ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಸಿದ್ದು ಸರ್ಕಾರ ಹಿಂದೂ ಸಂಘಟನೆಗಳ ನಿರ್ಮೂಲನೆಯ ಗುತ್ತಿಗೆ ಕೊಟ್ಟಂತೆ ಕಾಣುತ್ತಿದೆ. ಈ ಅಧಿಕಾರಿಯ ಅಧಿಕಾರಾವಧಿಯಲ್ಲಿ ಜಿಲ್ಲೆಯ ತುಂಬಾ ನಮ್ಮ ಸಂಘಟನೆಯ ಕಾರ್ಯಕರ್ತರು ಹತ್ತಾರು ಸುಳ್ಳು ಕೇಸುಗಳಿಗೆ ತಲೆಕೊಟ್ಟಿದ್ದಾರೆ
. ಪ್ರಮುಖ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ರೌಡಿಶೀಟರ್ ಎಂದು ಗುರುತಿಸಿ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ. ಒಂದೆರಡು ಹೋರಾಟದ ಕೇಸುಗಳಿದ್ದ ಕಾರ್ಯಕರ್ತರಿಗೆ ಕ್ರಿಮಿನಲ್ ಪಟ್ಟ ಕಟ್ಟಲಾಗುತ್ತಿದೆ.
ಹಿಂದುತ್ವದ ಬಗ್ಗೆ ಎಲ್ಲಾದರೂ ಬರೆದರೆ ಮಾತನಾಡಿದರೆ ಅವರ ವಿರುದ್ಧ ಮರುದಿನವೇ ಪೊಲೀಸ ಇಲಾಖೆ ನೋಟಿಸ್ ಜಾರಿ ಮಾಡುತ್ತಿದೆ ! ಹಿಂದೂ ಕಾರ್ಯಕರ್ತರನ್ನು ನಿಷೇಧಿತ ಉಗ್ರ ಸಂಘಟನೆಯ ಸದಸ್ಯರಂತೆ ನಡೆಸಿಕೊಳ್ಳುತ್ತಿರುವ ಈ ಹಿಂದೂ ವಿರೋಧಿ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲೆಯ ಹಿಂದೂ ಸಂಘಟನೆಗಳ ಬಲ ಏನು ಎಷ್ಟು ಎಂದು ತೋರಿಸುವ ಸಮಯ ಬಂದಿದೆ.
ಕಾರ್ಕಳದಲ್ಲಿ ಕೇವಲ ಹಿಂದೂ ವ್ಯಾಪಾರಸ್ಥರಿಗೆ ಅಂಗಡಿಗಳನ್ನು ನೀಡಿ ಎಂದು ಮನವಿ ಮಾಡಿದ ಕಾರಣಕ್ಕೆ ಹಿಂದೂ ಕಾರ್ಯಕರ್ತನೊಬ್ಬನ ಮೇಲೆ ಜಾಮೀನು ರಹಿತ ಕೇಸು ದಾಖಲಿಸಲಾಗಿದೆ. ಇದನ್ನು ಹೀಗೆ ಬಿಟ್ಟರೆ , ಈ ಎಸ್ ಪಿ ಜಾತ್ಯಾತೀತತೆಯ ಹೆಸರಲ್ಲಿ ನಾಳೆ ಮುಸಲ್ಮಾನರನ್ನು ನಮ್ಮ ದೇವಸ್ಥಾನದ ಪೂಜೆಗೆ ಕೂರಿಸಿದರೂ ಅಚ್ಚರಿ ಇಲ್ಲ! ಹಿಂದುಗಳ ದೇವಸ್ಥಾನದಲ್ಲಿ, ಜಾತ್ರೆಗಳಲ್ಲಿ ಹಿಂದುಗಳು ವ್ಯಾಪಾರ ಮಾಡಲು ಸ್ವತಂತ್ರರಲ್ಲ ಎಂದಾದರೆ ಹಿಂದೂ ಸಮಾಜದ ಅಸ್ಮಿತೆಯಾದರೂ ಎಲ್ಲಿ ಉಳಿಯಿತು?
ಈಗಲೂ ನಾವು ಎಚ್ಚೆತ್ತುಕೊಂಡು ಪೊಲೀಸ್ ದೌರ್ಜನ್ಯವನ್ನು ಖಂಡಿಸದೇ ಇದ್ದರೆ , ಜಿಲ್ಲೆಯಲ್ಲಿ ಹಿಂದೂ ಪರವಾಗಿ ಧ್ವನಿ ಎತ್ತಲು ಒಬ್ಬನೇ ಒಬ್ಬ ಕಾರ್ಯಕರ್ತ ಸಿಗಲಿಕ್ಕಿಲ್ಲ. *25 ನೇ ತಾರೀಕು ಸೋಮವಾರ ಬೆಳಿಗ್ಗೆ ಉಡುಪಿಯ ವರಿಷ್ಟಾಧಿಕಾರಿ ಕಚೇರಿಯ ಮುಂದೆ ನಾವೆಲ್ಲರೂ ದೊಡ್ಡ ಸಂಖ್ಯೆಯಲ್ಲಿ ಸೇರೋಣ.* ಈಗ ಹಾಕಿರುವ ಸುಳ್ಳು ಕೇಸುಗಳಿಗೆ ಕಾರಣ ಕೇಳೋಣ.ಎಂದು ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ಪ್ರತಿಭಟನೆಗೆ ಸಹಸ್ರ ಸಂಖ್ಯೆಯಲ್ಲಿ ಸೇರುವಂತೆ ಹಿಂದೂ ಸಮಾಜದ ಜನತೆಗೆ ಕರೆ ನೀಡಿದೆ