ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಬರುತ್ತಿದ್ದ ಎಪಾಮಿನೊಂಡಾಸ್ ಮತ್ತು ಎಂಎಸ್‌ಸಿ ಫ್ರಾನ್ಸೆಸ್ಕಾ ಹಡಗುಗಳನ್ನು ವಶಕ್ಕೆ ಪಡೆದ ಇರಾನ್ ನೌಕಾ ಪಡೆ

27

“ಟೆಹರಾನ್: ಭಾರತಕ್ಕೆ ಬರುತ್ತಿದ್ದ ಹಡಗು ಸೇರಿದಂತೆ ಎರಡು ಹಡಗುಗಳ ಮೇಲೆ ಇರಾನ್ ನೌಕಪಡೆ ಸಮುದ್ರದಲ್ಲೇ ಮಿಂಚಿನ ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ. ಹೌದು. ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಬರುತ್ತಿದ್ದ ಎಪಾಮಿನೊಂಡಾಸ್ ಮತ್ತು ಎಂಎಸ್‌ಸಿ ಫ್ರಾನ್ಸೆಸ್ಕಾ ಎಂಬ ಹಡಗುಗಳನ್ನು ಇರಾನ್ ನೌಕಪಡೆ ಸಿಬ್ಬಂದಿ ತಡೆದು ವಶಕ್ಕೆ ಪಡೆದಿರುವ ವಿಡಿಯೋಗಳನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಬಿಡುಗಡೆ ಮಾಡಿದೆ.
ಇರಾನ್ ಧ್ವಜ ಹೊಂದಿರುವ ಸ್ಪೀಡ್ ಬೋಟ್ ಗಳು ಭಾರತೀಯ ಹಡಗುಗಳನ್ನು ಸಮುದ್ರದಲ್ಲೇ ತಡೆಗಟ್ಟಿದ್ದಾರೆ. ಬಳಿಕ ಮುಖಕ್ಕೆ ಮಾಸ್ಕ್ ಧರಿಸಿದ ಸೈನಿಕರು ಬೆನ್ನಿಗೆ ಬಂದೂಕು ಕಟ್ಟಿಕೊಂಡು ಹಡಗಿನ ಒಳಗಡೆ ಹತ್ತುವುದು ವಿಡಿಯೋದಲ್ಲಿದೆ.
ಇರಾನ್ ಸೈನಿಕರ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ನಂತರ ಭಾರತದ ಎಪಾಮಿನೊಂಡಾಸ್  ಹಡಗಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಇರಾನ್ ನ ರಾಷ್ಟ್ರೀಯ ಭದ್ರತಾ ಮಂಡಳಿಯೊಂದಿಗೆ ಸಂಯೋಜಿತವಾಗಿರುವ ನೂರ್ ನ್ಯೂಸ್ ವರದಿ ಮಾಡಿದೆ.
ಯುಫೋರಿಯಾ ಎಂಬ ಎರಡನೇ ಹಡಗಿನ ಮೇಲೆ ಗುಂಡುಹಾರಿಸಿದ ನಂತರ ಅದು ನಿಂತಿದೆ. ಮೂರನೇ ಹಡಗು ಎಂ ಎಸ್ ಸಿ ಫ್ರಾನ್ಸೆಸ್ಕಾ ಮೇಲೂ ದಾಳಿ ನಡೆದಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾ ಪಡೆ ಇಂದು ಬೆಳಿಗ್ಗೆ ಹಾರ್ಮುಜ್ ಜಲಸಂಧಿಯಲ್ಲಿ ನಿಯಮ ಉಲ್ಲಂಘಿಸಿದ ಎರಡು ಹಡಗುಗಳನ್ನು ಪತ್ತೆಹಚ್ಚಿ, ನಿಲ್ಲಿಸಿತು.


