ಉಡುಪಿ ಪರ್ಯಾಯ ಮೂಲಸೌಕರ್ಯಕ್ಕೆ 6 ಕೋಟಿ ರೂಪಾಯಿ : ಉಸ್ತುವಾರಿ ಸಚಿವೆ – ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ನವೀನ್ ಸಾಲಿಯಾನ್ ಕೃತಜ್ಞತೆ

43

ಉಡುಪಿ: ಪರ್ಯಾಯದ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರ ವಿಶೇಷ ಮುತುವರ್ಜಿಯಲ್ಲಿ ಸುಮಾರು 6 ಕೋಟಿ ರೂ.ಗಳ ವೆಚ್ಚದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ಕುರಿತು ಜಿಲ್ಲಾಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದು ಶ್ಲಾಘನೀಯ ಕಾರ್ಯ ಎಂದು ಯುವ ಕಾಂಗ್ರೆಸ್ ಮುಖಂಡ ನವೀನ್ ಸಾಲಿಯಾನ್ ಹೇಳಿದ್ದಾರೆ.

ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳ ಜೊತೆ ಮಂಗಳವಾರ ವಿಡಿಯೋ ಸಂವಾದ ನಡೆಸಿದ ಸಚಿವರು, ಪರ್ಯಾಯ ಸುಗಮವಾಗಿ ನಡೆಯಲು ರಸ್ತೆ ಅಭಿವೃದ್ಧಿ ಸೇರಿದಂತೆ ನಗರದಲ್ಲಿ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡಬೇಕು. ಸಮಯಾವಕಾಶ ಕಡಿಮೆ ಇರುವುದರಿಂದ ಸಮರೋಪಾದಿಯಲ್ಲಿ ಹಗಲು- ರಾತ್ರಿ ಕೆಲಸ ಮಾಡಬೇಕು. ಜಿಲ್ಲೆಯ ಎಲ್ಲ ಕಾಂಗ್ರೆಸ್ ಹಾಗು ಬಿಜೆಪಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಪರ್ಯಾಯ ಮಹೋತ್ಸವದ ಯಶಸ್ಸಿಗೆ 6 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಸೂಚಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.

ಈ ನಿಟ್ಟಿನಲ್ಲಿ ವಿಶೇಷ ಸಹಕಾರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಉಡುಪಿ ಯುವ ಕಾಂಗ್ರೆಸ್ ಮುಖಂಡ ನವೀನ್ ಸಾಲಿಯಾನ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ಉಡುಪಿ ಜಿಲ್ಲೆಯಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ನಾಳೆ ವ್ಯತ್ಯಯ ಗ್ರಾಹಕರಲ್ಲಿ ಸಹಕರಿಸುವಂತೆ ಮೆಸ್ಕಾಂ ಮನವಿ

ಉಡುಪಿ ಜಿಲ್ಲೆಯಾದ್ಯಂತ  ವಿದ್ಯುತ್ ರಸ್ತೆ ಕಾಮಗಾರಿ ನಡೆಯುವುದರಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ  ಎಂದು ಮೆಸ್ಕಾಂ ವಿಭಾಗದಿಂದ...

ಕರ್ಜೆ ದುರ್ಗಾಪರಮೇಶ್ವರಿ ದೇವಸ್ಥಾನ ಏಪ್ರಿಲ್ 14 ವಾರ್ಷಿಕ ಜಾತ್ರಾ ಮಹೋತ್ಸವ ಗೆಂಡ ಸೇವೆ ರಥೋತ್ಸವ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕರ್ಜೆ,ವಾರ್ಷಿಕ ಜಾತ್ರಾ ಮಹೋತ್ಸವ, ಗೆಂಡಸೇವೆ ರಥೋತ್ಸವ ದಿನಾಂಕ ದಿನಾಂಕ : 13-04-2026ನೇ...

ನಿಟ್ಟೂರಿನ ಶ್ರೀ ಧೂಮಾವತಿ ಯುವಕ ಮಂಡಲಕ್ಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಕಿಟ್ ವಿತರಣೆ

ನಿಟ್ಟೂರು: ವಿಷ್ಣುಮೂರ್ತಿ ನಗರದಲ್ಲಿರುವ ಶ್ರೀ ಧೂಮಾವತಿ ಯುವಕ ಮಂಡಲ(ರಿ)ಕ್ಕೆ ಉಡುಪಿ ಜಿಲ್ಲೆಯ ಯುವ ಸಬಲೀಕರಣ ಮತ್ತು...

ಅಕ್ರಮವಾಗಿ ಮರಳು ಕದ್ದು ಸಾಗಾಟ ಮಾಡಿದ ಲಘು ಸಂಘಟನೆ ಅಪರಾಧ ಪ್ರಕರಣ; ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು

ಉಡುಪಿಟಿಪ್ಪರ್ ಲಾರಿಯಲ್ಲಿ ಅಂಪಾರಿನ ದಕ್ಕೆಯಿಂದ ಬ್ರಹ್ಮಾವರ ಕಡೆಗೆ ಆಕ್ರಮವಾಗಿ ಮರಳನ್ನು ಕದ್ದು ತುಂಬಿಸಿಕೊoಡು ಸಾಗಾಟ ಮಾಡಿ...