ಗುಂಡಿ ಬಿದ್ದ ರಸ್ತೆಗೆ ಬಂತು ಸೋಫಾ ಸೆಟ್ ಫೋಟೋ ವೈರಲ್ ಕ್ಷಣಾರ್ಧದಲ್ಲಿ ದುರಸ್ತಿ ಆಯಿತು ರಸ್ತೆ 

2

“ಬೆಂಗಳೂರಿನ ಗುಬ್ಬಲಾಳ ಮುಖ್ಯರಸ್ತೆಯಲ್ಲಿನ ಬೃಹತ್ ಗುಂಡಿ ಕ್ಷಣಾರ್ಧದಲ್ಲಿ ಕಣ್ಮರೆಯಾಗಿದೆ.

ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವ ಸ್ಥಳೀಯರು, ಸಾಮಾಜಿಕ ಪ್ರಜ್ಞೆಯುಳ್ಳ ನಿವಾಸಿ ಗುಂಪು ಮತ್ತು ಮಾಜಿ ಕಾರ್ಪೊರೇಟರ್ ಇದಕ್ಕೆ ಕಾರಣರಾಗಿದ್ದಾರೆ.

ಹೀಗಾಗಿ ಈ ನಿರ್ಣಾಯಕ ಜಂಕ್ಷನ್‌ನಲ್ಲಿ ವಾಹನ ಸವಾರರು ಈಗ ಸುರಕ್ಷಿತವಾಗಿ ಪ್ರಯಾಣಿಸಬಹುದು. ಉತ್ತರಹಳ್ಳಿಯ ಗುಬ್ಬಲಾಳ ಮುಖ್ಯರಸ್ತೆ ಮತ್ತು ಪೈಪ್‌ಲೈನ್ ರಸ್ತೆಯ ಜಂಕ್ಷನ್‌ನಲ್ಲಿ ಇತ್ತೀಚೆಗೆ ಗುಂಡಿ ಕಾಣಿಸಿಕೊಂಡಿದ್ದು, ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡಿತ್ತು ಎಂದು ಕನಕಪುರ ರಸ್ತೆಯ 80+ ವಸತಿ ಗುಂಪುಗಳ ಒಕ್ಕೂಟದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಯಾರೋ ಭಾನುವಾರ (ಡಿಸೆಂಬರ್ 29) ರಸ್ತೆ ಗುಂಡಿಯ ಮೇಲೆ ಶಿಥಿಲವಾದ, ಬಿದಿರಿನ ಸೋಫಾವನ್ನು ತಂದು ಇರಿಸಿದ್ದಾರೆ, ಇದರಿಂದಾಗಿ ಸಾರ್ವಜನಿಕರು ಆ ಸ್ಥಳದಲ್ಲಿ ಉಂಟಾಗಬಹುದಾದ ಅಪಾಯ ತಪ್ಪಿಸಬಹುದು ಹಾಗೂ ಸುರಕ್ಷಿತವಾಗಿ ಪ್ರಯಾಣಿಸಬಹುದಾಗಿದೆ..

ಈ ಜಂಕ್ಷನ್ ವಿಶೇಷವಾಗಿ ರಾತ್ರಿ ಸಮಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಏಕೆಂದರೆ ಈ ಪ್ರದೇಶದಲ್ಲಿ ಸರಿಯಾಗಿ ಬೆಳಕಿಲ್ಲ ಎಂದು ಸದಸ್ಯರು ವಿವರಿಸಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಅದರ ಕೆಳಗೆ ಪೈಪ್‌ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರ ರಸ್ತೆ ಈ ಸ್ಥಿತಿ ತಲುಪಿದೆ.

ರಸ್ತೆ ಮಧ್ಯೆ ಪಾರ್ಕಿಂಗ್ ಗುರುತು ಹಾಕಿ ಪಾಲಿಕೆ ಶುಲ್ಕ ವಸೂಲಿ!  ಸ್ಥಳೀಯ ದೂರುಗಳನ್ನು ದಾಖಲಿಸಬಹುದಾದ ‘ನಮ್ಮ ಬೆಂಗಳೂರು’ ಅಪ್ಲಿಕೇಶನ್‌ಗೆ ಲಾಗ್ ಇನ್ ಆಗಿ ಫೋಟೋಗಳೊಂದಿಗೆ ಭಾನುವಾರ ಸಮಸ್ಯೆಯನ್ನು ಹೈಲೈಟ್ ಮಾಡಿದೆ. ಆದರೆ ಆ ಕಡೆಯಿಂದ ಬಂದ ಪ್ರತಿಕ್ರಿಯೆ ಆಘಾತ ತರುವಂತಾದ್ದಾಗಿತ್ತು ಎಂದು ಹೇಳಿದರು. ಸಮಸ್ಯೆ ಅಪ್ರಸ್ತುತ ಎಂದು ಹೇಳಲಾಯಿತು

. ಆದರೆ ಇದನ್ನು ಇಷ್ಟಕ್ಕೆ ಬಿಡದ ವಸತಿ ನಿವಾಸಿಗಳ ಗುಂಪು ಸೋಮವಾರ ಬೆಳಗ್ಗೆ ಉತ್ತರಹಳ್ಳಿ ವಾರ್ಡ್‌ನ ಬಿಜೆಪಿ ಮಾಜಿ ಕಾರ್ಪೊರೇಟರ್ (ನಂ. 184) ಹನುಮಂತಯ್ಯ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ವಿವರಿಸಿತು.

