ಲೋಕಾಯುಕ್ತರ ಹೆಸರಿನಲ್ಲಿ ನಗರಸಭೆ ಕಂದಾಯ ಅಧಿಕಾರಿಗೆ ಫೋನ್ ಕರೆ ಮಾಡಿ ಬೆದರಿಕೆ ಪ್ರಕರಣ ದಾಖಲು

35

ಲೋಕಾಯುಕ್ತರ ಹೆಸರಿನಲ್ಲಿ ನಗರ ಸಭೆ ಅಧಿಕಾರಿಗೆ ಫೋನ್ ಕರೆ ಮಾಡಿ ಬೆದರಿಕೆ ಪ್ರಕರಣ ದಾಖಲು ಕಪಿಲ್‌ ದೇವ್‌ ಎಸ್‌ ಗೋಡೆಮನೆ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ನಗರ ಸಭೆ, ಉಡುಪಿ ಇವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಉಡುಪಿ ನಗರ ಸಭೆಯಲ್ಲಿ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರಾಗಿ ಕರ್ತವ್ಯವನ್ನು ನಿರ್ವಹಿಸಿಕೊಂಡಿರುತ್ತಾರೆ.

ದಿನಾಂಕ : 19/01/2026 ರಂದು ಮಧ್ಯಾಹ್ನ 12:02 ಗಂಟೆಗೆ ವಾಟ್ಸಪ್‌ ಮುಖಾಂತರ ದೂರುದಾರರ ಮೊಬೈಲ್‌ ಗೆ ಯಾರೋ ಅಪರಿಚಿತ ವ್ಯಕ್ತಿಯು  ಮೊಬೈಲ್‌ ನಿಂದ  ಫೋನ್‌ ಕರೆ ಮಾಡಿ ತನ್ನ ಹೆಸರು ಚೆಲುವರಾಜ್‌ ಲೋಕಾಯುಕ್ತ ಇನ್ಸಪೆಕ್ಟರ್‌ ಮಂಗಳೂರು ಡಿವಿಜನ್‌ ನಿಂದ ಮಾತನಾಡುತ್ತಿದ್ದು “ನಿಮ್ಮ ಮೇಲೆ ಈ ಮೇಲ್‌ ಮುಖಾಂತರ ದೂರು ಬಂದಿದ್ದು, ಸದರಿ ದೂರನ್ನು ಬಗೆಹರಿಸಿಕೊಳ್ಳಿ, ನಿರಾಕರಿಸಿದರೇ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ ಹಾಗೂ ಇಲಾಖಾ ವಿಚಾರಣೆ ಮಾಡುವುದಾಗಿ ಹೇಳಿರುತ್ತಾನೆ.‌

ತದನಂತರ ಇನ್ನೊಬ್ಬ ವ್ಯಕ್ತಿಗೆ ಫೋನ್‌ ಕರೆ ಕೊಟ್ಟಿದ್ದು, ಆತನು ನಾನು ಇಲ್ಲಿ ಹಿರಿಯ ಅಧಿಕಾರಿಯಾಗಿದ್ದು, ಈಗಾಗಲೇ ನಮ್ಮ ಅಧಿಕಾರಿಯು ತಿಳಿಸಿದಂತೆ ನಡೆದುಕೊಳ್ಳಿ ಇಲ್ಲವಾದಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತದೆ” ಎಂದು ಹೇಳಿರುತ್ತಾನೆ.

ದೂರುದುದಾರರು ಈ ಬಗ್ಗೆ ಖಚಿತಪಡಿಸಿಕೊಳ್ಳಲು ಉಡುಪಿ ಲೋಕಯುಕ್ತ ಕಛೇರಿಗೆ ಹೋಗಿ “ವಾಟ್ಸಾಪ್‌ ಮುಖಾಂತರ ಫೋನ್‌ ಕರೆ ಮಾಡಿದ್ದ ವ್ಯಕ್ತಿಗಳ ಬಗ್ಗೆ ವಿಚಾರಿಸಿದಾಗ, ಆ ಹೆಸರಿನ ವ್ಯಕ್ತಿಗಳು ನಮ್ಮ ಕಚೇರಿಯಲಿಲ್ಲ ಹಾಗೂ ನಿಮಗೆ ಬಂದಂತಹ ಕರೆ ನಮ್ಮ ಕಚೇರಿಯಿಂದಲ್ಲ ಎಂದು ಹೇಳಿರುತ್ತಾರೆ.

ಲೋಕಾಯುಕ್ತ ಅಧಿಕಾರಿ ಎಂದು ಹೇಳಿ ವಂಚನೆ ಮಾಡಲು ಯತ್ನಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.”

Leave a comment

Leave a Reply

Your email address will not be published. Required fields are marked *

Related Articles

ಉಡುಪಿ ಜಿಲ್ಲೆಯಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ನಾಳೆ ವ್ಯತ್ಯಯ ಗ್ರಾಹಕರಲ್ಲಿ ಸಹಕರಿಸುವಂತೆ ಮೆಸ್ಕಾಂ ಮನವಿ

ಉಡುಪಿ ಜಿಲ್ಲೆಯಾದ್ಯಂತ  ವಿದ್ಯುತ್ ರಸ್ತೆ ಕಾಮಗಾರಿ ನಡೆಯುವುದರಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ  ಎಂದು ಮೆಸ್ಕಾಂ ವಿಭಾಗದಿಂದ...

ಕರ್ಜೆ ದುರ್ಗಾಪರಮೇಶ್ವರಿ ದೇವಸ್ಥಾನ ಏಪ್ರಿಲ್ 14 ವಾರ್ಷಿಕ ಜಾತ್ರಾ ಮಹೋತ್ಸವ ಗೆಂಡ ಸೇವೆ ರಥೋತ್ಸವ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕರ್ಜೆ,ವಾರ್ಷಿಕ ಜಾತ್ರಾ ಮಹೋತ್ಸವ, ಗೆಂಡಸೇವೆ ರಥೋತ್ಸವ ದಿನಾಂಕ ದಿನಾಂಕ : 13-04-2026ನೇ...

ನಿಟ್ಟೂರಿನ ಶ್ರೀ ಧೂಮಾವತಿ ಯುವಕ ಮಂಡಲಕ್ಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಕಿಟ್ ವಿತರಣೆ

ನಿಟ್ಟೂರು: ವಿಷ್ಣುಮೂರ್ತಿ ನಗರದಲ್ಲಿರುವ ಶ್ರೀ ಧೂಮಾವತಿ ಯುವಕ ಮಂಡಲ(ರಿ)ಕ್ಕೆ ಉಡುಪಿ ಜಿಲ್ಲೆಯ ಯುವ ಸಬಲೀಕರಣ ಮತ್ತು...

ಅಕ್ರಮವಾಗಿ ಮರಳು ಕದ್ದು ಸಾಗಾಟ ಮಾಡಿದ ಲಘು ಸಂಘಟನೆ ಅಪರಾಧ ಪ್ರಕರಣ; ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು

ಉಡುಪಿಟಿಪ್ಪರ್ ಲಾರಿಯಲ್ಲಿ ಅಂಪಾರಿನ ದಕ್ಕೆಯಿಂದ ಬ್ರಹ್ಮಾವರ ಕಡೆಗೆ ಆಕ್ರಮವಾಗಿ ಮರಳನ್ನು ಕದ್ದು ತುಂಬಿಸಿಕೊoಡು ಸಾಗಾಟ ಮಾಡಿ...