ಸರಕಾರಿ ಸ್ಥಳದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮೂವರ ವಿರುದ್ಧ  ಕಲ್ಲು ಕಳವು ಪ್ರಕರಣ ದಾಖಲು

81

ನಂದಳಿಕೆ ಸರಕಾರಿ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿ ಸಮುದ್ರಕ್ಕೆ ಕಲ್ಲು ಸಾಗಿಸುತ್ತಿದ್ದ ಮೂವರ ವಿರುದ್ಧ  ಪ್ರಕರಣ ದಾಖಲು ಅಕ್ರಮ ಕಲ್ಲು ಸಾಗಾಟಕ್ಕೆ ಬಳಸಿದ್ದ ಎರಡು ಟಿಪ್ಪರ್ ಒಂದು ಹಿಟಾಚಿ ವಶಕ್ಕೆ ಪಡೆದುಕೊಂಡ ಕಾರ್ಕಳ ಗ್ರಾಮಾಂತರ ಪೊಲೀಸರು 

26/07/2025 ರಂದು ಸುಂದರ, ಪಿಎಸ್‌ಐ ರವರು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಟಿಪ್ಪರ್ ನಂಬ್ರ KA-20 AA-3566 ರ ಚಾಲಕನು ದೊಡ್ಡ ಕಲ್ಲುಗಳನ್ನು ಲೋಡ್ ಮಾಡಿಕೊಂಡು ಬರುತ್ತಿದ್ದು ಸದ್ರಿ ಚಾಲಕನಲ್ಲಿ ಕಲ್ಲು ಸಾಗಾಟ ಮಾಡಲು ಪರವಾನಿಗೆ ಬಗ್ಗೆ ಕೇಳಿದಾಗ ಅದು ದಿನೇಶ ಶೆಟ್ಟಿ ಬೆಳ್ಮಣ್  ಯವರ ಬಳಿ ಇದೆ

ಕಲ್ಲುಗಳನ್ನು ಉಲ್ಲಾಳದ ಕಡಲ್ಕೊರೆತ ಸ್ಥಳಕ್ಕೆ ಹಾಕಲು ಹೋಗುತ್ತಿರುವುದಾಗಿ ತಿಳಿಸಿದ್ದು ಚಾಲಕನನ್ನು ಜೊತೆಯಲ್ಲಿ ಕರೆದುಕೊಂಡು ಕಲ್ಲು ಲೋಡ್ ಮಾಡಿದ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ನಂದಳಿಕೆ ಗ್ರಾಮದ ಬಾರೆಜಡ್ಡು ಎಂಬಲ್ಲಿ ಸರಕಾರಿ ಸ್ಥಳದಲ್ಲಿ  ಹಿಟಾಚಿ ಸಹಾಯದಿಂದ ಅದರ ನಿರ್ವಾಹಕನು KA-20 AA-2787 ಟಿಪ್ಪರ್‌ಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಲೋಡ್ ಮಾಡಲು ನಿಲ್ಲಿಸಿದ್ದು

ಅದರ ಮುಂದೆ KA-20 AA-2786 ಟಿಪ್ಪರ್ ಲಾರಿಯಲ್ಲಿ ಕಲ್ಲುಗಳನ್ನು ಲೋಡ್ ಮಾಡಿಕೊಂಡು ಹೊರಡಲು ಸಜ್ಜಾಗಿದ್ದು ಅಪಾದಿತರಾದ ದಿನೇಶ್, ಶೆಟ್ಟಿ ಬೆಳ್ಮಣ್   ಗಿರೀಶ ಕಾಪು ಮತ್ತು ಕಿಶೋರ್ ಗುರ್ಮೆ ಎಂಬವರು ಯಾವುದೇ ಪರವಾನಿಗೆ ಹೊಂದದೇ ನಂದಳಿಕೆ  ಸರಕಾರಿ ಸ್ಥಳದಿಂದ ಶಿಲೆಕಲ್ಲುಗಳನ್ನು ಕಳವು ಮಾಡಿ ಹಿಟಾಚಿ ಮೂಲಕ ಲೋಡ್ ಮಾಡಿಸಿ ಸಾಗಾಟ ಮಾಡಲು ಲೋಡ್ ಮಾಡಿಸುತ್ತಿದ್ದು,

ಟಿಪ್ಪರ್ ಮತ್ತು ಅದರಲ್ಲಿರುವ 7500/ ರೂ ಮೌಲ್ಯದ 2 ಲೋಡ್ ದೊಡ್ಡ ಶಿಲೆ ಕಲ್ಲುಗಳನ್ನು, ಮತ್ತು ಹಿಟಾಚಿ ವಾಹನವನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Leave a comment

Leave a Reply

Your email address will not be published. Required fields are marked *

Related Articles

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...

ಲೈಂಗಿಕ ದೌರ್ಜನ್ಯ ಆರೋಪ ಮೂಡಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಬಿಜಿ ಅಮಾನತು

ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದ್ದು,...

ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಸಿದ್ಧ ರಂಗೋಲಿ ಕಲಾವಿದೆ ಶ್ರೀಮತಿ ವಿಶಾಲ ಮಹೇಶ್ ರವರಿಗೆ ಸನ್ಮಾನ

ಬ್ರಹ್ಮಾವರ : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಜರಗಿದ ಸರಳ...