ಅಶಕ್ತರಿಗೆ, ಕ್ಷಯ ರೋಗದಿಂದ ಬಳಲುತ್ತಿರುವವರಿಗೆ ದಿವ್ಯಾ0ಗ ರಕ್ಷಣಾ ಸಮಿತಿಯಿಂದ  ಆಹಾರ ಕಿಟ್ ವಿತರಣೆ:: ವಿಜಯ ಕೊಡವೂರು

29

*ಆಶಕ್ತರು, ಕ್ಷಯ ರೋಗಸ್ತರಿಗೆ ಆಹಾರ ಕಿಟ್ ವಿತರಣೆ – ಕೊಡವೂರು* ಕೊಡವೂರು ವಾರ್ಡ್ ನಲ್ಲಿ ಆಶಕ್ತರು, ಕ್ಯಾನ್ಸರ್ ಪೀಡಿತರಿಗೆ ಮತ್ತು ಕ್ಷಯ ರೋಗಸ್ತರಿಗೆ ಪೌಷ್ಟಿಕ ಆಹಾರ ಕಿಟ್ ಕಾರ್ಯಕ್ರಮ ದಿವ್ಯಾಂಗ ರಕ್ಷಣಾ ಸಮಿತಿಯ ವತಿಯಿಂದ ನಡೆಯಿತು

ದಿವ್ಯಾಂಗ ರಕ್ಷಣಾ ಸಮಿತಿಯು ಈ ಭಾಗದ ಎಲ್ಲಾ ನೋವುಗಳಿಗೆ ಧ್ವನಿಯಾಗುವಂತಹದ್ದು ಆಗುತ್ತಿದೆ. ಅದರ ಜೊತೆಯಲ್ಲಿ ಬೇರೆ ಬೇರೆ ಸಂಘ ಸಂಸ್ಥೆಗಳು ಇದಕ್ಕೆ ಸಹಕಾರ ಮಾಡುವುದರ ಮುಖಾಂತರ ಕೊಡವೂರಿನಲ್ಲಿ ಇಂತಹ ಕಾರ್ಯಕ್ರಮಗಳು ಸದಾ ನಡೆಯುತ್ತಿದೆ ಎಂದು ಕೆ. ವಿಜಯ ಕೊಡವೂರು ತಿಳಿಸಿದರು.

ಎಮ್ ಸಿ ಕೆ ಎಸ್ ಫುಡ್ ಫಾರ್ ದ ಹಂಗ್ರಿ ಫೌಂಡೇಶನ್ ಬೆಂಗಳೂರು ಇವರ ವತಿಯಿಂದ ಆರ್ಥಿಕವಾಗಿ ಹಿಂದುಳಿದವರಿಗೆ, ದಿವ್ಯಾಂಗರಿಗೆ, ಆಶಕ್ತರು, ಕ್ಯಾನ್ಸರ್ ಪೀಡಿತರಿಗೆ ಮತ್ತು ಕ್ಷಯ ರೋಗಸ್ತರು ಹೀಗೆ ಒಟ್ಟು 40 ಮಂದಿ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣಾ ಕಾರ್ಯಕ್ರಮವು ತಾ. 11-01-26 ರಂದು ಕೊಡವೂರು ವಿಪ್ರಶ್ರೀ ಸಭಾಭವನದಲ್ಲಿ ಜರುಗಿತು .

ಈ ಸುಸಂದರ್ಭದಲ್ಲಿ ಎಮ್ ಸಿ ಕೆ ಎಸ್ ಫುಡ್ ಫಾರ್ ದ ಹಂಗ್ರಿ ಫೌಂಡೇಶನ್ ಬೆಂಗಳೂರು ಇದರ ಪ್ರಮುಖರಾದ ಶ್ರೀಮತಿ ನಿಧಿ ಎಸ್. , ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ಕಾರ್ಯದರ್ಶಿ ಜಯ ಪೂಜಾರಿ ಕಲ್ಮಾಡಿ , ಸಮಾಜ ಸೇವಕರಾದ ಅಖಿಲೇಶ್ ಎ, ಯು. ಆರ್. ಡಬ್ಲ್ಯೂ ಸರ್ವೋತ್ತಮ್ ಎಸ್ ಅಮೀನ್,ರವಿ ಪಾಳೆಕಟ್ಟೆ, ತಿಲಕ್ ಮಾಬೆನ್ ಮತ್ತಿತರರು ಉಪಸ್ಥಿತರಿದ್ದರು. ದಿವ್ಯಾಂಗ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಕೊಪ್ಪಲ್ ತೋಟ ಸ್ವಾಗತಿಸಿ – ವಂದಿಸಿದರು.

Leave a comment

Leave a Reply

Your email address will not be published. Required fields are marked *

Related Articles

ಉಡುಪಿ ಜಿಲ್ಲೆಯಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ನಾಳೆ ವ್ಯತ್ಯಯ ಗ್ರಾಹಕರಲ್ಲಿ ಸಹಕರಿಸುವಂತೆ ಮೆಸ್ಕಾಂ ಮನವಿ

ಉಡುಪಿ ಜಿಲ್ಲೆಯಾದ್ಯಂತ  ವಿದ್ಯುತ್ ರಸ್ತೆ ಕಾಮಗಾರಿ ನಡೆಯುವುದರಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ  ಎಂದು ಮೆಸ್ಕಾಂ ವಿಭಾಗದಿಂದ...

ಕರ್ಜೆ ದುರ್ಗಾಪರಮೇಶ್ವರಿ ದೇವಸ್ಥಾನ ಏಪ್ರಿಲ್ 14 ವಾರ್ಷಿಕ ಜಾತ್ರಾ ಮಹೋತ್ಸವ ಗೆಂಡ ಸೇವೆ ರಥೋತ್ಸವ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕರ್ಜೆ,ವಾರ್ಷಿಕ ಜಾತ್ರಾ ಮಹೋತ್ಸವ, ಗೆಂಡಸೇವೆ ರಥೋತ್ಸವ ದಿನಾಂಕ ದಿನಾಂಕ : 13-04-2026ನೇ...

ನಿಟ್ಟೂರಿನ ಶ್ರೀ ಧೂಮಾವತಿ ಯುವಕ ಮಂಡಲಕ್ಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಕಿಟ್ ವಿತರಣೆ

ನಿಟ್ಟೂರು: ವಿಷ್ಣುಮೂರ್ತಿ ನಗರದಲ್ಲಿರುವ ಶ್ರೀ ಧೂಮಾವತಿ ಯುವಕ ಮಂಡಲ(ರಿ)ಕ್ಕೆ ಉಡುಪಿ ಜಿಲ್ಲೆಯ ಯುವ ಸಬಲೀಕರಣ ಮತ್ತು...

ಅಕ್ರಮವಾಗಿ ಮರಳು ಕದ್ದು ಸಾಗಾಟ ಮಾಡಿದ ಲಘು ಸಂಘಟನೆ ಅಪರಾಧ ಪ್ರಕರಣ; ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು

ಉಡುಪಿಟಿಪ್ಪರ್ ಲಾರಿಯಲ್ಲಿ ಅಂಪಾರಿನ ದಕ್ಕೆಯಿಂದ ಬ್ರಹ್ಮಾವರ ಕಡೆಗೆ ಆಕ್ರಮವಾಗಿ ಮರಳನ್ನು ಕದ್ದು ತುಂಬಿಸಿಕೊoಡು ಸಾಗಾಟ ಮಾಡಿ...