲೂಕು, ಅಡಬ್ಬೆಟ್ಟು ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸುಂದರಿ ಕೋಂ ರಾಜು ಮತ್ತು ಬೇಬಿ ಕೋಂ ಸುಂದರ ಈ ಎರಡ ಕುಟುಂಬಗಳು ಆನಂದ ಶೆಟ್ಟಿ ಮತ್ತು ಇವರ 8 ಮಂದಿ ಮಕ್ಕಳಿಗೆ ಸೇರಿದ ಸರ್ವೆ ನಂ. 59/3ರಲ್ಲಿ ಪಾಳು ಬಿದ್ದ ಮನೆಯಲ್ಲಿ ಸುಮಾರು 50 ವರ್ಷಗಳಿಂದಲೂ ಜೀತಪದ್ಧತಿಯಲ್ಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದರು

.ಅವರ ಪಟ್ಟಾ ಜಾಗದಲ್ಲಿ ಪಾಳು ಬಿದ್ದ ಮನೆಯಲ್ಲಿ ಪರಿಶಿಷ್ಟ ಜಾತಿಯ ಎರಡು ಕುಟುಂಬಗಳು ಜೀತ ಪದ್ಧತಿಯಲ್ಲಿ ಬದುಕಲಿದ್ದು ದಿನಾಂಕ : 02-08-2025ರಂದು ನಿರಂತರ ಬಾರಿ ಗಾಳಿ ಮಳೆ ಸುರಿದು ಪಾಳು ಬಿದ್ದ ಮನೆ ಬಿದ್ದು ಇವರಿಗೆ ವಾಸ ಮಾಡಲು ಇಲ್ಲದೇ ನಿರ್ಗತಿಕರಾಗಿದ್ದು, ಮಾನ್ಯ ಹೆಬ್ರಿ ತಾಲೂಕು ತಹಶೀಲ್ದಾರರಾದ ಎಸ್. ಎ. ಪ್ರಸಾದ್ ಇವರು ಭೇಟಿ ನೀಡದೇ ಪುನರ್ವಸತಿ ಮಾಡದೇ ತನ್ನ ಕರ್ತವ್ಯ ಲೋಪದಲ್ಲಿ ಮತ್ತು ನಿರ್ಲಕ್ಷ್ಯತನ ತೋರಿದ್ದಾರೆ.

ಸರ್ಕಾರಿ ನಿಯಮಾವಳಿಯಂತೆ ಜೀತಪದ್ಧತಿಯನ್ನು ಮುಕ್ತಿಗೊಳಿಸಲು ತಕ್ಷಣ 24 ಘಂಟೆಯೊಳಗೆ ಪುನರ್ವಸತಿ ಮಾಡಬೇಕಾಗಿರುವುದು ಜೀತಪದ್ಧತಿ ಕಾಯ್ದೆ 1976 ಕಲಂ 21 ರ ಅಡಿಯಲ್ಲಿ ಮಾಡಬೇಕಾಗಿರುವುದರಿಂದ ಜಿಲ್ಲಾ ಆಡಳಿತ ನಿರ್ಲಕ್ಷ್ಯತನ ಮಾಡಿ ಪರಿಶಿಷ್ಟ ಜಾತಿಯವರಾದ ಸುಂದರಿ ಕೋಂ ರಾಜು ಮತ್ತು ಬೇಬಿ ಕೋಂ ಸುಂದರ ಇವರನ್ನು ಪುನರ್ವಸತಿ ಮಾಡದೇ ಇರುವುದರ ಬಗ್ಗೆ ಹೆಬ್ರಿ ತಹಶೀಲ್ದಾರರಲ್ಲಿ ದಲಿತ ಸಂಘರ್ಷ ಸಮಿತಿ ಸಂಘಟನೆಯು, ದೌರ್ಜನ್ಯ ಕಾಯ್ದೆ 15 ಎ(12)ರಲ್ಲಿ ಮನವಿ ಸಲ್ಲಿಸಲಾಯಿತು.

ಆದರೆ ಮಾನ್ಯ ತಹಶೀಲ್ದಾರರು ಈ ಬಗ್ಗೆ ಪರಿಹಾರ ಮತ್ತು ಪುನರ್ವಸತಿ ಮಾಡದೇ ಇದ್ದಾಗ ಜಿಲ್ಲಾ ಆಡಳಿತಕ್ಕೆ ಮನವಿ ಮಾಡಿಕೊಂಡಿದ್ದು, ಆದರೂ ಜಿಲ್ಲಾ ಆಡಳಿತವು ಸ್ಪಂದನ ಮಾಡದೇ ಗ್ರಾಮ ಪಂಚಾಯತ್ ಹೆಬ್ರಿ ಅವರ ವ್ಯಾಪ್ತಿಯಲ್ಲಿ ಡಾ|| ಬಿ. ಆರ್. ಅಂಬೇಡ್ಕರ ಭವನದಲ್ಲಿ ಸುಮಾರು 43 ದಿನಗಳವರೆಗೆ ಸ್ಪಂದಿಸದೇ ಇರುವುದರಿಂದ ನಮ್ಮ ಸಂಘಟನೆಯು ಇವರಿಗೆ ಸರ್ಕಾರದ 2 ಎಕರೆ ಮಂಜೂರಾತಿ ಮಾಡಿ 2 ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಡಬೇಕು. ಮತ್ತು ಪುನರ್ವಸತಿ ಮಾಡಿಕೊಡಬೇಕಾಗಿ ಮತ್ತು ದುರಂಹಕಾರಿ ತಹಶೀಲ್ದಾರರನ್ನು ಅಮಾನತುಗೊಳಿಸಲು ಸರ್ಕಾರವನ್ನು ಒತ್ತಾಯಿಸಿ ಇಂದು ಹೆಬ್ರಿ ತಹಶೀಲ್ದಾರ್ ಕಚೇರಿ ಮುಂದೆ ಬ್ರಹತ್ ಪ್ರತಿಭಟನೆ ನಡೆಯಿತು ಸ್ಥಳಕ್ಕೆ ಜಿಲ್ಲಾಧಿಕಾರಿಯ ಅಥವಾ ಕುಂದಾಪುರ ವಿಭಾಗಾಧಿಕಾರಿಗಳು ಬಡ ಕುಟುಂಬದ ನೆರವಿಗೆ ನಿಲ್ಲುವಂತೆ ಬೇಡಿಕೆ ಸಲ್ಲಿಸಲಾಯಿತು
Leave a comment