ಪದೇ ಪದೇ ಅಪಘಾತ ನಡೆಯುತ್ತಿದ್ದ ಸ್ಥಳದಲ್ಲಿ ಉದ್ಯಮಿಯ ಲಾಭಿಗೆ ಮಣಿದು ಡಿವೈಡರ್ ತೆರೆವುಗೊಳಿಸುತ್ತಿರುವ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಬೆಂಬಲ

8

ಖಾಸಗಿ ಬಟ್ಟೆ ಮಳಿಗೆಗಾಗಿ ಹೆದ್ದಾರಿ ಡಿವೈಡರನ್ನೇ ಒಡೆದು ಹಾಕಿದ ಹೆದ್ದಾರಿ ಆಧಿಕಾರಿಗಳು.ನಗರಸಭೆಯ ಅಧಿಕಾರಿಗಳು ಆಧ್ಯಕ್ಷರೂ ಸದಸ್ಯರು ಶಾಮೀಲು,ಸಾರ್ವಜನಿಕರ ಆಕ್ರೋಶ

ನಿಟ್ಟೂರ್ ಕಡೆಯಿಂದ ಮಲ್ಪೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ರಸ್ತೆ ಕೂಡ ಇದೆ ಡಿವೈಡರ್ ನ ಬಳಿ ಸೇರುತ್ತಿದ್ದು ಯಾವುದೇ ಕಾರಣಕ್ಕೂ ಇಲ್ಲಿ ಡಿವೈಡರ್ ನ ಮುಚ್ಚಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಡಿವೈಡರ್ ಅಗಲ ಗೊಳಿಸಬೇಕು ಎನ್ನುವುದು ಸಾರ್ವಜನಿಕರ ಮನವಿ ಕೂಡ ಸಂಬಂಧ ಪಟ್ಟ ಇಲಾಖೆಗಳಿಗೆ ನೀಡಿದ್ದರು

ಉಡುಪಿ ಶಾಸಕರು ಸಂಸದರು, ನಗರಸಭಾ ಅಧ್ಯಕ್ಷರು ಈ ಬಗ್ಗೆ ಗಮನ ಹರಿಸಿ ಶ್ರೀಮಂತ ಉದ್ಯಮಿಯ ಲಾಭಿಗೆ ಬಲಿಯಾಗದೆ ಸಾರ್ವಜನಿಕರ ನೋವಿಗೆ ಸ್ಪಂದಿಸಿಉಡುಪಿಯ ಬನ್ನಂಜೆಗೆ ಆ ಬಟ್ಟೆ ಮಳಿಗೆ ಬಂದಾಗಿನಿಂದ ಒಂದಲ್ಲ ಒಂದು ಕಿರಿಕ್ ಅಗುತ್ತಲೆ ಇದೆ.ಬನ್ನಂಜೆಯ ನಿಟ್ಟೂರು ತಿರುವಿನಲ್ಲಿ ಬಟ್ಟೆ ಮಳಿಗೆಗೆ ಬರುವ ವಾಹನಗಳಿಂದ ಸದಾ ಟ್ರಾಫಿಕ್ ಜಾಮ್ ಕಿರಿಕ್ ಉಂಟಾಗಿ ಸಮಸ್ಯೆ ಸೃಷ್ಟಿಯಾಗುತ್ತಿತ್ತು.

ಸೆಟ್ ಬ್ಯಾಕ್ ನೀಡದೆ ಹೆದ್ದಾರಿ ನಿಯಮಗಳ ಪ್ರಕಾರ ರಸ್ತೆಗೆ ಭೂಮಿ ಬಿಡದೆ ಈ ಕಟ್ಡಡ ನಿರ್ಮಾಣ ಮಾಡಲಾಗಿದೆ.ನಗರಸಭೆ ಭ್ರಷ್ಟ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಶೃಂಗೇರಿ ವಿಭಾಗದ ಅಧಿಕರಿಯೊಬ್ಬನ ಧನದಾಹದಿಂದ ಸಾರ್ವಜನಿಕ ರು ಪಡಬಾರದ ಸಮಸ್ಯೆ ಪಡುವಂತಾಗಿತ್ತು.ಇದೀಗ ನಗರ ಸಭೆ ಅಧಿಕಾರಿಗಳು ,ಜನಪ್ರತಿನಿಧಿಗಳು ಹಾಗೂ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಬಟ್ಟೆ ಅಂಗಡಿಯವ ನೀಡಿದ ಲಕ್ಷಾಂತರ ಮೌಲ್ಯದ ಚೀಲ ಪಡೆದುಕೊಂಡು ಡಿವೈಡರ್ ಒಡೆದು ಹಾಕಿದ್ದಾರೆ.ಇದರಿಂದಾಗ ರಾಂಗ್ ಸೈಡಿನಿಂದ ವಾಹನಗಳು ಸರಾಗವಾಗಿ ಬಟ್ಟೆ ಅಂಗಡಿ ಒಳಗೆ ಹೋಗುವಂತೆ ಅನುಕುಲ ಮಾಡಿಕೊಟ್ಟ ಹಾಗಾಗಿದೆ

