ಮುಖ್ಯ ವಿಷಯಕ್ಕೆ ಹೋಗಿ
The Karnataka Today
6 Oct
Latest
ಅಪರಾಧ

ಸುಳ್ಯ: ಪರವಾನಿಗೆ ಇಲ್ಲದೆ ಮರಳು ಸಾಗಾಟ : ಪಿಕಪ್ ವಾಹನ ವಶಕ್ಕೆ…!!

ಸುಳ್ಯ: ಪರವಾನಿಗೆ ಇಲ್ಲದೆ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ಸುಳ್ಯ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಸಂಜೆ ಸುಳ್ಯ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಅರಂಬೂರು ಗ್ರಾಮದ ಕಾಪಿಡೇ ಬಳಿ...

· 1 ನಿಮಿಷ ಓದು· ದಕ್ಷಿಣ ಕನ್ನಡ
ಸುಳ್ಯ: ಪರವಾನಿಗೆ ಇಲ್ಲದೆ ಮರಳು ಸಾಗಾಟ : ಪಿಕಪ್ ವಾಹನ ವಶಕ್ಕೆ…!!
ಹಂಚಿಕೊಳ್ಳಿ:

ಸುಳ್ಯ: ಪರವಾನಿಗೆ ಇಲ್ಲದೆ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ಸುಳ್ಯ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಸಂಜೆ ಸುಳ್ಯ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಅರಂಬೂರು ಗ್ರಾಮದ ಕಾಪಿಡೇ ಬಳಿ ಮಾಣಿ–ಮೈಸೂರು ರಸ್ತೆಯಲ್ಲಿ ಅರಂಬೂರು ಕಡೆಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದ್ದಾರೆ.

ವಾಹನದಲ್ಲಿದ್ದ ಚಾಲಕನನ್ನು ವಿಚಾರಿಸಿದಾಗ ಪೆರಾಜೆ ಗ್ರಾಮದ ಅಜರುದ್ದೀನ್ ಪಿ.ಹೆಚ್. (28) ಎಂದು ತಿಳಿದುಬಂದಿದೆ.

ವಾಹನದಲ್ಲಿ ಮರಳು ಸಾಗಾಟ ಮಾಡುತ್ತಿದ್ದು, ಅದಕ್ಕೆ ಯಾವುದೇ ಪರವಾನಿಗೆ ಇಲ್ಲ ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

KA-19-AB-9563 ನೋಂದಣಿ ಸಂಖ್ಯೆಯ ಮಹೇಂದ್ರ ಪಿಕಪ್ ವಾಹನದಲ್ಲಿ ಅಂದಾಜು ₹6,000 ಮೌಲ್ಯದ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಂಚಿಕೊಳ್ಳಿ: