ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಪ್ರಕರಣದ ತನಿಖೆ ಸಿಟಿ ರವಿ ನೇತೃತ್ವದ ಸತ್ಯಶೋಧನಾ ಸಮಿತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ವರದಿ ಮಂಡನೆ

15

“ಬೆಂಗಳೂರು: ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಪ್ರಕರಣದ ತನಿಖೆ ನಡೆಸಿದ ಸಿಟಿ ರವಿ ನೇತೃತ್ವದ ಸತ್ಯಶೋಧನಾ ಸಮಿತಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ವರದಿ ಸಲ್ಲಿಸಿದೆ.
ಪರಿಷತ್ ಸದಸ್ಯ ಸಿ.ಟಿ ರವಿ, ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಎನ್ ಮಹೇಶ್ ನೇತೃತ್ವದ ತ್ರಿಸದಸ್ಯ ಸಮಿತಿಯು ಆಂತರಿಕ ಸತ್ಯಶೋಧನೆ ನಡೆಸಿ, ಸಾಂದರ್ಭಿಕ ಸಾಕ್ಷಿ, ಶಂಕೆ, ಮೂಲಗಳಿಂದ ಸಂಗ್ರಹಿಸಿದ ಮಾಹಿತಿ ಹಾಗೂ ಅನುಮಾನ ಇದ್ದ ಶಾಸಕರಿಂದ ಪಡೆದ ಮಾಹಿತಿ ಆಧರಿಸಿ ವರದಿ ಸಿದ್ಧಪಡಿಸಿದ್ದಾರೆ. ಈ ಮಧ್ಯಂತರ ವರದಿಯನ್ನು ಬಿಜೆಪಿ ಕಚೇರಿಯಲ್ಲಿ ಸಲ್ಲಿಕೆ ಮಾಡಿದ್ದು, ಬಳಿಕ ಬಿವೈವಿ ಹಾಗೂ ಸಿಟಿ ರವಿ ಇಬ್ಬರೂ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ.
ನಾಲ್ಕು ದಿನಗಳ ಕಾಲ ಆಂತರಿಕ ತನಿಖೆ ನಡೆಸಿದ ಸಮಿತಿಯು ಒಟ್ಟು ಮೂರು ಪುಟಗಳ ವರದಿಯನ್ನು ಸೀಲ್ಡ್ ಕವರ್‌ನಲ್ಲಿ ಸಲ್ಲಿಕೆ ಮಾಡಿದೆ. ಮೈತ್ರಿ ಪಕ್ಷಗಳಿಂದ ಒಟ್ಟು 12 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ
. ಈ ಪೈಕಿ 1 ಅಸಿಂಧು ಮತ. ಬಿಜೆಪಿಯಿಂದ 1 ಅಸಿಂಧು ಮತ ಸೇರಿ ಒಟ್ಟು 4 ಅಡ್ಡಮತ ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರ ಹೊರತಾಗಿ ಉಳಿದ ಅಡ್ಡ ಮತಗಳು ಜೆಡಿಎಸ್‌ನಿಂದಾಗಿವೆ. ವರದಿಯಲ್ಲಿ ಅಡ್ಡ ಮತ ಚಲಾಯಿಸಿದ ಶಾಸಕರ ಹೆಸರು ಉಲ್ಲೇಖಿಸಿಲ್ಲ ಎನ್ನಲಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ಆಂಜನೇಯ ದೇವಸ್ಥಾನ ಅಕ್ರಮ ಪ್ರವೇಶ ದೇವಸ್ಥಾನದ ಆವರಣದಲ್ಲಿ ಮೂತ್ರ ವಿಸರ್ಜನೆ: ಆರೋಪಿ ಮೊಹಮ್ಮದ್ ಜಾಫರ್ ಬಂಧನ

ಹಾವೇರಿ: ದೇವಸ್ಥಾನವೊಂದನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ 31 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಹಾವೇರಿ...

ರಾಜ್ಯ ಪೊಲೀಸ್ ಇಲಾಖೆಯ 17 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪ್ರತಿಷ್ಠಿತ ಪ್ರಶಸ್ತಿ ‘ರಾಷ್ಟ್ರಪತಿ ಪದಕ-2026’

ಬೆಂಗಳೂರು: ಆಗಸ್ಟ್ 15ರಂದು ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ ಶುಭಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯವು ಪೊಲೀಸ್...

ಪ್ರವಚನದ ನಡುವೆ ಸಚಿವಈಶ್ವರ ಖಂಡ್ರೆಗೆ ಜೈಕಾರ ಪ್ರವಚನ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ ಕೊಪ್ಪಳದ ಗವಿಮಠದ ಶ್ರೀ ಗವಿದ್ದೇಶ್ವರ ಸ್ವಾಮೀಜಿ

ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೊಪ್ಪಳದ ಗವಿಮಠದ ಶ್ರೀ ಗವಿದ್ದೇಶ್ವರ ಮಹಾಸ್ವಾಮಿಗಳು ತೀವ್ರ ಮುಜುಗರ ಅನುಭವಿಸಿದರು....

ರಾಜ್ಯ ಸಚಿವ ಸಂಪುಟ ಖಾತೆ ಹಂಚಿಕೆ ಕಸರತ್ತು ನೂತನ ಸಚಿವರ ಸಂಭಾವ್ಯ ಖಾತೆಗಳ ಪಟ್ಟಿ

“ಬೆಂಗಳೂರು: ಬಹುನಿರೀಕ್ಷಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸೋಮವಾರ ವಿಸ್ತರಣೆಯಾಗಿದ್ದು, 19 ಕಾಂಗ್ರೆಸ್...