.ಕಳೆದ ಒಂದೆರಡು ವರ್ಷಗಳಿಂದ ಈ ಡಿವೈಡರ್ ಜಾಗದಲ್ಲಿ ಹಲವು ಅಫಘಾತಗಳು ಸಂಭವಿಸಿವೆ.ಇದೆಲ್ಲ ವೂ ಬಟ್ಟೆ ಅಂಗಡಿ ಆರಂಭ ಆಗಿರುವ ಬಳಿಕ ಅಪಘಾತಗಳು ಶುರುವಾಗಿತ್ತು
.ಅದರೆ ನಗರಸಭೆ ಯಾಗಲೀ…ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಅಗಲೀ ಇದಕ್ಕೆ ತಲೆಕೆಡಿಸಿಕೊಂಡಿಲ್ಲ.ಇದೀಗ ಮೊದಲೇ ಇದ್ದ ಡಿವೈಡರನ್ನು ಶ್ರೀಮಂತ ಉದ್ಯಮಿಗಾಗಿ ಒಡೆದು ಹಾಕಿ ತಮ್ಮ ಸ್ವಾಮಿ ನಿಷ್ಟೆ ತೋರಿಸಿದ್ದಾರೆ.ಶನಿವಾರ ಹಾಗೂ ರವಿವಾರ ರಜೆ ಇರುವುದರಿಂದ ಮುಂಜಾನೆಯೇ ಜೆಸಿಬಿ ಕಾರ್ಯಚರಣೆಗಿಳಿದಿದೆ.ಈ ಬಗ್ಗೆ ಯಾವುದೇ ಅಧಿಕಾರಿಗಳಿಗೆ ಸಾರ್ವಜನಿಕರು ಕರೆ ಮಾಡಿದರೂ ಫೋನ್ ರಿಸೀವ್ ಮಾಡಲ್ಲ.ಕೆಲಸ ಮುಗಿಯೋವರೆಗೂ ಸ್ಥಳೀಯ ಜನಪ್ರತಿನಿಧಿಗಳು ನಾಟ್ ರೀಚೇಬಲ್.ಹೈವೆ ಇಂಜಿನಿಯರ್ ಫೊನ್ ಡಿಸ್ ಕನೆಕ್ಟ್ ಮಾಡಿ ಮಾಲೀಕನ ಸೇವೆಯನ್ನು ಪರಿಪೂರ್ಣವಾಗಿ ಮಾಡ್ತಾನೆ.ಅಸಲಿಗೆ ಇಲ್ಲಿಯ ಸಮಸ್ಯೆಗಳಿಗೆ ಮೂಲ ಕಾರಣ ಈ ಬಟ್ಟೆ ಅಂಗಡಿ .ಇಲ್ಲಿಗೆ ಬರೋ ವಾಹನಗಳಿಂದಲೇ ಟ್ರಾಫಿಕ್ ಜಾಮ್.ಹೆದ್ದಾರಿ ನಿಯಮ ಹಾಗೂ ನಗರ ಸಭೆ ನಿಯಮದಂತೆ ಕಟ್ಟಡ ಮಾಲೀಕ ಹೆದ್ದಾರಿ ಅಗಲೀಕರಣಕ್ಕೆ ಭೂಮಿ ಬಿಟ್ಟು ಕೊಡಬೇಕು

,ಅದರೆ ನಗರಸಭೆ ಅಧಿಕಾರಿಗಳಾಗಲೀ..ಹೈವೆ ಇಂಜಿನಿಯರ್ ಅಗಲೀ ಒಂದು ಇಂಚು ಭೂಮಿಯನ್ನು ಪಡಯದೇ ಅತ ಕೊಟ್ಟ ಕೈ ಚೀಲ ಪಡೆದು ಅನುಮತಿ ಕೊಟ್ಟಿದ್ದಾರೆ.ಇಲ್ಲಿ ಡಿವೈಡರ್ ಒಡೆಯೊ ಬದಲು ಹೆದ್ದಾರಿಗೆ ಬಿಟ್ಟುಕೊಟ್ಟ ಭೂಮಿಯನ್ನು ವಶಕ್ಕೆ ಪಡೆದು ರಸ್ತೆ ಅಗಲೀಕರಣಗೊಳಿಸಬೇಕಾಗಿತ್ತು.

