ಪ್ರತಿಷ್ಠೆಯ ಕಾಪು ಪುರಸಭೆಯ ಜಿದ್ದಾ ಜಿದ್ದಿನ ಕಾನೂನು ಹೋರಾಟದಲ್ಲಿ ಬಿಜೆಪಿ ಗೆ ಜಯ
ಈ ಹಿಂದೆ ನಡೆದ ಉಡುಪಿ ಜಿಲ್ಲೆಯ ಕಾಪು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ಬದ್ದ ಸೈದ್ಧಾಂತಿಕ ಎದುರಾಳಿ ಪಕ್ಷ ಎಸ್ ಡಿ ಪಿ ಐ ಪಕ್ಷದ ಸದಸ್ಯೆ ಸರಿತಾ ಶಿವಾನಂದ್ ರವರು ಬಿಜೆಪಿ ಸೇರ್ಪಡೆಯಾಗಿ ಪುರಸಭೆ ಉಪಾಧ್ಯಕ್ಷೆಯಾಗಿದ್ದರು
,ಈ ಉಪಾಧ್ಯಕ್ಷ ಸ್ಥಾನವನ್ನು ವಿರೋಧಿಸಿ ಉಪಾಧ್ಯಕ್ಷ ಸ್ಥಾನ ರದ್ದುಗೊಳಿಸುವಂತೆ ಎಸ್ ಡಿ ಪಿ ಐ ಪಕ್ಷ “ಡಿಸಿ ಕೋರ್ಟ್” ನಲ್ಲಿ ಕಾನೂನು ಪ್ರಕರಣ ದಾಖಲಿಸಿತ್ತು
ಈ ಪ್ರಕರಣದಲ್ಲಿ ಬಿಜೆಪಿಯ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ, ಡಿಸಿ ಕೋರ್ಟ್ ನಲ್ಲಿ ಎಸ್ ಡಿ ಪಿ ಐ ಹೂಡಿದ ಪ್ರಕರಣ ನ್ಯಾಯಯುತ ವಾದದಲ್ಲ ಎಂದು “ಡಿಸಿ ಕೋರ್ಟು” ಪ್ರಕರಣವನ್ನು ವಜಾಗೊಳಿಸಿದೆ.
ಪ್ರತಿಷ್ಠೆಯ ಜಿದ್ದಾ ಜಿದ್ದಿನ ಕಾನೂನು ಹೋರಾಟದಲ್ಲಿ ಬಿಜೆಪಿಗೆ ಜಯ ತಂದು ಕೊಟ್ಟಿದೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮತ್ತು ಬಿಜೆಪಿ ಕಾರ್ಯಕರ್ತರ ಪರವಾಗಿ ಕಾನೂನು ಹೋರಾಟ ನಡೆಸುವ
ಉಡುಪಿಯ ನ್ಯಾಯವಾದಿ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರು ಆಗಿರುವ ಸಂತೋಷ್ ಕುಮಾರ್ ಮೂಡುಬೆಳ್ಳೆಯವರು ಈ ಪ್ರಕರಣದಲ್ಲಿ ವಾದ ಮಂಡಿಸಿದ್ದರು .