ಹೆಲ್ಪಿಂಗ್ ಹ್ಯಾಂಡ್ಸ್ ಚಾರೀಟೇಬಲ್ ಟೃಸ್ಟ್ (ರಿ.) ಕುಂದಾಪುರ ವತಿಯಿಂದ ವೀರ ಯೋಧ ಅನೂಪ್ ಪೂಜಾರಿ ಇವರ ಸವಿ‌ ನೆನಪಿನಲ್ಲಿ “ನೆತ್ತರ ನೆರವು”ಸ್ವಯಂ ಪ್ರೇರಿತ ರಕ್ತದಾನ ಶಿಬಿರ

33

ಹೆಲ್ಪಿಂಗ್ ಹ್ಯಾಂಡ್ಸ್ ಚಾರೀಟೇಬಲ್ ಟೃಸ್ಟ್ (ರಿ.) ಕುಂದಾಪುರ (ನೊಂದ ಹೃದಯಗಳಿಗೆ ನೆರವಿನ ಹಸ್ತ) ಇವರ ಆಯೋಜನೆಯಲ್ಲಿ, ರಕ್ತನಿಧಿ, ಕೆ.ಎಂ.ಸಿ ಆಸ್ಪತ್ರೆ ಮಣಿಪಾಲ ಸಹಕಾರದೊಂದಿಗೆ,*ವಿರಾಟ್ ಫ್ರೆಂಡ್ಸ್ ಹೊದ್ರಾಳಿ, ಗೆಳೆಯರ ಬಳಗ ಬೀಜಾಡಿ, JCI ಕುಂದಾಪುರ, ವೀರ ಮಹಾಕಾಳಿ ಫ಼್ರೆಂಡ್ಸ್ ಬೀಜಾಡಿ, ವೀರ ಕೇಸರಿ ಫ಼್ರೆಂಡ್ಸ್ ಕೋಟೇಶ್ವರ* ಇವರ ಸಹಯೋಗದೊಂದಿಗೆ, ದೇಶ ಸೇವೆಯಲ್ಲಿ ನಮ್ಮನ್ನಗಲಿದ ನಮ್ಮೂರಿನ ಹೆಮ್ಮೆಯ ವೀರ ಯೋಧ ಅನೂಪ್ ಪೂಜಾರಿ ಇವರ ಸವಿ‌ ನೆನಪಿನಲ್ಲಿ “ನೆತ್ತರ ನೆರವು”ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಶಾರದಾ ಕಲ್ಯಾಣ ಮಂಟಪ ಕೋಟೇಶ್ವರ ಇಲ್ಲಿ ದಿನಾಂಕ‌ – 18-01-2026 ರಂದು ಭಾನುವಾರ – ಯಶಸ್ವಿಯಾಗಿ ನೆರವೆರಿತು,

ಈ ಒಂದು ಯಶಸ್ವಿ ರಕ್ತದಾನ ಶಿಬಿರದಲ್ಲಿ ಒಟ್ಟು 117 ರಕ್ತದಾನಿಗಳು ಪಾಲ್ಗೊಂಡಿದ್ದು, ಒಟ್ಟು 100 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಸಭಾ ಕಾರ್ಯಕ್ರಮ – ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರದ ಜನಪ್ರಿಯ ಶಾಸಕರಾದ ಕಿರಣ್ ಕುಮಾರ ಕೊಡ್ಗಿಯವರು ವಹಿಸಿದ್ದು, ವೀರ ಯೋಧ ಅನೂಪ್‌ ಪೂಜಾರಿಯವರ ಸಹೋದರ ಶಿವರಾಮ್ ಅಮೀನ್ ದೀಪ‌ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು,

ಮುಖ್ಯ ಅತಿಥಿಗಳಾಗಿ ಬೀಜಾಡಿ ಮೀನುಗಾರರ ಸಹಕಾರಿ ಸಂಘ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ, ಕೆ.ಎಂ.ಸಿ‌ ಮಣಿಪಾಲ ವೈಧ್ಯರಾದ ಡಾ.ವಿವೇಕ್, ಮಿತ್ರ ಕ್ಲಿನಿಕ್ ಕೋಟೇಶ್ವರ ವೈಧ್ಯರಾದ ಡಾ.ರಾಜೇಶ್, ಕೋಟೇಶ್ವರ ಗ್ರಾ.ಪ ಅಧ್ಯಕರಾದ ಶ್ರೀಮತಿ ರಾಗಿಣಿ ದೇವಾಡಿಗ,ಹೆಲ್ಪಿಂಗ್ ಹ್ಯಾಂಡ್ಸ್ ಗೌರವಾಧ್ಯಕ್ಷರಾದ ರವೀಂದ್ರ ರಟ್ಟಾಡಿ, ಜ್ಞಾನಾನಂದ ಐರೋಡಿ,ವಿರಾಟ್ ಫ಼್ರೆಂಡ್ಸ್ ಹೊದ್ರಾಳಿ ಅಧ್ಯಕ್ಷರಾದ ವಿಶ್ವನಾಥ್ ಮೊಗವೀರ,ಗೆಳೆಯರ ಬಳಗ ಬೀಜಾಡಿ ಅಧ್ಯಕ್ಷರಾದ ನರಸಿಂಹ ಶ್ರೀಯಾನ್,JCI ಕುಂದಾಪುರ ಅಧ್ಯಕ್ಷರಾದ ರಾಕೇಶ್ ಶೆಟ್ಟಿ,

ವೀರ ಕೇಸರಿ ಕೋಟೇಶ್ವರ ಅಧ್ಯಕ್ಷರಾದ ಸಂಪತ್ ಶೇರೆಗಾರ್ ವೀರ ಮಹಾಕಾಳಿ ಫ಼್ರೆಂಡ್ಸ್ ಬೀಜಾಡಿ ಅಧ್ಯಕ್ಷರಾದ ಅಭಿಷೇಕ್ ಬೀಜಾಡಿ,ಮಿತ್ರ ಸಂಗಮ ಬೀಜಾಡಿ ಗೌರವಾಧ್ಯಕ್ಷರಾದ ವಾದಿರಾಜ್ ಹೆಬ್ಬಾರ್ ಗೋಪಾಡಿ ಉಪಸ್ಥಿತರಿದ್ದರು. *ಗೌರವ ಸನ್ಮಾನ* ಸಮಾಜಪರ ಕಾರ್ಯದಲ್ಲಿ ಹೆಸರುವಾಸಿಯಾಗಿರುವ ಇಬ್ಬರು ಸಾಧಕರಾದ *ಶ್ರೀಮತಿ ಪ್ರಭಾ ರಾವ್ ಕಲ್ಯಾಣಪುರ ಹಾಗೂ *ಶ್ರೀ ಲೋಕೇಶ್ ಅಂಕದಕಟ್ಟೆ* ಇವರಿಗೆ *ಕಡಲೂರ ಸೇವಕ* ಎನ್ನುವ ಬಿರುದನ್ನು ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸುಕನ್ಯಾ ತಲ್ಲೂರು ಕಾರ್ಯಕ್ರಮ‌ ನಿರೂಪಣೆ ಮಾಡಿದರು.

ಹೆಲ್ಪಿಂಗ್ ಸ್ಥಾಪಕರು ಹಾಗೂ ಅಧ್ಯಕ್ಷರಾದ *ಪ್ರದೀಪ್ ಮೊಗವೀರ ಕೋಟೇಶ್ವರ* ಧನ್ಯವಾದ ಸಮರ್ಪಿಸಿದರು ಕೋಷಾಧಿಕಾರಿ ಸುನೀಲ್‌ಖಾರ್ವಿ ಸಹಕರಿಸಿದರು. ಅಧ್ಯಕ್ಷರು ಹಾಗೂ ಗೌರವಾಧ್ಯಕ್ಷರು ಮತ್ತು ಸರ್ವ ಸದಸ್ಯರು ಹೆಲ್ಪಿಂಗ್ ಹ್ಯಾಂಡ್ಸ್ ಚಾರೀಟೇಬಲ್ ಟೃಸ್ಟ್ (ರಿ.) ಕುಂದಾಪುರ

Leave a comment

Leave a Reply

Your email address will not be published. Required fields are marked *

Related Articles

ನಿಟ್ಟೂರಿನ ಶ್ರೀ ಧೂಮಾವತಿ ಯುವಕ ಮಂಡಲಕ್ಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಕಿಟ್ ವಿತರಣೆ

ನಿಟ್ಟೂರು: ವಿಷ್ಣುಮೂರ್ತಿ ನಗರದಲ್ಲಿರುವ ಶ್ರೀ ಧೂಮಾವತಿ ಯುವಕ ಮಂಡಲ(ರಿ)ಕ್ಕೆ ಉಡುಪಿ ಜಿಲ್ಲೆಯ ಯುವ ಸಬಲೀಕರಣ ಮತ್ತು...

ಅಕ್ರಮವಾಗಿ ಮರಳು ಕದ್ದು ಸಾಗಾಟ ಮಾಡಿದ ಲಘು ಸಂಘಟನೆ ಅಪರಾಧ ಪ್ರಕರಣ; ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು

ಉಡುಪಿಟಿಪ್ಪರ್ ಲಾರಿಯಲ್ಲಿ ಅಂಪಾರಿನ ದಕ್ಕೆಯಿಂದ ಬ್ರಹ್ಮಾವರ ಕಡೆಗೆ ಆಕ್ರಮವಾಗಿ ಮರಳನ್ನು ಕದ್ದು ತುಂಬಿಸಿಕೊoಡು ಸಾಗಾಟ ಮಾಡಿ...

ರಾಷ್ಟ್ರೀಯ ಹೆದ್ದಾರಿ ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಸಿಲ್ಕ್ ಬಳಿ ಇರುವ ರಸ್ತೆ ವಿಭಾಜಕವನ್ನು ತೆರೆದು ಕೊಟ್ಟಿರುವುದನ್ನು ಪ್ರಶ್ನಿಸಿ ಹೋರಾಟಕ್ಕೆ ಸಿದ್ಧತೆ

ಬಹುದಿನಗಳಿಂದ ಸುದ್ದಿಯಲ್ಲಿರುವ ಉಡುಪಿಯಹೆದ್ದಾರಿ ವಿಭಾಜಕಒಡೆದ ಪ್ರಕರಣದಉಡುಪಿ ಸಾರ್ವಾಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿರುವವಿಚಾರದಲ್ಲಿ ನೆಡೆದ ಪತ್ರಿಕಾಗೋಷ್ಠಿ ಉಡುಪಿ...

ಉಡುಪಿ ಸಾಸ್ತಾನ ಟೋಲ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಅಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ

ಉಡುಪಿ ಬ್ರಹ್ಮಾವರ:ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿಯು ನಿವೃತ್ತ ಯೋಧರೊಂದಿಗೆ ಟೋಲ್ ವಸೂಲು ಮಾಡುವಾಗ ಅನುಚಿತವಾಗಿ ನಡೆದುಕೊಂಡಿರುವುದು...