ಅಮೆರಿಕಾ ವೀಸಾ ವಿಳಂಬ ಬೆನ್ನಲ್ಲೇ ಭಾರತೀಯ ವೀಸಾ ಅರ್ಜಿದಾರರಿಗೆ ಹೆಚ್ಚಾಗುತ್ತಿದೆ ಫೇಕ್‌ ಏಜೆಂಟ್‌ಗಳ ಕಾಟ

55

ಹೊಸದಿಲ್ಲಿ : ಅಮೆರಿಕಾ ವೀಸಾ ವಿಳಂಬ ಬೆನ್ನಲ್ಲೇ ಭಾರತೀಯ ವೀಸಾ ಅರ್ಜಿದಾರರಿಗೆ ಹೆಚ್ಚಾಗುತ್ತಿದೆ ಫೇಕ್‌ ಏಜೆಂಟ್‌ಗಳ ಕಾಟ ಏಜೆಂಟ್ ಗಳ ತ್ವರಿತ ವೀಸಾ ಅನುಮೋದನೆ ಎಂಬ ಭರವಸೆಗಳಿಗೆ ಮರುಳಾಗದಂತೆ ಅಮೆರಿಕಾದ ರಾಯಭಾರ ಕಚೇರಿ ಎಚ್ಚರಿಕೆ ವೀಸಾ ಪ್ರಕಿಯೆಗಳಿಗೆ ಕೇವಲ ಭಾರತದಲ್ಲಿನ ಅಮೆರಿಕನ್‌ ಕಾನ್ಸುಲೇಟ್‌ ಅನ್ನು ಮಾತ್ರ ಅವಲಂಬಿಸಿ ಎಂದು ಸೂಚನೆ ಅಮೆರಿಕನ್ ವೀಸಾ

ಅಮೆರಿಕಾಗೆ ವಲಸೆ ಹೋಗಲು ಬಯಸುವವರಲ್ಲಿ ಅತಿಹೆಚ್ಚು ಜನ ಭಾರತೀಯರೇ ಇದ್ದಾರೆ.ಆದರೆ ಟ್ರಂಪ್‌ ಸರ್ಕಾರದ ಆಡಳಿತ ವಿರೋಧಿ ನೀತಿ ಅದರಲ್ಲೂ ಪ್ರಮುಖವಾಗಿ ವೀಸಾಗಳಿಗೆ ಸೋಶಿಯಲ್‌ ಸ್ಕ್ರೀನಿಂಗ್‌ ಸೇರಿದಂತೆ ಹಲವು ವಿಚಾರಗಳಿಂದ ವೀಸಾ ಸಂದರ್ಶಗಳನ್ನು ಮೂಂದೂಡುತ್ತಿದ್ದಾರೆ.

ಇದನ್ನೇ, ಅವಕಾಶ ಮಾಡಿಕೊಂಡಿರುವ ಕೆಲ ಏಜೆನ್ಸಿಗಳು ಭಾರತೀಯರಿಗೆ ವೀಸಾ ಖಾತ್ರಿಪಡಿಸುವ ಅಥವಾ ತ್ವರಿತ ಅನುಮೋದನೆ ನೀಡುವ ಭರವಸೆ ನೀಡುತ್ತಿದ್ದು, ಹಣವನ್ನು ದೋಚುವ ಕೆಲಸ ಮಾಡಿ ಮೋಸಗೊಳಿಸುತ್ತಿದ್ದಾರೆ.

ಭಾರತೀಯ ವೀಸಾ ಅರ್ಜಿದಾರರಿಗೆ ಅಮೆರಿಕಾ ಎಚ್ಚರಿಕೆ ಇದರಿಂದ ಎಚ್ಚೆತ್ತ, ಭಾರತದಲ್ಲಿರುವ ಅಮೆರಿಕಾದ ರಾಯಭಾರ ಕಚೇರಿ ಇಂತವರಿಂದ ವೀಸಾ ಅರ್ಜಿದಾರರು ಜಾಗರೂಕತೆಯಿಂದರಬೇಕು ಎಂದು ಎಚ್ಚರಿಸಿದೆ. ಈ ಕುರಿತು ತನ್ನ ಅಧಿಕೃತ X ಖಾತೆಯಲ್ಲಿ ಹೇಳಿಕೆ ಹೊರಡಿಸಿದೆ.

