17 ವರ್ಷಗಳ ನಂತರ ಭಾರತದ ಪ್ರಧಾನಿ ನೈಜೀರಿಯಾ ಭೇಟಿ ಪ್ರಧಾನಿ ಮೋದಿಗೆ ಅದ್ದೂರಿಯ ಸ್ವಾಗತ

67
17 ವರ್ಷಗಳ ನಂತರ ಭಾರತದ ಪ್ರಧಾನಿ ನೈಜೀರಿಯಾಕ್ಕೆ: ಮೂರು ದೇಶಗಳ ಯಾತ್ರೆ ಶುರು, ಅನಿವಾಸಿ ಭಾರತೀಯರಿಂದ ಮೋದಿಗೆ ಅದ್ಧೂರಿ ಸ್ವಾಗತ ನೈಜೀರಿಯಾ ಅಧ್ಯಕ್ಷರ ಆಹ್ವಾನದ ಮೇರೆಗೆ ಮೋದಿಯವರು ನ.16-17ರಂದು ನೈಜೀರಿಯಾಕ್ಕೆ ಭೇಟಿ ನೀಡಿದ್ದಾರೆ.


ಇದು 17 ವರ್ಷಗಳ ನಂತರ ಭಾರತೀಯ ಪ್ರಧಾನಮಂತ್ರಿಯೊಬ್ಬರ ನೈಜೀರಿಯಾ ಭೇಟಿಯಾಗಿದೆ. 2007ರ ಅಕ್ಟೋಬರ್‌ನಲ್ಲಿ ಮನಮೋಹನ್ ಸಿಂಗ್ ನೈಜೀರಿಯಾಕ್ಕೆ ಭೇಟಿ ನೀಡಿದ್ದರು. ಅನಿವಾಸಿ ಭಾರತೀಯರೊಂದಿಗೆ ಮಾತುಕತೆ ನಡೆಸುತ್ತಿರುವ ಪ್ರಧಾನಿ ಮೋದಿ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 3 ದಿನಗಳ ವಿದೇಶ ಯಾತ್ರೆ ಶನಿವಾರ ಆರಂಭವಾಗಿದ್ದು, ನೈಜೀರಿಯಾಗೆ ಭೇಟಿ ನೀಡಿದ ಮೋದಿಯವರಿಗ ಅದ್ಧೂರಿಯಾಗಿ ಸ್ವಾಗತ ಕೋರಲಾಗಿದೆ.

ನೈಜೀರಿಯಾ ಅಧ್ಯಕ್ಷರ ಆಹ್ವಾನದ ಮೇರೆಗೆ ಮೋದಿಯವರು ನ.16-17ರಂದು ನೈಜೀರಿಯಾಕ್ಕೆ ಭೇಟಿ ನೀಡಿದ್ದಾರೆ. ಇದು 17 ವರ್ಷಗಳ ನಂತರ ಭಾರತೀಯ ಪ್ರಧಾನಮಂತ್ರಿಯೊಬ್ಬರ ನೈಜೀರಿಯಾ ಭೇಟಿಯಾಗಿದೆ. 2007ರ ಅಕ್ಟೋಬರ್‌ನಲ್ಲಿ ಮನಮೋಹನ್ ಸಿಂಗ್ ನೈಜೀರಿಯಾಕ್ಕೆ ಭೇಟಿ ನೀಡಿದ್ದರು.

ಆ ಬಳಿಕ ಇದೇ ಮೊದಲ ಭಾರೀ ಮೋದಿ ಅವರು ಭೇಟಿ ನೀಡುತ್ತಿದ್ದಾರೆ. ನೈಜೀರಿಯಾಗೆ ಭೇಟಿ ನೀಡಿದ ಮೋದಿಯವರಿಗೆ ಅಲ್ಲಿನ ಅನಿವಾಸಿ ಭಾರತೀಯರು ಅದ್ಧೂರಿ ಸ್ವಾಗತ ಕೋರಿದ್ದಾರೆ.

ಈ ಕುರಿತ ಫೋಟೋಗಳನ್ನು ಮೋದಿಯವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ನೈಜೀರಿಯಾದಲ್ಲಿರುವ ಭಾರತೀಯ ಸಮುದಾಯ ನೀಡಿದ ಅದ್ಧೂರಿ ಸ್ವಾಗತ ನೀಡಿದ್ದು ಹೃದಯ ಮುಟ್ಟಿತು ಎಂದು ಹೇಳಿದ್ದಾರೆ.