ಎಂ ಎಸ್ ಸಿ ಫ್ರಾನ್ಸೆಸ್ಕಾ “ಜಿಯೋನಿಸ್ಟ್ ಆಡಳಿತ”ಕ್ಕೆ ಸೇರಿದ್ದು, ಎಪಾಮಿನೊಂಡಾಸ್ ಕಡಲ ಭದ್ರತೆಗೆ ಅಪಾಯವನ್ನುಂಟುಮಾಡುತ್ತಿದೆ ಎಂದು ಗಾರ್ಡ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಇಸ್ಲಾಮಿಕ್ ಗಣರಾಜ್ಯ ವಿಧಿಸಿರುವ ನಿಯಮ ಉಲ್ಲಂಘಿಸುವ ಮತ್ತು ಜಲಮಾರ್ಗದಲ್ಲಿ ಸುರಕ್ಷಿತ ಮಾರ್ಗಕ್ಕೆ ವಿರುದ್ಧವಾದ ಚಟುವಟಿಕೆಗಳ ವಿರುದ್ಧ ಗಾರ್ಡ್‌ ಎಚ್ಚರಿಕೆ ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕ ಕದನ ವಿರಾಮವನ್ನು ಅನಿರ್ದಿಷ್ಟವಾಗಿ ವಿಸ್ತರಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಈ ಘರ್ಷಣೆ ನಡೆದಿದೆ.

Leave a comment

Leave a Reply

Your email address will not be published. Required fields are marked *

Related Articles

ಹೊರ್ಮುಜ್ ಜಲಸಂಧಿಯಲ್ಲಿ ಕ್ಷಿಪಣಿ ದಾಳಿ: ಭಾರತೀಯ ನಾವಿಕ ಸಾವು, ಇರಾನ್ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದ ಭಾರತ

ನವದೆಹಲಿ: ಹಾರ್ಮುಜ್ ಜಲಸಂಧಿಯಲ್ಲಿ ಯುಎಇಗೆ ಸೇರಿದ ಎರಡು ತೈಲ ಸಾಗಣೆ ಹಡಗುಗಳ ಮೇಲೆ ಇರಾನ್ ನಡೆಸಿದ...

ಭಾರತ ವಿರುದ್ಧ ಯುದ್ಧಕ್ಕೂ ಹಿಂಜರಿಯುವುದಿಲ್ಲ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಉದ್ಧಟತನ

“ಇಸ್ಲಾಮಾಬಾದ್: ಸಿಂಧೂ ಜಲ ಒಪ್ಪಂದದ ವಿವಾದದ ನಡುವೆ ಭಾರತಕ್ಕೆ ಪಾಕಿಸ್ತಾನ ಮತ್ತೊಮ್ಮೆ ಯುದ್ಧದ ಬೆದರಿಕೆ ಹಾಕಿದೆ....

ತನ್ನ ಪ್ರದೇಶಗಳಿಗೆ ಇಸ್ಲಾಮಿ ಹೆಸರುಗಳ ಕೈ ಬಿಟ್ಟು ಹಿಂದೂ ಹೆಸರು ಮರುನಾಮಕರಣ, ಬದಲಾಗುತ್ತಿದೇಯಾ ಪಾಕಿಸ್ತಾನ??

ಲಾಹೋರ್: ಭಾರತದ ಪ್ರಧಾನಿ ಮೋದಿ ಅಖಂಡ ಭಾರತದ ಕುರಿತು ಮಾಡಿದ್ದ ಭಾಷಣ ಹಸಿರಾಗಿರುವಂತೆಯೇ ಅತ್ತ ಪಾಕಿಸ್ತಾನದಲ್ಲಿ...

ದೇಶ ರಕ್ಷಣೆಗೆ 92 ಶತಕೋಟಿ ಡಾಲರ್ ಬಜೆಟ್ ವಿಶ್ವದ 5ನೇ ರಾಷ್ಟ್ರವಾಗಿ ಎಲೈಟ್ ಗ್ರೂಪ್ ಸೇರಿದ ಭಾರತ!

ನವದೆಹಲಿ: ರಕ್ಷಣಾ ವಿಭಾಗದಲ್ಲಿ ಭಾರತ ಐತಿಹಾಸಿಕ ಮೈಲುಗಲ್ಲು ಸಾಧಿಸಿದ್ದು, ದೇಶದ ರಕ್ಷಣಾ ಬಜೆಟ್ 92 ಶತಕೋಟಿ...