ಶಿವಲಿಂಗಕ್ಕೆ ಸೂರ್ಯಾಭಿಷೇಕ: 2 ನಿಮಿಷಗಳ ಕಾಲ ನಡೆಯಲಿದೆ ಸೂರ್ಯ ಪೂಜೆ, ಗವಿಗಂಗಾಧರೇಶ್ವರ ದೇಗುಲದ ಕೌತಕ ಕಣ್ತುಂಬಿಕೊಳ್ಳಲು ಕ್ಷಣಗಣನೆ

25

ಬೆಂಗಳೂರು: ಮಕರ ಸಂಕ್ರಾಂತಿ ದಿನವಾದ ಗುರುವಾರ ಸಂಜೆ ನಗರ ಗವಿಗಂಗಾಧರೇಶ್ವರ ದೇಗುಲ ಗರ್ಭಗುಡಿಯನ್ನು ಸೂರ್ಯರಶ್ಮಿಗಳು ಪ್ರವೇಶಿಸಲಿವೆ.
ಸೂರ್ಯರಶ್ಮಿಯ ನೆಲಮಟ್ಟಕ್ಕಿಂತ 120 ಅಡಿ ಆಳದಲ್ಲಿರುವ ಗವಿ ಗಂಗಾಧರೇಶ್ವರ ಸ್ವಾಮಿಯ ಗರ್ಭಗುಡಿಯನ್ನು ಸಂಜೆ 5:02 ರಿಂದ 5:05 ಮಧ್ಯದಲ್ಲಿ 2 ನಿಮಿಷ ಹಾದು ಹೋಗಲಿದೆ.

ಇದರಂತೆ ದೇಗುಲದಲ್ಲಿ ಈಗಾಗಲೇ ವಿಶೇಷ ಪೂಜೆಗಳು ಆರಂಭವಾಗಿದ್ದು, ಶಿವನ ಲಿಂಗಕ್ಕೆ ಹಾಲು, ಎಳನೀರಿನ ಅಭಿಷೇಕಗಳನ್ನು ನಡೆಸಲಾಗುತ್ತದೆ.
ಗವಿಗಂಗಾಧರೇಶ್ವ ಸ್ವಾಮಿ ದೇಗುಲ 16ನೇ ಶತಮಾನದ ಕೆಂಪೇಗೌಡರ ಕಾಲದ್ದಾಗಿದ್ದು, ದೇಗುಲದಲ್ಲಿ ಸಾಕಷ್ಟು ಕೌತುಕಗಳು ಅಡಗಿವೆ ಎಂದು ಹೇಳಲಾಗುತ್ತದೆ.
ಮಕರ ಸಂಕ್ರಾಂತಿಯ ದಿನದಂದು ಸೂರ್ಯನ ಕಿರಣಗಳು ನಂದಿಯ ತಲೆಯ ಮಧ್ಯಭಾಗದ ಮೂಲಕ ಹಾದು ಗುಹೆಯೊಳಗಿರುವ ಶಿವಲಿಂಗದ ತಳಭಾಗವನ್ನು ಮೊದಲು ಸ್ಪರ್ಶಿಸುತ್ತದೆ. ನಂತರ ಸ್ವಲ್ಪ ಸ್ವಲ್ಪವಾಗಿ ಮೇಲೆ ಸಾಗುತ್ತ ಸುಮಾರು 1 ಗಂಟೆಗಳ ಕಾಲ  ಗಂಗಾಧರೇಶ್ವರನಿಗೆ ಸೂರ್ಯಾಭಿಷೇಕ ಮಾಡುತ್ತದೆ

Leave a comment

Leave a Reply

Your email address will not be published. Required fields are marked *

Related Articles

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ 

2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಮುಖ ದಿನಪತ್ರಿಕೆಗಳಲ್ಲಿ “ಭ್ರಷ್ಟಾಚಾರ ರೇಟ್ ಕಾರ್ಡ್” ಜಾಹೀರಾತು ಪ್ರಕಟಿಸಿದ್ದಕ್ಕಾಗಿ ರಾಜ್ಯ...

ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಆಗಮಿಸಿ ಪ್ಯಾಲೆಸ್ತೀನ್‌ ಪರ ಸ್ಟಿಕ್ಕರ್ ಅಂಟಿಸಿದ ಬ್ರಿಟಿಷ್ ದಂಪತಿಗಳಿಗೆ ಭಾರತ ಬಿಟ್ಟು ತೆರಳುವಂತೆ ಸೂಚನೆ

ಅಜ್ಮೀರ್: ರಾಜಸ್ಥಾನದ ಅಜ್ಮೀರ್‌ನ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಇಸ್ರೇಲ್ ವಿರುದ್ಧ ಪ್ಯಾಲೆಸ್ತೀನ್‌ ಪರವಾಗಿ ಸ್ಟಿಕ್ಕರ್‌ಗಳನ್ನು ಅಂಟಿಸಿದ...

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ 2026- 27 ನೇ ಸಾಲಿನ ಸ್ನಾತಕೋತ್ತರ ಕೋರ್ಸ್ ಗಳಿಗೆ ಆನ್ ಲೈನ್ ಅರ್ಜಿ ಆಹ್ವಾನ

ಮಂಗಳೂರು, ಡಿ. 23: ಕಲಬುರಗಿ ಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2026-27ನೇ ಸಾಲಿಗೆ ಸ್ನಾತಕೋತ್ತರ ಕೋರ್ಸ್‌ಗಳಿಗೆ...

ಶಾಲಾ ಶೈಕ್ಷಣಿಕ ಪ್ರವಾಸಕ್ಕೆ  ಸರಕಾರಿ ಬಸ್‌ಗಳಿಗೆ ಹೆಚ್ಚಾದ ಬೇಡಿಕೆ

ಮೈಸೂರು : ಸಾರಿಗೆ ಸಂಸ್ಥೆ ಬಸ್‌ಗಳಿಗೆ ಶುಕ್ರ ದೆಸೆ ಶುರುವಾಗಿದ್ದು, ಶೇ. 10 ರಷ್ಟು ಬೇಡಿಕೆ...