ಈ ಕುರಿತು ಹೇಳಿಕೆಯಲ್ಲಿ “ಖಾತ್ರಿಯಾಗಿ ವೀಸಾ ಸಿಗುತ್ತದೆ ಅಥವಾ ಬೇಗನೆ ಅಪ್ರೂವಲ್ ಆಗುತ್ತದೆ ಎಂದು ಹೇಳುವ ಮೆಸೇಜ್‌ಗಳು ಅಥವಾ ಏಜೆಂಟರನ್ನು ನೋಡಿದ್ದೀರಾ? ವೀಸಾ ಸ್ಕ್ಯಾಮ್‌ಗಳು ಮತ್ತು ವಂಚನೆಗಳು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಾಮಾನ್ಯವಾಗಿದೆ. ಇವು ನಿಮ್ಮ ಸಮಯ, ಹಣ ಮತ್ತು ನಿಮ್ಮ ಪ್ರಯಾಣದ ಯೋಜನೆಗಳನ್ನು ಹಾಳುಮಾಡಬಹುದು,” ಎಂದು ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ.

ಅಲ್ಲದೆ, ವೀಸಾ ಅರ್ಜಿದಾರರಿಗೆ ಕೆಲ ಸೂಚನೆಗಳನ್ನು ನೀಡಿದ್ದು, ಅರ್ಜಿದಾರರು ಎಚ್ಚರದಿಂದಿರಬೇಕು. ಅರ್ಜಿದಾರರು ಅಧಿಕೃತ ವಿಧಾನಗಳನ್ನು ಅನುಸರಿಸಬೇಕು ಮತ್ತು ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ವಿಶ್ವಾಸಾರ್ಹ ಮೂಲಗಳನ್ನು ಮಾತ್ರ ಅವಲಂಬಿಸಬೇಕು ಎಂದು ಅದು ಒತ್ತಿ ಹೇಳಿದೆ. ಅಮೆರಿಕಾ ವೀಸಾವನ್ನು ಪಡೆಯಲು ಏಕೈಕ ಮಾರ್ಗವೆಂದರೆ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್ ಮೂಲಕ ಮಾತ್ರ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

“ಅಪಾಯಿಂಟ್‌ಮೆಂಟ್ ಕಾಯ್ದಿರಿಸಲು ಏಕೈಕ ಮಾರ್ಗವೆಂದರೆ ನಮ್ಮ ಆನ್‌ಲೈನ್ ವೇಳಾಪಟ್ಟಿ ಪೋರ್ಟಲ್ www.ustraveldocs.com ಮೂಲಕ ಮಾತ್ರ ಎಂದು ತಿಳಿಸಿದ್ದು, ಯಾರಾದರೂ ಈ ಪ್ರಕ್ರಿಯೆಯ ಹೊರಗೆ ನಿಮಗೆ ವೀಸಾ ಕೊಡಿಸುವುದಾಗಿ ಹೇಳಿದರೆ, ಅವರು ನಿಮ್ಮನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಿ” ಎಂದು ರಾಯಭಾರ ಕಚೇರಿ ಹೇಳಿದೆ.

ಅಮೆರಿಕಾ ವೀಸಾ ಪಡೆಯಲು ಏಜೆಂಟರ ಅಗತ್ಯವಿಲ್ಲ ಅಲ್ಲದೆ, ಅರ್ಜಿದಾರರಲ್ಲಿ ಮೂಡಬಹುದಾದ ವೀಸಾ ಏಜೆಂಟರನ್ನು ಸಂಪರ್ಕಿಸಬೇಕೇ ಎಂಬ ಪ್ರಶ್ನೆಗಳಿಗೆ ಉತ್ತರಿಸಿರುವ ರಾಯಭಾರ ಕಚೇರಿ ಯಾವುದೇ ಏಜೆಂಟ್, ಫಿಕ್ಸರ್ ಅಥವಾ ಟ್ರಾವೆಲ್ ಏಜೆನ್ಸಿ ಅಮೆರಿಕಾ ವೀಸಾವನ್ನು ಖಾತರಿಪಡಿಸಲು ಸಾಧ್ಯವಿಲ್ಲ.ಅನೇಕ ಏಜೆಂಟರು ಯಶಸ್ಸಿನ ಭರವಸೆ ನೀಡಬಹುದು ಆದರೆ ಆಗಾಗ್ಗೆ ಸುಳ್ಳು ಮಾಹಿತಿ ನೀಡಿ ಅತಿಯಾದ ಶುಲ್ಕ ವಿಧಿಸುತ್ತಾರೆ. ವೀಸಾ ಅರ್ಜಿ ಪ್ರಕ್ರಿಯೆಯಲ್ಲಿ ಅಧಿಕೃತವಾಗಿ ತಿಳಿಸಲಾದ ಶುಲ್ಕಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 

ಐಟಿ ಉದ್ಯೋಗಿಗಳ ಸ್ಥಿತಿ ಏನು? ಅಲ್ಲದೆ, ತಪ್ಪು ಮಾಹಿತಿಗಳಿಂದ ಜಾಗರೂಕರಾಗಿರಬೇಕು ಎಂದು ತಿಳಿಸಿದ್ದು, ತಪ್ಪು ಅಥವಾ ದಾರಿತಪ್ಪಿಸುವ ಮಾಹಿತಿಯ ಬಗ್ಗೆ ಎಚ್ಚರದಿಂದಿರಲು ಮತ್ತು ವಿಶ್ವಾಸಾರ್ಹ ಮತ್ತು ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಬೇಕು ಎಂದು ಸಲಹೆ ನೀಡಿದೆ.