ಅದರೆ ಅದನ್ನ ಬಿಟ್ಟು ಡಿವೈಡರ್ ಒಡೆದದ್ದು ಎಷ್ಟು ಸರಿ ?ಅಂಗಡಿ ಮಾಲೀಕನಿಗೆ ತನ್ನ ಅಂಗಡಿ ಪ್ರವೇಶ ಮಾಡೋ ಗೇಟ್ ಗಳು ವಾಸ್ತು ಪ್ರಕಾರ ಬೇಕಂತೆ…ಹೀಗಾಗಿ ತನ್ನ ಗೋಡೆಗಳನ್ನು ಮುಟ್ಟಲ್ಲ.ಕೆಲವು ಜನರ ಮುಖಾಂತರ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ

.ತಡ ರಾತ್ರಿ ಸ್ವತಃ ಅಧ್ಯಕ್ಷನೇ ಸ್ಥಳಕ್ಕೆ ಬಂದು ವಿದ್ಯೂತ್ ದೀಪಗಳ ತೆರವುಗೊಳಿಸಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನೀವುಗಳು ಅಂಗಡಿ ವ್ಯಾಪಾರಿ ಮೆಲೆ ತೋರಿಸೋ ಅಕ್ಕರೆ ತೆರಿಗೆ ಕಟ್ಟೋ…ನಿಮ್ಮ ಮತದಾರರ ಮೇಲೆ ಯಾಕಿಲ್ಲ…?

ಬಡವರ ಗೂಡಂಗಡಿ ಗಳ ಮೇಲೆ ದೌಲತ್ತ್ ತೋರಿಸುವ ನಗರಸಭೆ ಬಟ್ಟೆ ಅಂಗಡಿ ಮಾಲೀಕ ಸೆಟ್ ಬ್ಯಾಕ್ ಬಿಟ್ಟಿರುವ ಜಾಗದಲ್ಲಿ ಅನಧಿಕೃತ ಹೊಟೇಲ್ ಗಳನ್ನು ಮಾಡಿದ್ದು,ಇದರ ಮೇಲೆ ಯಾಕೆ ಕ್ರಮವಿಲ್ಲ

.ಸರಕಾರ ಇಂತಹ ಅಕ್ರಮಗಳಿಗೆ ಬೆಂಬಲಿಸುವ ಹೈವೆ ಇಂಜಿನಿಯರ್ ಹಾಗೂ ನಗರಸಭೆ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ಮನೆಗೆ ಕಳುಹಿಸಬೇಕು.ಮಾನ್ಯ ಲೊಕಾಯುಕ್ತರು ಖುದ್ದಾಗಿ ಸ್ಥಳಕ್ಕೆ ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಸರಕಾರಿ ಸ್ಥಳದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮೂವರ ವಿರುದ್ಧ  ಕಲ್ಲು ಕಳವು ಪ್ರಕರಣ ದಾಖಲು

ನಂದಳಿಕೆ ಸರಕಾರಿ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿ ಸಮುದ್ರಕ್ಕೆ ಕಲ್ಲು ಸಾಗಿಸುತ್ತಿದ್ದ ಮೂವರ ವಿರುದ್ಧ ...

ಮಹಿಳೆಗೆ ಜಾತಿನಿಂದನೆ ಚೇರ್ಕಾಡಿ ಪಂಚಾಯತ್ ಪಿಡಿಓ ವಿರುದ್ಧ ಪ್ರಕರಣ ದಾಖಲು

ಚೇರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 2 ವರ್ಷಗಳ ಕೆಳಗೆ ಅವೈಜ್ಞಾನಿಕವಾಗಿ ಕಾಂಕ್ರೀಟ್‌ ರಸ್ತೆ ಮಾಡಿದ್ದರಿಂದ...

ಪಡ್ರೆ ಧೂಮಾವತಿ ದೈವಸ್ಥಾನದ ಚಿನ್ನಾಭರಣ ಹಾಗೂಹಣ,ಕಳ್ಳತನ ಸತೀಶ್ ಮುಂಚೂರುವಿರುದ್ಧ ಪ್ರಕರಣ ದಾಖಲು

ಮಂಗಳೂರು: ಸುರತ್ಕಲ್ ನ  ಸತೀಶ್ ಮುಂಚೂರು ಮತ್ತು ಇತರರ ವಿರುದ್ದ ಪಡ್ರೆ ಧೂಮವತಿ ದೈವಸ್ಥಾನದ ಬಂಗಾರ...

ಮಂಗಳೂರು ಜೈಲಿನಲ್ಲಿ ಕೈದಿ ಮೇಲೆ ಹಲ್ಲೆ ನಡೆಸಿ ಹಪ್ತ ವಸೂಲಿ ನಡೆಸಿದ ನಾಲ್ವರು  ಸಹ  ಕೈದಿಗಳ ವಿರುದ್ಧ  ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲು

:  ಜೈಲಿನಲ್ಲಿ ವಿಚಾರಣಾಧೀನ ಕೈದಿಗೆ ಹಲ್ಲೆ ನಡೆಸಿ, ಹಪ್ತ ವಸೂಲಿ ನಡೆಸಿದ ನಾಲ್ವರು ಸಹ ಕೈದಿಗಳ...