ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

47

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ ಸರಕಾರಿ ಜಮೀನಿನಲ್ಲಿ ಖಾಸಗಿ ಮನೆ ನಿರ್ಮಾಣ ನಡೆಸಿ ಇದೀಗ ಅದಕ್ಕೆ ಬೇಕಾದ ಎಲ್ಲಾ ಅನುಮತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ನೀಡಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ

ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ನವೀನ್ ಪೆರ್ಡೂರ್ ರವರುಉಡುಪಿ ತಹಶೀಲ್ದಾರ್ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಪಿಡಿಓ ಎಲ್ಲರ ಗಮನಕ್ಕೆ ತಂದುರು ಕೂಡ ಯಾವುದೇ ಪ್ರಯೋಜನವಾಗಿಲ್ಲದ ಕಾರಣ ಈಗ ಲೋಕಾಯುಕ್ತ ಹಾಗೂ ಉಡುಪಿ ನ್ಯಾಯಾಲಯದ ಮೊರೆ ಹೋಗುವ ನಿಟ್ಟಿನಲ್ಲಿ ಸಮಾನ ಮನಸ್ಕರೊಂದಿಗೆ ಸೇರಿ ಹೋರಾಟಕ್ಕೆ ಸಿದ್ದರಾಗಿದ್ದಾರೆ

ಉಡುಪಿ ತಾಲೂಕು, ಪೆರ್ಡೂರು ಗ್ರಾಮದ ಅಡಪಾಡಿ ಎಂಬಲ್ಲಿನ ಕೋರೆಮಾರು ರಸ್ತೆಯ ಬದಿಯ ದಿ. ಶುಂಭು ಆಚಾರ್ಯ ಅವರ ಮನೆಯ ಬಳಿ ಸ.ನಂ.254ರ ಹತ್ತಿರ ಯಾರೋ ವ್ಯಕ್ತಿಗಳು ಅನಧಿಕೃತವಾಗಿ ಯಾವುದೇ ಲೈಸನ್ಸ್ ಇನ್ನಿತರ ಅನುಮತಿಗಳನ್ನು ಪಡೆಯದೆ ಸರಕಾರಿ ಜಾಗವನ್ನು ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸುತ್ತಿದ್ದು, ಸದ್ರಿ ಕಟ್ಟಡದ ನಿರ್ಮಾಣ ಕಾರ್ಯವು ಅಂತಿಮ ಹಂತದಲ್ಲಿದೆ

ಸದ್ರಿ ಅಕ್ರಮ ಕಟ್ಟಡ ನಿರ್ಮಾಣದ ಕುರಿತು ಅನುಮಾನವಿದ್ದು, ಸರಿ ಅಕ್ರಮ ಕಟ್ಟಡ ನಿರ್ಮಾಣದ ಕುರಿತು ಕಾನೂನು ಕ್ರಮ ಕೈಗೊಳ್ಳುವುದು ಅವಶ್ಯಕತೆ ಆಗಿರುತ್ತದೆ.

ಆದ್ದರಿಂದ ಸದ್ರಿ ಕಟ್ಟಡದ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವರೇ ಪೆರ್ಡೂರು ಗ್ರಾಮ ಪಂಚಾಯತ್‌ పి.డి.ఓ./గ్రామ ಲೆಕ್ಕಾಧಿಕಾರಿಯವರ ಮೂಲಕ ಸ್ಥಳ ಪರಿಶೀಲಿಸಿ ವರದಿ ಪಡೆದುಕೊಂಡು ದಾಖಲೆ ಪರಿಶೀಲಿಸಿ ತಪ್ಪಿಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದ್ದಾರೆ

Leave a comment

Leave a Reply

Your email address will not be published. Required fields are marked *

Related Articles

ವ್ಯಸನಮುಕ್ತ ಭಾರತ  ವಿದ್ಯಾರ್ಥಿಗಳು ಹಾಗೂ ಯುವಜನತೆಯ ಸಂಕಲ್ಪವಾಗಬೇಕು  : ಮಾಜಿ ನಗರಸಭಾ ಸದಸ್ಯ ಕೆ. ವಿಜಯ ಕೊಡವೂರು

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್...

ಪಕ್ಷ ನಿಷ್ಠೆ ಗುರುತಿಸಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ವಿಶ್ವಾಸ್ ವಿ ಅಮೀನ್ ಪಡುಬಿದ್ರಿ ಮುಂದುವರಿಕೆಗೆ ಆದೇಶ

ಉಡುಪಿ :: ವಿಶ್ವಾಸ್ ವಿ ಅಮೀನ್ ಅವರ ಪಕ್ಷ ನಿಷ್ಠೆಯನ್ನು ಗುರುತಿಸಿದ ಕೆಪಿಸಿಸಿ ಉಡುಪಿ ಜಿಲ್ಲಾ...

ದಿವ್ಯಾಂಗ ರಕ್ಷಣಾ ಸಮಿತಿಯಿಂದ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ ಹಾಗೂ ಆಹಾರ ಕಿಟ್ ವಿತರಣೆ

ಉಡುಪಿ/ಕೋಡವೂರು: ದಿವ್ಯಾಂಗ ರಕ್ಷಣಾ ಸಮಿತಿ (ರಿ.), ಕೋಡವೂರು ಹಾಗೂ MCKS ಫುಡ್ ಫಾರ್ ದಿ ಹಂಗ್ರಿ...

ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಕಿರುಕುಳ ವಿರುದ್ಧ ಜಿಲ್ಲಾಧ್ಯಂತ ಹೋರಾಟ ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲಾ ಸಂಯೋಜಕ ರಾಜೇಶ್ ಉಚ್ಚಿಲ

80ನೇ ಸ್ವಾತಂತ್ರ್ಯ ದಿನೋತ್ಸವದ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನಲ್ಲಿ ಆಯೋಜನೆಗೊಂಡಿದ್ದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮಕ್ಕೆ...