ರಸ್ತೆ ಗುಂಡಿ ಅಪಾಯ ತಪ್ಪಿಸಲು ರಸ್ತೆ ಮಧ್ಯದಲ್ಲಿ ಸೋಫಾ ಹಾಕಿರುವ ಹಾಸ್ಯಾಸ್ಪದ ದೃಶ್ಯದ ಫೋಟೋಗಳನ್ನು ತೋರಿಸಿದ್ದಾರೆ. ಅದಾದ ಕೆಲವೇ ಗಂಟೆಗಳಲ್ಲಿ ರಸ್ತೆ ಸಮಸ್ಯೆ ಪರಿಹರಿಸಲಾಗಿದೆ.


ನಾನು ನನ್ನ ಪಕ್ಷದ ಕೆಲವು ಕಾರ್ಯಕರ್ತರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ನಾವು ಸಮಸ್ಯೆಯನ್ನು ಜಲಮಂಡಳಿಯ ಗಮನಕ್ಕೂ ತಂದಿದ್ದೇವೆ. ಕೆಲವು ಭಾರೀ ವಾಹನಗಳು ಈ ರಸ್ತೆಯಲ್ಲಿ ಹಾದು ಹೋದ ಕಾರಣದಿಂದ ಸಮಸ್ಯೆ ಎದುರಾಗಿದೆ.

ನನ್ನ ತಂಡದ ಸದಸ್ಯರು ಮತ್ತು BWSSB ಯ ಕಾರ್ಯಕರ್ತರು ಜಂಟಿಯಾಗಿ ತೆರಳಿ ಕೆಲಸ ಮಾಡಿ ಸಂಜೆಯ ವೇಳೆಗೆ ಗುಂಡಿ ತುಂಬಿ ಮುಚ್ಚಲಾಯಿತು ಎಂದು ಹನುಮಂತಯ್ಯ ಮಾಧ್ಯಮಗಳಿಗೆ  ತಿಳಿಸಿದರು.

ಸ್ಥಳದಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಹಾಕಲಾಗಿದೆ ಮತ್ತು ತಾತ್ಕಾಲಿಕವಾಗಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಿಎಂಕೆಆರ್ ತಿಳಿಸಿದೆ 

Leave a comment

Leave a Reply

Your email address will not be published. Required fields are marked *

Related Articles

ಬೆಂಗಳೂರು ಮೆಟ್ರೋದಲ್ಲಿ ನಂದಿನಿ ಹಾಗೂ ಅಮೂಲ್ ಮಳಿಗೆಗಳ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಬಿ ಎಂ ಆರ್ ಸಿ ಎಲ್

“ಬೆಂಗಳೂರು ಮೆಟ್ರೊ ನಿಲ್ದಾಣಗಳಲ್ಲಿ ಅಮುಲ್‌ಗೆ ಮಳಿಗೆ ಹಂಚಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು...

ಕೇದಾರನಾಥ್ ಟೇಕಾಫ್ ವೇಳೆ ತಾಂತ್ರಿಕ ದೋಷ ಹೆದ್ದಾರಿಯಲ್ಲಿ ತುರ್ತುಭೂ ಸ್ಪರ್ಶ ಮಾಡಿದ ಹೆಲಿಕಾಪ್ಟರ್ ಕಾರಿಗೆ ಡಿಕ್ಕಿ

“ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಶನಿವಾರ ಉತ್ತರಾಖಂಡದ ಸಿರ್ಸಿ ಹೆಲಿಪ್ಯಾಡ್‌ನಿಂದ ಟೇಕ್ ಆಫ್ ಆಗುವಾಗ ತಾಂತ್ರಿಕ ದೋಷ...

ರೊಟರಾಕ್ಟ್ ಕ್ಲಬ್ ಉಡುಪಿಯಿಂದ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ಸೇವಾಕಾರ್ಯ

ರೊಟರಾಕ್ಟ್ ಕ್ಲಬ್ ಉಡುಪಿಯ ವಾರ್ಷಿಕ ಜಿಲ್ಲಾ ರೊಟರಾಕ್ಟ್ ಪ್ರತಿನಿಧಿಯ ಅಧಿಕೃತ ಭೇಟಿಯ ಪ್ರಯುಕ್ತ, ಕುಕ್ಕಿಕ್ಕಟ್ಟೆಯ ಶ್ರೀ...

ಆಪರೇಷನ್ ಸಿಂಧೂರ್ ಸರ್ವ ಪಕ್ಷಗಳ ಸಭೆ ವಿಪಕ್ಷಗಳು ಭಾಗಿ ದೇಶದ ಹಿತದ್ರಷ್ಠಿಯಿಂದ ಸರಕಾರದ ಬೆನ್ನಿಗೆ ನಿಂತ ರಾಜಕೀಯ ಪಕ್ಷಗಳು

“ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ...