ಗೂಗಲ್ ಪೇ ವತಿಯಿಂದ ಹೊಸ ಕ್ರೆಡಿಟ್ ಕಾರ್ಡ್ ಬಿಡುಗಡೆ

49

ನವದೆಹಲಿ : ಗೂಗಲ್ ಪೇ ವತಿಯಿಂದ ಹೊಸ ಕ್ರೆಡಿಟ್ ಕಾರ್ಡ್ ಬಿಡುಗಡೆ. ಇದು ಭಾರತದ ಮೊಟ್ಟಮೊದಲ ಯುಪಿಐ ಲಿಂಕ್ಡ್ ಕ್ರೆಡಿಟ್ ಕಾರ್ಡ್. ಈ ಕಾರ್ಡ್ ಪಡೆಯುವುದು ಹೇಗೆ, ಅದರ ಪ್ರಯೋಜನಗಳೇನು? ಇಲ್ಲಿದೆ ವಿವರಣೆ. ಗೂಗಲ್ ಪೇ ಕ್ರೆಡಿಟ್ ಕಾರ್ಡ್.

ಡಿಜಿಟಲ್ ಪಾವತಿ ಆ್ಯಪ್ ಆಗಿರುವ ಗೂಗಲ್ ಪೇ (Google Pay) ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕ್ ಆಗಿರುವ ಆ್ಯಕ್ಸಿಸ ಬ್ಯಾಂಕ್ ಸಹಯೋಗದಲ್ಲಿ ಭಾರತದಲ್ಲಿ ಮೊದಲ ಬಾರಿ ಯುಪಿಐ ಜೊತೆಗೆ ಲಿಂಕ್ ಆಗಿರುವ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಲಾಗಿದೆ.

ಇದು ಭಾರತದ ರುಪೇ ಮಾದರಿಯ ಕ್ರೆಡಿಟ್ ಕಾರ್ಡ್ ಆಗಿದ್ದು, ಇದಕ್ಕೆ ಗೂಗಲ್ ಪ್ಲೇ- ಫ್ಲೆಕ್ಸ್ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಎಂದು ಹೆಸರಿಸಲಾಗಿದೆ ಮತ್ತು ಅದು ರುಪೇ ಪಾವತಿ ನೆಟ್ ವರ್ಕ್ ಮೇಲೆ ಕಾರ್ಯನಿರ್ವಹಿಸುತ್ತದೆ. ಈ ಕಾರ್ಡ್ ಪಡೆಯಲು ಆ್ಯಕ್ಸಿಸ್ ಬ್ಯಾಂಕ್ ಖಾತೆ ಹೊಂದಿರಬೇಕಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಈ ಹೊಸ ಕಾರ್ಡ್ UPI ಪಾವತಿ ಪದ್ಧತಿಯಲ್ಲೇ ಸಾಲ ಸೌಲಭ್ಯ (ಕ್ರೆಡಿಟ್) ನೀಡುತ್ತದೆ. ಬಳಕೆದಾರರು ಗೂಗಲ್ ಪೇ ಆಪ್ ಮೂಲಕ ಯಾವುದೇ ದಾಖಲೆಗಳಿಲ್ಲದೆ ಈ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬಹುದು. ಕೆಲವು ನಿಮಿಷಗಳಲ್ಲಿ ತಕ್ಷಣವೇ ಈ ಕಾರ್ಡ್ ಲಭ್ಯವಾಗುತ್ತದೆ.

ಈ ಕ್ರೆಡಿಟ್ ಕಾರ್ಡ್ ವಿಶೇಷತೆಗಳು UPI ಮೂಲಕ ಪಾವತಿ ಮಾಡಲು ಹಾಗೂ ಆನ್‌ಲೈನ್ ಮತ್ತು ಆಫ್‌ಲೈನ್ ವ್ಯವಹಾರಗಳಲ್ಲಿ ಬಳಸಲು ಸಾಧ್ಯ. “ಸ್ಟಾರ್ಸ್” ಎಂಬ ರಿವಾರ್ಡ್ ಸಿಸ್ಟಂ — ಈ ಕಾರ್ಡ್ ಮೂಲಕ ಕೈಗೊಳ್ಳಲಾಗುವ ಪ್ರತಿ ವ್ಯವಹಾರಕ್ಕೆ ಸ್ಟಾರ್‌ಗಳು ದೊರೆಯುತ್ತವೆ. ಒಂದು ಸ್ಟಾರ್ ಗೆ ಒಂದು ರೂ. ಸಿಗುತ್ತದೆ. ಸ್ಟಾರ್ ಗಳು ಹೆಚ್ಚಾದಷ್ಟೂ ನಿಮಗೆ ಸಿಗುವ ದುಡ್ಡೂ ಹೆಚ್ಚಾಗುತ್ತದೆ.

