ಕಾರ್ಕಳ ಟೈಗರ್ಸ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ರಕ್ತದೊತ್ತಡ–ಮಧುಮೇಹ ತಪಾಸಣೆ ಶಿಬಿರ

24

ಕಾರ್ಕಳ ಟೈಗರ್ಸ್ ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹತ್ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಈ ಶಿಬಿರವು 2026ರ ಜುಲೈ 5ರಂದು ಭಾನುವಾರ ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಇಂದ್ರಪ್ರಸ್ಥ ಸಭಾಭವನ, ಕಾರ್ಕಳದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಖ್ಯಾತ ವೈದ್ಯರಾದ ಡಾ. ಕಾರ್ತಿಕ್ ರಾವ್ (MD, DNB Medicine) ಅವರಿಂದ ಉಚಿತ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ನಡೆಸಲಾಗುವುದು.

ಜೊತೆಗೆ ನೇತ್ರ ತಜ್ಞರಿಂದ ಕಣ್ಣಿನ ಸಮಗ್ರ ಪರೀಕ್ಷೆ, ಡಯಾಬಿಟಿಕ್ ರೆಟಿನೋಪತಿ ಮತ್ತು ಗ್ಲೂಕೋಮಾ ತಪಾಸಣೆ ಸೇರಿದಂತೆ ವಿವಿಧ ನೇತ್ರ ಸಂಬಂಧಿತ ಪರೀಕ್ಷೆಗಳು ಉಚಿತವಾಗಿ ಲಭ್ಯವಿರುತ್ತವೆ.
ಅಗತ್ಯವಿರುವ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಕನ್ನಡಕ ವಿತರಣೆ ಹಾಗೂ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗುವುದು.

ಅಲ್ಲದೆ ಡಾ. ರೋವಿನಾ ಡಿಸೋಜಾ ಅವರಿಂದ ಫಿಜಿಯೋಥೆರಪಿ ಸೇವೆ ಹಾಗೂ ಶ್ರೀಮತಿ ವೈಶಾಲಿ ಅವರಿಂದ ಆಕ್ಯುಪ್ರೆಶರ್ ಚಿಕಿತ್ಸೆಯೂ ಲಭ್ಯವಿರುತ್ತದೆ.
ಸಾರ್ವಜನಿಕರು ಈ ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಮಧುಕರ ಕನ್ನಡ – 9844761421
ಮೋಹನ್ ದಾಸ್ ಶೆಟ್ಟಿ – 8496895530
ಪ್ರವೀಣ್ ತ್ರಂಗಾರ್ – 9901144080
ಪ್ರವೀಣ್ ಕುಮಾರ್ – 7892976977
ಕಾರ್ಕಳ ಟೈಗರ್ಸ್ ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ

Leave a comment

Leave a Reply

Your email address will not be published. Required fields are marked *

Related Articles

ಅಗ್ರಜ ಸೌಹಾರ್ದ ಸಹಕಾರಿ ಸಂಘ (ನಿ.), ಉಡುಪಿಹಾಗೂ ಶ್ರೀ ಧೂಮಾವತಿ ಯುವಕ ಮಂಡಲ (ರಿ.) ನಿಟ್ಟೂರು ವತಿಯಿಂದ ಉಚಿತ ದಂತ ಚಿಕಿತ್ಸಾ ಶಿಬಿರ

ನಿಟ್ಟೂರು: ಆ. 27: ಶ್ರೀ ಧೂಮಾವತಿ ಯುವಕ ಮಂಡಲ (ರಿ.) ವಿಷ್ಣುಮೂರ್ತಿ ನಗರ, ನಿಟ್ಟೂರು, ಹಾಗೂ...

ವ್ಯಸನಮುಕ್ತ ಭಾರತ  ವಿದ್ಯಾರ್ಥಿಗಳು ಹಾಗೂ ಯುವಜನತೆಯ ಸಂಕಲ್ಪವಾಗಬೇಕು  : ಮಾಜಿ ನಗರಸಭಾ ಸದಸ್ಯ ಕೆ. ವಿಜಯ ಕೊಡವೂರು

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್...

ಪಕ್ಷ ನಿಷ್ಠೆ ಗುರುತಿಸಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ವಿಶ್ವಾಸ್ ವಿ ಅಮೀನ್ ಪಡುಬಿದ್ರಿ ಮುಂದುವರಿಕೆಗೆ ಆದೇಶ

ಉಡುಪಿ :: ವಿಶ್ವಾಸ್ ವಿ ಅಮೀನ್ ಅವರ ಪಕ್ಷ ನಿಷ್ಠೆಯನ್ನು ಗುರುತಿಸಿದ ಕೆಪಿಸಿಸಿ ಉಡುಪಿ ಜಿಲ್ಲಾ...

ದಿವ್ಯಾಂಗ ರಕ್ಷಣಾ ಸಮಿತಿಯಿಂದ ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ ಹಾಗೂ ಆಹಾರ ಕಿಟ್ ವಿತರಣೆ

ಉಡುಪಿ/ಕೋಡವೂರು: ದಿವ್ಯಾಂಗ ರಕ್ಷಣಾ ಸಮಿತಿ (ರಿ.), ಕೋಡವೂರು ಹಾಗೂ MCKS ಫುಡ್ ಫಾರ್ ದಿ ಹಂಗ್ರಿ...