ಕ್ರೀಡಾಪಟು ಯುವತಿಯ ಮೇಲೆ 60 ಮಂದಿಗೂ ಹೆಚ್ಚು ಜನರಿಂದ ಲೈಂಗಿಕ ದೌರ್ಜನ್ಯ ದೂರು 15 ಜನರ ಬಂಧನ

3

“ಕೇರಳದ ಪತ್ತನಂತಿಟ್ಟದಲ್ಲಿ ಕಳೆದ ಐದು ವರ್ಷಗಳಿಂದ 60 ಕ್ಕೂ ಹೆಚ್ಚು ಜನರು ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಅಥ್ಲೀಟ್ ಆಗಿರುವ 18 ವರ್ಷದ ದಲಿತ ಯುವತಿ ಆಘಾತಕಾರಿ ಘಟನೆಯನ್ನು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಸದಸ್ಯರಿಗೆ ನೀಡಿದ ನಂತರ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ 60 ಕ್ಕೂ ಹೆಚ್ಚು ಆರೋಪಿಗಳಿದ್ದಾರೆ ಎಂದು ಯುವತಿ ತಿಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 15 ಮಂದಿಯನ್ನು ಬಂಧಿಸಲಾಗಿದೆ.

ಪತ್ತನಂತಿಟ್ಟ ಜಿಲ್ಲೆಯ ಎರಡು ಪೊಲೀಸ್ ಠಾಣೆಗಳಲ್ಲಿ ಐದು ಎಫ್‌ಐಆರ್‌ಗಳನ್ನು ದಾಖಲಿಸಿದ ನಂತರ ಶುಕ್ರವಾರ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಮತ್ತೆ ಒಂಬತ್ತು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಯುವತಿ 13 ವರ್ಷದವಳಿದ್ದಾಗ, ಆಕೆಯ ತಂದೆಯ ಸ್ನೇಹಿತನ ಮಗ ಸುಬಿನ್ ಎಂಬಾತ ತನ್ನ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ದೃಶ್ಯಗಳನ್ನು ತೋರಿಸಿ ಆಮಿಷವೊಡುವ ಮೂಲಕ ಲೈಂಗಿಕ ದೌರ್ಜನ್ಯವಸೆಗಿದ್ದಾನೆ.

ಅಲ್ಲದೇ ಯುವತಿಯ ನಗ್ನ ಚಿತ್ರವನ್ನು ತನ್ನ ಮೊಬೈಲ್ ನಲ್ಲಿ ತೆಗೆದುಕೊಂಡಿದ್ದ. ಬಳಿಕ ಆಕೆಗೆ 16 ವರ್ಷವಾದಾಗ ಸುಬಿನ್ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಈ ಕೃತ್ಯದ ವಿಡಿಯೋಗಳನ್ನೂ ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ.

ಇದಾದ ನಂತರ ನಿರಂತರ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.ಈ ದೃಶ್ಯಗಳನ್ನು ಸುಬಿನ್ ಸ್ನೇಹಿತರಲ್ಲಿ ಹಂಚಿಕೊಂಡಿದ್ದು, ಅವರು ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಬ್ಲ್ಯಾಕ್ ಮೇಲ್ ಪುನರಾವರ್ತಿತ ದೌರ್ಜನ್ಯದ ನಂತರ ಶೈಕ್ಷಣಿಕವಾಗಿ ಹಿಂದುಳಿದ ಯುವತಿ ಕೌನ್ಸಿಲಿಂಗ್ ವೇಳೆ ಮೊದಲಿಗೆ ವಿಷಯ ಬಾಯ್ಬಿಟ್ಟಿದ್ದಾಳೆ.

ಆಕೆಯ ತರಬೇತುದಾರರು, ಸಹ ಕ್ರೀಡಾಪಟುಗಳು ಮತ್ತು ಸಹಪಾಠಿಗಳು ಸೇರಿದಂತೆ ಅನೇಕ ಮಂದಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದಕ್ಕೆ ಸಾಕ್ಷಿಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಇಸ್ಲಾಂಗೆ ಮತಾಂತರ, ಮದುವೆಗೆ ನಿರಾಕರಣೆ; ಕತ್ತು ಸೀಳಿ ಭಾಗ್ಯಶ್ರೀ ಯ ಹತ್ಯೆ ಮಾಡಿದ ಶೇಖ್ ರಯೀಸ್

ಮಧ್ಯಪ್ರದೇಶದಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದ್ದು, ಧಾರ್ಮಿಕ ಮತಾಂತರ ಮತ್ತು ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬರನ್ನು...

ಬೆಂಗಳೂರು ಮೆಟ್ರೋದಲ್ಲಿ ನಂದಿನಿ ಹಾಗೂ ಅಮೂಲ್ ಮಳಿಗೆಗಳ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಬಿ ಎಂ ಆರ್ ಸಿ ಎಲ್

“ಬೆಂಗಳೂರು ಮೆಟ್ರೊ ನಿಲ್ದಾಣಗಳಲ್ಲಿ ಅಮುಲ್‌ಗೆ ಮಳಿಗೆ ಹಂಚಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು...

ಕೇದಾರನಾಥ್ ಟೇಕಾಫ್ ವೇಳೆ ತಾಂತ್ರಿಕ ದೋಷ ಹೆದ್ದಾರಿಯಲ್ಲಿ ತುರ್ತುಭೂ ಸ್ಪರ್ಶ ಮಾಡಿದ ಹೆಲಿಕಾಪ್ಟರ್ ಕಾರಿಗೆ ಡಿಕ್ಕಿ

“ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಶನಿವಾರ ಉತ್ತರಾಖಂಡದ ಸಿರ್ಸಿ ಹೆಲಿಪ್ಯಾಡ್‌ನಿಂದ ಟೇಕ್ ಆಫ್ ಆಗುವಾಗ ತಾಂತ್ರಿಕ ದೋಷ...

ರೊಟರಾಕ್ಟ್ ಕ್ಲಬ್ ಉಡುಪಿಯಿಂದ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ಸೇವಾಕಾರ್ಯ

ರೊಟರಾಕ್ಟ್ ಕ್ಲಬ್ ಉಡುಪಿಯ ವಾರ್ಷಿಕ ಜಿಲ್ಲಾ ರೊಟರಾಕ್ಟ್ ಪ್ರತಿನಿಧಿಯ ಅಧಿಕೃತ ಭೇಟಿಯ ಪ್ರಯುಕ್ತ, ಕುಕ್ಕಿಕ್ಕಟ್ಟೆಯ ಶ್ರೀ...