ಅವುಗಳನ್ನು ತಕ್ಷಣವೇ ಮುಂದಿನ ಖರೀದಿಯಲ್ಲಿ ಬಳಸಬಹುದು. ಬಳಕೆದಾರರು ಬಿಲ್‌ಗಳನ್ನು ಪೂರ್ಣವಾಗಿ ಪಾವತಿಸಬಹುದು ಅಥವಾ ಅವರು ಕೋರಿದರೆ ಅಂತಿಮ ಬಾಕಿ ಮೊತ್ತವನ್ನು ಇಎಂಐಗೆ ಪರಿವರ್ತನೆ ಮಾಡಬಹುದು. ಕಾರ್ಡ್‌ನ್ನು ಸಂಪೂರ್ಣವಾಗಿ ಆ್ಯಪ್ ನಲ್ಲಿಯೇ ನಿರ್ವಹಿಸಬಹುದು.

ಉದಾಹರಣೆಗೆ, ವ್ಯಾಪಾರದ ಮಿತಿ, ಬ್ಲಾಕ್/ಅನ್‌ಬ್ಲಾಕ್ ಮಾಡುವುದು, ಪಿನ್ ರಿಸೆಟ್ ಮಾಡುವುದು ಮುಂತಾದವನ್ನು ಆ್ಯಪ್ ಮೂಲಕವೇ ನಿರ್ವಹಿಸಬಹುದು. ಗೂಗಲ್ ನಲ್ಲಿ ಟ್ರೆಂಟ್ ‘ಗೂಗಲ್ ಪೇ ಕ್ರೆಡಿಟ್ ಕಾರ್ಡ್’ ವಿಚಾರ ಗೂಗಲ್ ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ.

ಅನೇಕ ಗೂಗಲ್ ಬಳಕೆದಾರರು ಈ ಕಾರ್ಡ್ ಬಗ್ಗೆ ತಿಳಿಯಲು ಗೂಗಲ್ ಸರ್ಚ್ ಇಂಜಿನ್ ನಲ್ಲಿ ಹುಡುಕಾಟ ನಡೆಸಿದ್ದಾರೆ. ಕರ್ನಾಟಕದಲ್ಲಿ ಶೇ. 100ರಷ್ಟು ಗೂಗಲ್ ಬಳಕೆದಾರರು ಇದಕ್ಕಾಗಿ ಹುಡುಕಾಟ ನಡೆಸಿದರೆ, ಚಂಡೀಗಡದಲ್ಲಿ ಶೇ. 95, ಹರ್ಯಾಣದಲ್ಲಿ ಶೇ. 95, ತೆಲಂಗಾಣದಲ್ಲಿ ಶೇ. 94 ಹಾಗೂ ಬಿಹಾರದಲ್ಲಿ ಶೇ. 88ರಷ್ಟು ಬಳಕೆದಾರರು ಇದಕ್ಕಾಗಿ ಹುಡುಕಾಟ ನಡೆಸಿದ್ದಾರೆ.”

Leave a comment

Leave a Reply

Your email address will not be published. Required fields are marked *

Related Articles

ಕೊಡಗು, ಬೀದರ್, ಬಳ್ಳಾರಿ, ಚಿತ್ರದುರ್ಗ ಮತ್ತು ಮೈಸೂರು ಸೇರಿದಂತೆ ರಾಜ್ಯದ ಎಂಟು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭ್ರಷ್ಟ ಅಧಿಕಾರಿಗೆ...

ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆ ಯ ಚಿಂತೆ ಬಿಟ್ಟು ಐಪಿಎಲ್ ಪಂದ್ಯಾಟದ ಉಚಿತ ಟಿಕೆಟ್ ಗೆ ಮುಗಿಬಿದ್ದ ರಾಜ್ಯದ 221 ಶಾಸಕರು

ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್  ಟೂರ್ನಿಯ 11ನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ...

ದಾವಣಗೆರೆ ಉಪ ಚುನಾವಣೆ ಯಾರಿಗೆ ಟಿಕೆಟ್ ಕೊಟ್ಟರೂ ನಾಯಕರಿಂದ ಒಟ್ಟಾಗಿ ಕೆಲಸ ಮಾಡುವ ಭರವಸೆ:: ಡಿಕೆ ಶಿವಕುಮಾರ್

ಬೆಂಗಳೂರು: ಉಪಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಒಮ್ಮತದಿಂದ ಕೆಲಸ ಮಾಡುವುದಾಗಿ ಸಚಿವ ಎಸ್ ಎಸ್...

ಮದುವೆಯಾಗಬೇಕಿದ್ದ ಬಾಲಕಿಯ ಎದೆ ಭಾಗ ಕತ್ತರಿಸಿ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಭಾವಿ ಪತಿ ಸೈಯದ್

ಬೆಂಗಳೂರು: ತನ್ನನ್ನು  ಮದುವೆಯಾಗಬೇಕಿದ್ದ ಬಾಲಕಿಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಭಾವಿ ಪತಿಯೇ ಬರ್ಬರವಾಗಿ...