ಕಾಡಾನೆಗಳನ್ನು ಗುಂಡಿಕ್ಕಿ ಸಾಯಿಸಬೇಕು ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಶಾಸಕ ಸ್ಥಾನಕ್ಕೆ ನಾಲಾಯಕ್ ಅರಣ್ಯ ಭೂಮಿಯಲ್ಲಿ ನಡೆಯುತ್ತಿರುವ ಎಸ್ಟೇಟ್ ಗಳ ಒತ್ತುವರಿಯ ಅಕ್ರಮ ಗಣಿಗಾರಿಕೆ, ಅಕ್ರಮ ಹೋಂ ಸ್ಟೇ ಗಳನ್ನು ತೆರವುಗೊಳಿಸಲು ಧೈರ್ಯ ಮಾಡಲಿ :ನವೀನ್ ಸಾಲಿಯಾನ್
ಈ ಬಗ್ಗೆ ಹೇಳಿಕೆ ನೀಡುವ ಶಾಸಕ ಹರೀಶ್ ಪೂಂಜಾ ರಾಜಕಾರಣಿಗಳು ಕಾಡನ್ನು ಒತ್ತುವರಿ ಮಾಡಿಕೊಂಡು ಪರಿಸರ ನಾಶ ಪಡಿಸುತ್ತಿರುವ ಅಕ್ರಮ ಗಣಿಗಾರಿಕೆ ಮಾಡಿ ಪರಿಸರ, ಅರಣ್ಯ ನಾಶ ಪಡಿಸುತ್ತಿರು ದಂದೆಕೋರರನ್ನು ಮಟ್ಟಹಾಕಲು ಪ್ರಯತ್ನ ಮಾಡುವುದನ್ನು ಬಿಟ್ಟು ಇಂಥ ಬಾಲಿಶ ಹೇಳಿಕೆ ನೀಡುವುದು ತರವಲ್ಲ.
ಭೂಮಿ ಖಾಲಿ ಮನುಷ್ಯರಿಗಷ್ಟೇ ಅಲ್ಲ,ಇದು ಎಲ್ಲಾ ಜೀವಿಗಳಿಗೂ ಸೇರಿದ್ದು ಎನ್ನುದನ್ನ ಹರೀಶ್ ಪೂಂಜಾ ಮೊದಲು ಅರಿಯಬೇಕು,ಬರೀ ಪ್ರಚಾರದ ತೆವಲಿಗೋಸ್ಕರ ಬೇಕಾಬಿಟ್ಟಿ ಮಾತಾಡುವುದನ್ನು ಜನರು ಗಮನಿಸುತ್ತಿದ್ದಾರೆ
. ತಾನು ಸಮಾಜದ ಜವಾಬ್ದಾರಿ ಹೊತ್ತ ಜನಪ್ರತಿನಿಧಿ ಎಂದು ಗಮನದಲ್ಲಿರಬೇಕು.
ಪ್ರಾಣಿಗಳನ್ನು ಗುಂಡಿಕ್ಕಿ ಕೊಲ್ಲುವುದು ಕಾಡಾನೆ ಹಳ್ಳಿಗೆ ಬರುವ ಸಮಸ್ಯೆಗಳಿಗೆ ಪರಿಹಾರವಲ್ಲ, ನೂರು 150 ವರ್ಷಗಳಿಂದ ಆನೆಗಳು ತಿರುಗಾಡುತ್ತಿದ್ದ ದಾರಿಯಲ್ಲಿ ಆನೆಗಳು ಬೇರೆ ಬೇರೆ ಅರಣ್ಯಗಳಿಗೆ ಸಂಚರಿಸುತ್ತವೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೆ ತಿಳಿದ ಜ್ಞಾನ
ಸ್ಥಳಗಳಲ್ಲಿ ಮನೆಗಳ ನಿರ್ಮಿಸಿ ಅಕ್ರಮ ಹೋಂ ಸ್ಟೇ ಗಳನ್ನು ಕಟ್ಟಿ ಅವುಗಳ ಸಂಚಾರಕ್ಕೆ ಅಡ್ಡಿ ಮಾಡಿದ್ದು ಪ್ರಭಾವಿಗಳೇ ಹೊರತು ಸಾಮಾನ್ಯ ಜನರಲ್ಲ ಎಂಬುದನ್ನು ಹರೀಶ್ ಪೂಂಜಾ ಅವರು ಅರ್ಥ ಮಾಡಿಕೊಳ್ಳಬೇಕು
ಅರಣ್ಯ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ಚರ್ಚೆ ಮಾಡಿ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುದು ಉತ್ತಮ
ಕಾಡುಪ್ರಾಣಿಗಳ ಬಗ್ಗೆ ಕಡು ಕ್ರೂರ ರೀತಿಯ ಹೇಳಿಕೆ ನೀಡಿರುವುದು ಶಾಸಕ ಸ್ಥಾನಕ್ಕೆ ಶೋಭೆ ತರುವುದಿಲ್ಲ,ಈ ರೀತಿಯ ಹೇಳಿಕೆ ನೀಡಿರುವುದುನ್ನು ಹಿಂಪಡೆದು ಸಾರ್ವಜನಿಕ ವಲಯದಲ್ಲಿ ಕ್ಷಮೆ ಕೇಳಬೇಕು.