ದೆಹಲಿ ವಿಧಾನಸಭಾ ಚುನಾವಣೆ  29 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ

61

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ 29 ಅಭ್ಯರ್ಥಿಗಳನ್ನೊಳಗೊಂಡ ಎರಡನೇ ಪಟ್ಟಿಯನ್ನು ಬಿಜೆಪಿ ಶನಿವಾರ ಬಿಡುಗಡೆಗೊಳಿಸಿದೆ. ಕಪಿಲ್ ಮಿಶ್ರಾ ಮತ್ತು ಹರೀಶ್ ಖುರಾನಾ ಅವರನ್ನು ಕ್ರಮವಾಗಿ ಕರವಾಲ್ ನಗರ ಮತ್ತು ಮೋತಿ ನಗರದಿಂದ ಕಣಕ್ಕಿಳಿಸಿದೆ.

ನರೇಲಾದಿಂದ ರಾಜ್ ಕರಣ್ ಖತ್ರಿ, ತಿಮಾರ್‌ಪುರದಿಂದ ಸೂರ್ಯ ಪ್ರಕಾಶ್ ಖತ್ರಿ, ಮುಂಡ್ಕಾದಿಂದ ಗಜೇಂದ್ರ ದಾರಾಲ್, ಕಿರಾರಿಯಿಂದ ಬಜರಂಗ್ ಶುಕ್ಲಾ, ಸುಲ್ತಾನ್‌ಪುರ ಮಜ್ರಾದಿಂದ ಕರಣ್ ಸಿಂಗ್ ಕರ್ಮಾ, ಶಕುರ್ ಬಸ್ತಿಯಿಂದ ಕರ್ನೈಲ್ ಸಿಂಗ್ ಮತ್ತು ತ್ರಿನಗರದಿಂದ ತಿಲಕ್ ರಾಮ್ ಗುಪ್ತಾ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ.

ಸದರ್ ಬಜಾರ್‌ನಿಂದ ಮನೋಜ್ ಕುಮಾರ್ ಜಿಂದಾಲ್, ಚಾಂದಿನಿ ಚೌಕದಿಂದ ಸತೀಶ್ ಜೈನ್, ಮಟಿಯಾ ಮಹಲ್‌ನಿಂದ ದೀಪ್ತಿ ಇಂದೋರಾ, ಮಾದಿಪುರದಿಂದ ಊರ್ಮಿಳಾ ಕೈಲಾಶ್ ಗಂಗ್ವಾಲ್, ಹರಿನಗರದಿಂದ ಶ್ಯಾಮ್ ಶರ್ಮಾ, ತಿಲಕ್ ನಗರದಿಂದ ಶ್ವೇತಾ ಸೈನಿ ಸೇರಿದಂತೆ ಇತರ ಹಲವು ಮಂದಿಗೆ ಬಿಜೆಪಿ ಟಿಕೆಟ್ ನೀಡಿದೆ.

70 ವಿಧಾನಸಭಾ ಸ್ಥಾನಗಳ ಪೈಕಿ ಉಳಿದ 41 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಶುಕ್ರವಾರ ಸಂಜೆ ಸಭೆ ಸೇರಿತ್ತು. ಇಂದು 29 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ.

ಈ ಹಿಂದೆ ಜನವರಿ 4 ರಂದು 29 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರನ್ನು ನವದೆಹಲಿ ಕ್ಷೇತ್ರದಿಂದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಮುಖ್ಯಮಂತ್ರಿ ಅತಿಶಿ ಸ್ಪರ್ಧಿಸುತ್ತಿರುವ ಕಲ್ಕಾಜಿಯಿಂದ ಮಾಜಿ ಸಂಸದ ರಮೇಶ್ ಬಿಧುರಿ ಅವರನ್ನು ಕಣಕ್ಕಿಳಿಸಲಾಗಿತ್ತು.

Leave a comment

Leave a Reply

Your email address will not be published. Required fields are marked *

Related Articles

ಟಿಸಿಎಸ್ ನಲ್ಲಿ ಕಾರ್ಪೊರೇಟ್ ಜಿಹಾದ್ ಲೈಂಗಿಕ ಕಿರುಕುಳ ಪ್ರಕರಣ ಬುರ್ಖಾ ಧರಿಸುವಂತೆ ಕಿರುಕುಳ ಹಿಂದೂ ಧರ್ಮ ನಿಂದನೆ ಸತ್ಯ ಬಿಚ್ಚಿಟ್ಟ ಸಂತ್ರಸ್ತೆ

ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ದೇಶದ ಪ್ರಮುಖ ಟೆಕ್ ಕಂಪನಿ ಟಿಸಿಎಸ್ ನಲ್ಲಿ ನಡೆದಿದೆ ಎನ್ನಲಾದ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸ್ಪೋಟಕ್ಕೆ ಸಂಚು ನಾಲ್ವರು ಉಗ್ರರ ಬಂಧನ ತಪ್ಪಿದ ಬಾರಿ ದುರಂತ

“ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಮಹಾಸ್ಫೋಟಕ್ಕೆ ಸಂಚು ನಡೆದಿದೆ. ಸೂಕ್ಷ್ಮ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು...

ಕ್ಷೇತ್ರ ಪುನರ್ವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ ಮಂಡನೆ; ವಿರೋಧಿಸಿ ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸಿದ ವಿಪಕ್ಷಗಳು

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಗುರುವಾರ ಆರಂಭದ ದಿನವೇ ತೀವ್ರ ರಾಜಕೀಯ ವಾಗ್ವಾದ, ಕೋಲಾಹಲ ಉಭಯ...

ಬಿಹಾರ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕಾರ

ಭಾರತೀಯ ಜನತಾ ಪಕ್ಷದ  ನಾಯಕ ಸಾಮ್ರಾಟ್ ಚೌಧರಿ ಅವರು ಇಂದು ಬುಧವಾರ ಬಿಹಾರದ 24ನೇ ಮುಖ್ಯಮಂತ್ರಿಯಾಗಿ...