ಮಹಿಳೆಗೆ ಜಾತಿನಿಂದನೆ ಚೇರ್ಕಾಡಿ ಪಂಚಾಯತ್ ಪಿಡಿಓ ವಿರುದ್ಧ ಪ್ರಕರಣ ದಾಖಲು

79
ಚೇರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 2 ವರ್ಷಗಳ ಕೆಳಗೆ ಅವೈಜ್ಞಾನಿಕವಾಗಿ ಕಾಂಕ್ರೀಟ್‌ ರಸ್ತೆ ಮಾಡಿದ್ದರಿಂದ ಮಳೆಗಾಲದಲ್ಲಿ ಮೇಲ್ಭಾಗದ ಚರಂಡಿ ಹಾಗೂ ರಸ್ತೆ ನೀರು ನುಗ್ಗಿ ಅವಾಂತರ ಪ್ರಶ್ನಿಸಿದ ಮಹಿಳೆ ಮೇಲೆಚೇರ್ಕಾಡಿ ಪಿಡಿಓ ಸುಭಾಸ್  ಜಾತಿ ನಿಂದನೆ ಗೈದ ಬಗ್ಗೆ  ಪ್ರಕರಣ ದಾಖಲಾಗಿದೆ

ಶ್ರೀಮತಿ ವನಿತಾ ಚೇರ್ಕಾಡಿ ಗ್ರಾಮ ಬ್ರಹ್ಮಾವರ ಇವರ ಹೈನುಗಾರಿಕ ಘಟಕಕ್ಕೆ ನುಗ್ಗಿದ ಪರಿಣಾಮ ವನಿತಾರಿಗೆ ನಷ್ಟ ಉಂಟಾಗಿದ್ದು, ಈ ಬಗ್ಗೆ ಅವರು ಚೇರ್ಕಾಡಿ ಗ್ರಾಮ ಪಂಚಾಯತ್‌ ಪಿ.ಡಿ.ಓ ಸುಭಾಸ್‌ ಇವರಲ್ಲಿ ಅರ್ಜಿ ನೀಡಿರುತ್ತಾರೆ ಎನ್ನಲಾಗಿದೆ


ಪಿ ಡಿ ಓ ಸುಭಾಸ್  ವನಿತಾರ ಅರ್ಜಿಗೆ ಸ್ಪಂದಿಸದೇ ಇದ್ದು, ಈ ಬಾರಿಯ ಮಳೆಗಾಲದಲ್ಲಿ ಕೂಡ ನೀರು ಹೈನುಗಾರಿಕ ಘಟಕಕ್ಕೆ ನುಗ್ಗಿ  ನಷ್ಟ ಉಂಟಾಗಿದ್ದು, ದಿನಾಂಕ 25/07/205 ರಂದು ಮದ್ಯಾಹ್ನಾ 1:00 ಗಂಟೆಗೆ ದೂರುದಾರರು ಚೇರ್ಕಾಡಿ ಗ್ರಾಮ ಪಂಚಾಯತ್‌ ಕಛೇರಿಗೆ ಹೋಗಿ ಅರ್ಜಿಯ ಬಗ್ಗೆ ವಿಚಾರಿಸಿದರು

ಸಿಟ್ಟಿಗೆದ್ದ ಪಿ ಡಿ ಓ  ಮಹಿಳೆ ವನಿತಾರನ್ನು ಉದ್ದೇಶಿಸಿ ಪದೇ ಪದೇ ಬಂದು ತಲೆ ತಿನ್ನುತ್ತಿಯಲ್ಲ ಹೊರಗೆ ಹೋಗಿ “ ಎಂದು ಬೆದರಿಸಿ, ಅವಾಚ್ಯ ಶಬ್ದದಿಂದ ಜಾತಿ ಬಗ್ಗೆ ನಿಂದಿಸಿರುವುದಾಗಿ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 157/2025 ಕಲಂ: 351 (2), 352 BNS ಕಲಂ: 3 (1) (r) (s) The SC ST Act ರಂತೆ ಪ್ರಕರಣ ದಾಖಲಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ಶ್ರೀ ಧೂಮಾವತಿ ಯುವಕ ಮಂಡಲ ನಿಟ್ಟೂರು ಆಶ್ರಯದಲ್ಲಿ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿಷ್ಣುಮೂರ್ತಿ ನಗರ ನಿಟ್ಟೂರು, ಶ್ರೀಹರಿ ನೇತ್ರಾಲಯ, ಕಾರ್ತಿಕ್ ಎಸ್ಟೇಟ್ ಅಂಬಲಪಾಡಿ...

ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ, ರಾಜ್ಯ ಯುವಜನ...

ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಶಿಶಿರ್ ಶೆಟ್ಟಿ ಆಯ್ಕೆ

“ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ಹಳೆ ವಿದ್ಯಾರ್ಥಿ ಸಂಘವು ಪುನರ್...

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...