“ಖಚಿತವಾದ ಮಾಹಿತಿಗಾಗಿ, ಅರ್ಜಿದಾರರು ಅಧಿಕೃತ ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ವೆಬ್‌ಸೈಟ್ travel.state.gov ಅಥವಾ ಯುಎಸ್ ರಾಯಭಾರ ಕಚೇರಿ ಭಾರತ ವೀಸಾ ವೆಬ್‌ಸೈಟ್ in.usembassy.gov/visas ಗೆ ಭೇಟಿ ನೀಡಲು ಪ್ರೋತ್ಸಾಹಿಸುತ್ತೇವೆ ಎಂದು ಹೇಳಿದೆ.

ಹೊಸ ಯುಎಸ್ ನೀತಿಗಳಿಂದಾಗಿ ನೂರಾರು ಭಾರತೀಯ H-1B ವೀಸಾ ಹೊಂದಿರುವವರು ಮತ್ತು ಅರ್ಜಿದಾರರು ತಮ್ಮ ವೀಸಾ ಪ್ರಕ್ರಿಯೆಯಲ್ಲಿ ದೊಡ್ಡ ವಿಳಂಬವಾಗಿದ್ದು, ಡಿ.15 ರಂದು ಅಥವಾ ನಂತರ ನಿಗದಿಯಾಗಿದ್ದ ಸಂದರ್ಶನಗಳನ್ನು ಅಕ್ಟೋಬರ್‌ 2026ರ ವರೆಗೆ ಮುಂದೂಡಿ ಆದೇಶ ಹೊರಡಿಸಿದೆ.ಇನ್ನು, ಅದನ್ನೇ ಲಾಭಮಾಡಿಕೊಳ್ಳುತ್ತಿರುವ ದಂಧೆಕೋರರ ಹಾವಳಿ ಬೆನ್ನಲ್ಲೇ ಈ ಎಚ್ಚರಿಕೆ ಬಂದಿರುವುದು ವೀಸಾ ಅರ್ಜಿದಾರರಿಗೆ ಎಚ್ಚರಿಕೆಯ ಗಂಟೆಯಾಗಲಿದೆ.”

Leave a comment

Leave a Reply

Your email address will not be published. Required fields are marked *

Related Articles

ಕೊಡಗು, ಬೀದರ್, ಬಳ್ಳಾರಿ, ಚಿತ್ರದುರ್ಗ ಮತ್ತು ಮೈಸೂರು ಸೇರಿದಂತೆ ರಾಜ್ಯದ ಎಂಟು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭ್ರಷ್ಟ ಅಧಿಕಾರಿಗೆ...

ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆ ಯ ಚಿಂತೆ ಬಿಟ್ಟು ಐಪಿಎಲ್ ಪಂದ್ಯಾಟದ ಉಚಿತ ಟಿಕೆಟ್ ಗೆ ಮುಗಿಬಿದ್ದ ರಾಜ್ಯದ 221 ಶಾಸಕರು

ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್  ಟೂರ್ನಿಯ 11ನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ...

ದಾವಣಗೆರೆ ಉಪ ಚುನಾವಣೆ ಯಾರಿಗೆ ಟಿಕೆಟ್ ಕೊಟ್ಟರೂ ನಾಯಕರಿಂದ ಒಟ್ಟಾಗಿ ಕೆಲಸ ಮಾಡುವ ಭರವಸೆ:: ಡಿಕೆ ಶಿವಕುಮಾರ್

ಬೆಂಗಳೂರು: ಉಪಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಒಮ್ಮತದಿಂದ ಕೆಲಸ ಮಾಡುವುದಾಗಿ ಸಚಿವ ಎಸ್ ಎಸ್...

ಮದುವೆಯಾಗಬೇಕಿದ್ದ ಬಾಲಕಿಯ ಎದೆ ಭಾಗ ಕತ್ತರಿಸಿ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಭಾವಿ ಪತಿ ಸೈಯದ್

ಬೆಂಗಳೂರು: ತನ್ನನ್ನು  ಮದುವೆಯಾಗಬೇಕಿದ್ದ ಬಾಲಕಿಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಭಾವಿ ಪತಿಯೇ ಬರ್ಬರವಾಗಿ...