ಉಡುಪಿ ಸರಕಾರಿ ಜಿಮ್ ನಲ್ಲಿ ಹೊಡೆದಾಟ ದೂರು ಪ್ರತಿ ದೂರು ದಾಖಲು

52

“ಪ್ರದೀಪ್‌ ಸ್ಯಾಮುವೆಲ್‌ (45) ಉದ್ಯಾವರ, ಉಡುಪಿ ಇವರು ದಿನಾಂಕ:31/12/2024 ರಂದು  ಅಜ್ಜರಕಾಡು ಸರ್ಕಾರಿ ಎ ಸಿ ಜಿಮ್‌ ಗೆ ಎಂದಿನಂತೆ ಬೆಳಿಗ್ಗೆ 7:30 ಗಂಟೆಗೆ ತೆರಳಿ 8:30 ಗಂಟೆಗೆ ಜಿಮ್‌ ವರ್ಕೌಟ್‌ ಮುಗಿಸಿ ಪಾದರಕ್ಷೆಯನ್ನು ಬದಲಾಯಿಸಲು ಹೊರಗೆ ಹೊರಟು ಪಾದರಕ್ಷೆಯನ್ನು ಇಡುವ ಸ್ಥಳದಲ್ಲಿ.

ಅದೇ ಜಿಮ್‌ ನ ಸದಸ್ಯನಾದ ಲಕ್ಷೀತ್ ಎಂಬಾತನು ಫಿರ್ಯಾದರಾರರನ್ನು ಕಂಡು ನಿಮ್ಮನ್ನು ಜಿಮ್‌ ಟ್ರೈನರ್‌ ಉಮೇಶ್ ರವರು ಕರೆಯುತ್ತಿದ್ದಾರೆ ಎಂದು ತಿಳಿಸಿದ ಮೇರೆಗೆ ಫಿರ್ಯಾದುದಾರರು ಉಮೇಶ್‌ ರವರ ಬಳಿ ಹೋಗಿ ವಿಚಾರಿಸಿದಾಗ ಅವರು ನಾನು ನಿಮ್ಮನ್ನು ಕರೆದಿರುವುದಿಲ್ಲ ಎಂದು ಹೇಳಿರುತ್ತಾರೆ

.ನಂತರ ಫಿರ್ಯಾದುದಾರರು ಪುನಃ ಲಕ್ಷಿತ್‌ ಎಂಬಾತನಲ್ಲಿ ಈ ಬಗ್ಗೆ ಕೇಳಲು  ಹಿಂದಿನಿಂದ ಕರೆಯಲು ಹೋದಾಗ ಏಕಾಏಕಿ ಲಕ್ಷೀತ್ ನು ಜಿಮ್‌ ಸಲಕರಣೆ(ರಾಡ್)‌ ನಿಂದ ಫಿರ್ಯಾದುದಾರರ ತಲೆಗೆ ಹೊಡೆದು ಮಾರಾಣಾಂತಿಕ ಹಲ್ಲೆ ನಡೆಸಿ ಬೂಟುಗಾಲಿನಿಂದ ಹೊಟ್ಟೆಗೆ ಮತ್ತು ಬೆನ್ನಿನ ಭಾಗಕ್ಕೆ ಒದ್ದಿದ್ದು ರಕ್ತಗಾಯವಾಗಿದೆ

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 236/2024, ಕಲಂ: 118(1) 109 BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರತಿದೂರು

ಲಕ್ಷೀತ್ (20) ಕೊಡವೂರು, ಉಡುಪಿ ಇವರು  ಅಜ್ಜರಕಾಡು ನಲ್ಲಿರುವ ಸರ್ಕಾರಿ ಜಿಮ್‌ ಗೆ ಎಂದಿನಂತೆ ವ್ಯಾಯಾಮ ಮಾಡಲು ಹೋಗಿದ್ದು,ಬೆಳಿಗ್ಗೆ 8:30 ಗಂಟೆಗೆ ಫಿರ್ಯಾದುದಾರರು ಜಿಮ್‌ ಕೊಠಡಿ ಒಳಗೆ ಹೋದಾಗ

ಪ್ರದೀಪ್‌ ಸ್ಯಾಮ್ಯುವೇಲ್‌ ಎಂಬಾತನು ಅವಾಚ್ಯ ಶಬ್ದಗಳಿಂದ ಬೈದು,  ಕೆನ್ನೆ ಹಾಗೂ ಕುತ್ತಿಗೆ ಭಾಗಕ್ಕೆ  ಹೊಡೆದು ಹಲ್ಲೆ ಮಾಡಿರುತ್ತಾನೆ.

ನಂತರ ಕೊಲೆ ಮಾಡುವ ಉದ್ದೇಶದಿಂದ ಜಿಮ್‌ ನಲ್ಲಿದ್ದ ರಾಡನ್ನು ಹಿಡಿದು ಹಲ್ಲೆ ಮಾಡಲು ಯತ್ನಿಸಿದಾಗ ಫಿರ್ಯಾದುದಾರರು ತಡೆಯಲು ಹೋದಾಗ ಬಲಕೈಗೆ ಪೆಟ್ಟಾಗಿದ್ದು,ಅಲ್ಲದೇ ಆರೋಪಿಯು ಫಿರ್ಯಾದುದಾರರನ್ನು ಉದ್ದೇಶಿಸಿ ಕೊಲೆ ಬೆದರಿಕೆ ಹಾಕಿರುತ್ತಾನೆ

. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 237/2024, ಕಲಂ: 118(1) 351(2) 352 BNS ರಂತೆ ಪ್ರಕರಣ ದಾಖಲಾಗಿದೆ “

Leave a comment

Leave a Reply

Your email address will not be published. Required fields are marked *

Related Articles

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...

ಲೈಂಗಿಕ ದೌರ್ಜನ್ಯ ಆರೋಪ ಮೂಡಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಬಿಜಿ ಅಮಾನತು

ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದ್ದು,...

ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಸಿದ್ಧ ರಂಗೋಲಿ ಕಲಾವಿದೆ ಶ್ರೀಮತಿ ವಿಶಾಲ ಮಹೇಶ್ ರವರಿಗೆ ಸನ್ಮಾನ

ಬ್ರಹ್ಮಾವರ : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಜರಗಿದ ಸರಳ...