ಇನ್ನು ನೈಜೀರಿಯಾ ಭೇಟಿ ಬಳಿಕ ಮೋದಿಯವರು ಜಿ.20 ಶೃಂಗಕ್ಕಾಗಿ ನ.18 ಮತ್ತು 17ರಂದು ಬ್ರೆಜಿಲ್’ಗೆ ಭೇಟಿ ನೀಡಲಿದ್ದಾರೆ. ನಂತರ ನ.21ರವರೆಗೆ ಗಯಾನಾಕ್ಕೂ ಭೇಟಿ ನೀಡಲಿದ್ದಾರೆ.

ಗಯಾನಾದಲ್ಲಿ ನಡೆಯಲಿರುವ CARICOM-India ಶೃಂಗಸಭೆಯಲ್ಲಿ ಮೋದಿಯವರು ಭಾಗವಹಿಸಲಿದ್ದು, ಇದೂ ಕೂಡ ತುಂಬಾ ವಿಶೇಷವಾಗಲಿದೆ.

ಏಕೆಂದರೆ 50 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿ ನೀಡುತ್ತಿದ್ದಾರೆ. ಜಿ20 ಶೃಂಗ ಅರ್ಥಪೂರ್ಣ ಮಾತುಕತೆಗೆ ಎದುರು ನೋಡುತ್ತಿರುವೆ ಎಂದು ಮೋದಿಯವರು ಟ್ವೀಟ್ ಮಾಡಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಹೊರ್ಮುಜ್ ಜಲಸಂಧಿಯಲ್ಲಿ ಕ್ಷಿಪಣಿ ದಾಳಿ: ಭಾರತೀಯ ನಾವಿಕ ಸಾವು, ಇರಾನ್ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದ ಭಾರತ

ನವದೆಹಲಿ: ಹಾರ್ಮುಜ್ ಜಲಸಂಧಿಯಲ್ಲಿ ಯುಎಇಗೆ ಸೇರಿದ ಎರಡು ತೈಲ ಸಾಗಣೆ ಹಡಗುಗಳ ಮೇಲೆ ಇರಾನ್ ನಡೆಸಿದ...

ಭಾರತ ವಿರುದ್ಧ ಯುದ್ಧಕ್ಕೂ ಹಿಂಜರಿಯುವುದಿಲ್ಲ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಉದ್ಧಟತನ

“ಇಸ್ಲಾಮಾಬಾದ್: ಸಿಂಧೂ ಜಲ ಒಪ್ಪಂದದ ವಿವಾದದ ನಡುವೆ ಭಾರತಕ್ಕೆ ಪಾಕಿಸ್ತಾನ ಮತ್ತೊಮ್ಮೆ ಯುದ್ಧದ ಬೆದರಿಕೆ ಹಾಕಿದೆ....

ತನ್ನ ಪ್ರದೇಶಗಳಿಗೆ ಇಸ್ಲಾಮಿ ಹೆಸರುಗಳ ಕೈ ಬಿಟ್ಟು ಹಿಂದೂ ಹೆಸರು ಮರುನಾಮಕರಣ, ಬದಲಾಗುತ್ತಿದೇಯಾ ಪಾಕಿಸ್ತಾನ??

ಲಾಹೋರ್: ಭಾರತದ ಪ್ರಧಾನಿ ಮೋದಿ ಅಖಂಡ ಭಾರತದ ಕುರಿತು ಮಾಡಿದ್ದ ಭಾಷಣ ಹಸಿರಾಗಿರುವಂತೆಯೇ ಅತ್ತ ಪಾಕಿಸ್ತಾನದಲ್ಲಿ...

ದೇಶ ರಕ್ಷಣೆಗೆ 92 ಶತಕೋಟಿ ಡಾಲರ್ ಬಜೆಟ್ ವಿಶ್ವದ 5ನೇ ರಾಷ್ಟ್ರವಾಗಿ ಎಲೈಟ್ ಗ್ರೂಪ್ ಸೇರಿದ ಭಾರತ!

ನವದೆಹಲಿ: ರಕ್ಷಣಾ ವಿಭಾಗದಲ್ಲಿ ಭಾರತ ಐತಿಹಾಸಿಕ ಮೈಲುಗಲ್ಲು ಸಾಧಿಸಿದ್ದು, ದೇಶದ ರಕ್ಷಣಾ ಬಜೆಟ್ 92 ಶತಕೋಟಿ...