thekarnatakatoday.com
Karavali Karnataka

ಮಂಗಳೂರು ಜೈಲಿನಲ್ಲಿ ಕೈದಿ ಮೇಲೆ ಹಲ್ಲೆ ನಡೆಸಿ ಹಪ್ತ ವಸೂಲಿ ನಡೆಸಿದ ನಾಲ್ವರು  ಸಹ  ಕೈದಿಗಳ ವಿರುದ್ಧ  ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲು

:  ಜೈಲಿನಲ್ಲಿ ವಿಚಾರಣಾಧೀನ ಕೈದಿಗೆ ಹಲ್ಲೆ ನಡೆಸಿ, ಹಪ್ತ ವಸೂಲಿ ನಡೆಸಿದ ನಾಲ್ವರು ಸಹ ಕೈದಿಗಳ ವಿರುದ್ಧ ಕೆ-ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

  ಮಂಗಳೂರಿನ ಜೈಲಿನಲ್ಲಿರುವ ಆರೋಪಿ ಮಿಥುನ್ ಎಂಬಾತನಿಗೆ ಸಹ ಕೈದಿಗಳಾದ ಧನು ಯಾನೆ ಧನುಷ್ ಭಂಡಾರಿ, ಸಚಿನ್ ತಲಪಾಡಿ, ದಿಲೇಶ್ ಬಂಗೇರ ಯಾನೆ ದಿಲ್ಲು, ಲಾಯಿ ವೇಗಸ್ ಎಂಬವರು ಜು.9ರಂದು ಸಂಜೆ 5 ಗಂಟೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದರು.

ಅಲ್ಲದೆ 50 ಸಾವಿರ ರೂ. ಹಪ್ತಾ ನೀಡುವಂತೆ ಬೆದರಿಸಿದ್ದರು. ಈ ವಿಚಾರ ಜೈಲು ಅಧಿಕಾರಿಗಳಿಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಮಿಥುನ್ ಪ್ರಾಣಭಯದಿಂದ ದೂರು ನೀಡುವ ಬದಲು ನಾಲ್ವರು ರೌಡಿಸಂ ಕೈದಿಗಳು ಹೇಳಿದಂತೆ ಹಣ ನೀಡಲು ಒಪ್ಪಿದ್ದ. 

ಕೈದಿ ಸಚಿನ್ ಎಂಬಾತ ಕೊಟ್ಟ ಎರಡು ಮೊಬೈಲ್ ಸಂಖ್ಯೆಗೆ ತನ್ನ ಪತ್ನಿಯ ಮೂಲಕ 20 ಸಾವಿರ ರೂ. ಫೋನ್ ಪೇ ಮಾಡಿಸಿದ್ದ. ಜು.12ರಂದು ಮಂಗಳೂರು ಸೆಂಟ್ರಲ್ ಡಿಸಿಪಿ,  ಬರ್ಕೆ ಪೊಲೀಸ್  ಇನ್ಸ್ಪೆಕ್ಟರ್ ಜೈಲಿನ ತಪಾಸಣೆ ಮಾಡಲು ಹೋಗಿದ್ದ ವೇಳೆ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಜಿಲ್ಲಾ ಜೈಲ್ ಸೂಪರಿಂಡೆಂಟ್ ಶರಣಬಸಪ್ಪ ಬರ್ಕೆ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೈದಿಗೆ ಜೈಲಿನಲ್ಲಿ  ಹಲ್ಲೆ ನಡೆಸಿದ್ದ ಸಹಕೈದಿಗಳ ವಿರುದ್ಧ ಕೆ-ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Related posts

ಪಡುಬಿದ್ರಿ ನಡ್ಸಾಲು ನಲ್ಲಿರುವ ಜೈ ಹಿಂದ್ ಟ್ಯೂಬ್ಸ್  ಪ್ರೈವೇಟ್ ಲಿಮಿಟೆಡ್  ಕಂಪನಿಯಿಂದ ಸ್ಥಳೀಯ ನಿವಾಸಿಗಳಿಗೆ ಹಾಗು ಪರಿಸರಕ್ಕೆ ಹಾನಿ ಕಂಪನಿ ವಿರುದ್ಧ ಕಾನೂನು ಕ್ರಮ ಕೃೆಗೂಳ್ಳುವಂತೆ ಉಡುಪಿ ಜಿಲ್ಲಾಧಿಕಾರಿಯವರಿಗೆ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ಮನವಿ‌

The Karnataka Today

ಸಾಲ ವಸೂಲಾತಿ ಸೊಸೈಟಿಯಲ್ಲಿ ಮಹಿಳೆಯನ್ನು ರಾತ್ರಿವರೆಗೆ ಕುಳ್ಳಿರಿಸಿ ಜಾತಿನಿಂದನೆ,ಜೀವ ಬೆದರಿಕೆ ಒಡ್ಡಿದ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

The Karnataka Today

ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಅಸ್ತಿ ಕಬಳಿಕೆ ಆರೋಪ ಸತ್ಯಕ್ಕೆ ದೂರವಾದದ್ದು ನನ್ನ ಬೆಳವಣಿಗೆ ಸಹಿಸದ ಕೆಲವರ ಷಡ್ಯಂತರ ::ಪ್ರಕಾಶ್ ಶೆಟ್ಟಿ ವ್ಯವಸ್ಥಾಪನ ಸಮಿತಿ ಸದಸ್ಯರು

The Karnataka Today

Leave a Comment