ಮದುವೆಯಾಗಬೇಕಿದ್ದ ಬಾಲಕಿಯ ಎದೆ ಭಾಗ ಕತ್ತರಿಸಿ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಭಾವಿ ಪತಿ ಸೈಯದ್

46
ಬೆಂಗಳೂರು: ತನ್ನನ್ನು  ಮದುವೆಯಾಗಬೇಕಿದ್ದ ಬಾಲಕಿಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಭಾವಿ ಪತಿಯೇ ಬರ್ಬರವಾಗಿ ಹತ್ಯೆಮಾಡಿರುವ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿದೆ.
ಡಿಜೆ ಹಳ್ಳಿಯ ಈರುಳ್ಳಿ ಮಾರ್ಕೆಟ್ನಲ್ಲಿ ಕೆಲಸ ಮಾಡ್ತಿದ್ದ ಸೈಯದ್ ಶಬೀಲ್ ಈ ಕೃತ್ಯ ಎಸಗಿದ್ದಾನೆ. ಕೋಲಾರ ಮೂಲದ ಅಪ್ರಾಪ್ತೆ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಸೈಯದ್ ಆಕೆ ಜೊತೆ ಸುತ್ತಾಡಿಕೊಂಡಿದ್ದನು. ಈ ವಿಷಯ ತಿಳಿದು ಪೋಷಕರು ಇಬ್ಬರಿಗೂ 2025 ಜೂನ್ ನಲ್ಲಿ ಎಂಗೇಜ್ಮೆಂಟ್ ಮಾಡಿದ್ದರು.
ನಿಶ್ಚಿತಾರ್ಥವಾದ ನಂತರ ಸೈಯದ್ ಗೆ ಭಾವಿ ಪತ್ನಿ ಮೇಲೆ ಅನುಮಾನ ಮೂಡತೊಡಗಿದೆ. ಹೀಗಾಗಿ ಡಿಜೆ ಹಳ್ಳಿಯಿಂದ ಸ್ವಲ್ಪ ದೂರದ ಸಕ್ಕರೆ ಮಂಡಿಯಲ್ಲಿ ಸಂಬಂಧಿಕರ ಪಾಳು ಬಿದ್ದ ಜಾಗಕ್ಕೆ ಹುಡುಗಿಯನ್ನು ಕರೆಸಿಕೊಂಡಿದ್ದಾನೆ. ಆಕೆ ಮನೆಯಲ್ಲಿಯೇ ಮೊಬೈಲ್ ಬಿಟ್ಟು ಹೋಗಿದ್ದಳು.
ಎಷ್ಟೇ ಸಮಯ ಕಳೆದರೂ ಬಾಲಕಿ ಮನೆಗೆ ಬಾರದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಕೊನೆಗೆ ಇಬ್ಬರೂ ಭೇಟಿಯಾಗುತ್ತಿದ್ದ ಜಾಗಕ್ಕೆ ಹೋಗಿ ನೋಡಿದಾಗ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಅಪ್ರಾಪ್ತೆ ಶವ ಪತ್ತೆಯಾಗಿತ್ತು.
ಆಕೆಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು, ದೇಹದ ಮೇಲೆಲ್ಲ 17 ಬಾರಿ ಚುಚ್ಚಿ ಕ್ರೌರ್ಯ ಮೆರೆದಿದ್ದಾನೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Leave a Reply

Your email address will not be published. Required fields are marked *

Related Articles

50 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ದಾಳಿ  ತಹಶೀಲ್ದಾರ್ ಬಂಧನ

ಧಾರವಾಡ: ಕೊಟ್ಯಂತರ ರೂಪಾಯಿ ಬೆಲೆ ಬಾಳುವ ಖರಾಬು ಜಮೀನಿನ ದಾಖಲೆ ತಿದ್ದುಪಡಿ ಮಾಡಿ ಕೊಡಲು 50...

ಜಮ್ಮು ಮತ್ತು ಕಾಶ್ಮೀರ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ ಒಬ್ಬ ಉಗ್ರನ ಹತ್ಯೆ

ಬುಡ್ಗಾಮ್: ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಅಶ್ದಾರ್ ಗಲಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ನಡೆದ...

ಮಹಿಳಾ ಸಬ್ ಇನ್ಸ್ಪೆಕ್ಟರ್ ಗೆ ಕಪಾಳಮೋಕ್ಷ ಪ್ರಕರಣ ಬಿಜೆಪಿ ಶಾಸಕ ಸುರೇಶ್‌ಗೌಡ ಪುತ್ರಿ ಜಾಮೀನು ಅರ್ಜಿ ವಜಾ ಐಶ್ವರ್ಯ ಬಂಧನಕ್ಕಾಗಿ ತೀವ್ರ ಶೋಧ

ಮಂಡ್ಯ: ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿರುವ ಶಾಸಕ ಸುರೇಶ್...

ಅಧಿಕಾರಿ ಸೋಗಿನಲ್ಲಿ ಜನರಿಗೆ ವಂಚನೆ: ಮಂಗಳೂರು ಸಿಸಿಬಿ ಕಾರ್ಯಾಚರಣೆ; ಆರೋಪಿ ಬಂಧನ

ಮಂಗಳೂರು: ರಾಷ್ಟ್ರೀಯ ಅಪರಾಧ ತನಿಖಾ ದಳದ ಅಧಿಕಾರಿ ಎಂದು ಹೇಳಿಕೊಂಡು ಜನರಿಂದ ಹಣ ವಸೂಲಿ ಮಾಡಿದ್ದ...