ಉಡುಪಿ ಸಾಸ್ತಾನ ಟೋಲ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಅಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ

38

ಉಡುಪಿ ಬ್ರಹ್ಮಾವರ:ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿಯು ನಿವೃತ್ತ ಯೋಧರೊಂದಿಗೆ ಟೋಲ್ ವಸೂಲು ಮಾಡುವಾಗ ಅನುಚಿತವಾಗಿ ನಡೆದುಕೊಂಡಿರುವುದು ಅತ್ಯಂತ ಖೇದಕರವಾಗಿದೆ. ದೇಶದ ಘನತೆಯನ್ನು ಎತ್ತಿ ಹಿಡಿಯುವ ಯೋಧರೊಂದಿಗೆ ಟೋಲ್ ವಿನಾಯಿತಿ ಪತ್ರ ತೋರಿಸಿದರೂ ಬಲವಂತವಾಗಿ ಟೋಲ್ ವಸೂಲು ಮಾಡಲು ಹೊರಟಿರುವುದು ಎಲ್ಲ ದೇಶಪ್ರೇಮಿಗಳಿಗೂ ಮಾಡಿರುವ ಅವಮಾನವಾಗಿದೆ.

ಟೋಲ್ ಸಿಬ್ಬಂದಿಗೆ ಯಾರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದಿರುವುದು ಬಾರಿ ವಿಷಾದದ ಸಂಗತಿಯಾಗಿದೆ. ಇನ್ನೂ ಮುಂದಾದರೂ ಟೋಲ್ ಸಿಬ್ಬಂದಿಗಳಿಗೆ ಗೌರವಾನ್ವಿತ ಸೈನಿಕರು ಹಾಗೂ ಇತರ ನಾಗರಿಕರೊಂದಿಗೆ ಹೇಗೆ ಮಾದರಿಯಾಗಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಸೂಕ್ತ ಅರಿವು ಮೂಡಿಸುವುದು ಅಗತ್ಯವಾಗಿದೆ.

ಮಾನ್ಯ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರಿಗೆ ಮನವಿಯನ್ನು ನೀಡಲಾಯಿತು.
ತಾವು ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ನೀಡಿರುವ ದೂರನ್ನು ಪರಿಶೀಲಿಸಿ ಸದ್ರಿ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಗೌರವಾಧ್ಯಕ್ಷರಾದ ಅನ್ಸರ್ ಅಹ್ಮದ್ ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಸೇರಿಗಾರ್ತಿ, ಉಪಾಧ್ಯಕ್ಷೆ ದೇವಕಿ ಬಾರ್ಕೂರು, ಜಯಪ್ರಕಾಶ್ ಶೆಟ್ಟಿ, ನಾಗರಾಜ್, ಸಿದ್ದಣ್ಣ ಎಸ್ ಪೂಜಾರಿ , ಸವಿತಾ, ಆಶಾ. ಅನುಷ ಪಳ್ಳಿ. ಆನಂದ್ ಶೆಟ್ಟಿ. ಶಬೀರ್. ಉಮೇಶ್. ಮೊದಲಾದವರು ಉಪಸ್ಥಿತರಿದ್ದರು.

Leave a comment

Leave a Reply

Your email address will not be published. Required fields are marked *

Related Articles

ಉಡುಪಿ ಜಿಲ್ಲೆಯಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ನಾಳೆ ವ್ಯತ್ಯಯ ಗ್ರಾಹಕರಲ್ಲಿ ಸಹಕರಿಸುವಂತೆ ಮೆಸ್ಕಾಂ ಮನವಿ

ಉಡುಪಿ ಜಿಲ್ಲೆಯಾದ್ಯಂತ  ವಿದ್ಯುತ್ ರಸ್ತೆ ಕಾಮಗಾರಿ ನಡೆಯುವುದರಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ  ಎಂದು ಮೆಸ್ಕಾಂ ವಿಭಾಗದಿಂದ...

ಕರ್ಜೆ ದುರ್ಗಾಪರಮೇಶ್ವರಿ ದೇವಸ್ಥಾನ ಏಪ್ರಿಲ್ 14 ವಾರ್ಷಿಕ ಜಾತ್ರಾ ಮಹೋತ್ಸವ ಗೆಂಡ ಸೇವೆ ರಥೋತ್ಸವ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕರ್ಜೆ,ವಾರ್ಷಿಕ ಜಾತ್ರಾ ಮಹೋತ್ಸವ, ಗೆಂಡಸೇವೆ ರಥೋತ್ಸವ ದಿನಾಂಕ ದಿನಾಂಕ : 13-04-2026ನೇ...

ನಿಟ್ಟೂರಿನ ಶ್ರೀ ಧೂಮಾವತಿ ಯುವಕ ಮಂಡಲಕ್ಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಕಿಟ್ ವಿತರಣೆ

ನಿಟ್ಟೂರು: ವಿಷ್ಣುಮೂರ್ತಿ ನಗರದಲ್ಲಿರುವ ಶ್ರೀ ಧೂಮಾವತಿ ಯುವಕ ಮಂಡಲ(ರಿ)ಕ್ಕೆ ಉಡುಪಿ ಜಿಲ್ಲೆಯ ಯುವ ಸಬಲೀಕರಣ ಮತ್ತು...

ಅಕ್ರಮವಾಗಿ ಮರಳು ಕದ್ದು ಸಾಗಾಟ ಮಾಡಿದ ಲಘು ಸಂಘಟನೆ ಅಪರಾಧ ಪ್ರಕರಣ; ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು

ಉಡುಪಿಟಿಪ್ಪರ್ ಲಾರಿಯಲ್ಲಿ ಅಂಪಾರಿನ ದಕ್ಕೆಯಿಂದ ಬ್ರಹ್ಮಾವರ ಕಡೆಗೆ ಆಕ್ರಮವಾಗಿ ಮರಳನ್ನು ಕದ್ದು ತುಂಬಿಸಿಕೊoಡು ಸಾಗಾಟ ಮಾಡಿ...