ಬೈಂದೂರು ಅಕ್ರಮ ಗೋ ಸಾಗಾಟ  ಗೋವುಗಳ ರಕ್ಷಣೆ  ಕಾರು ಬಿಟ್ಟು  ಆರೋಪಿಗಳು ಪರಾರಿ

52

16.12.2025 ರಂದು ಬೆಳಗಿನ ಜಾವ ಸುಮಾರು 4.00 ಗಂಟೆಗೆ ಯಡ್ತರೆ ಕ್ರಾಸ್‌ನಲ್ಲಿರುವಾಗ ಶಿರೂರು ಕಡೆಯಿಂದ ರಾ.ಹೆ 66 ರಲ್ಲಿ ಕುಂದಾಪುರ ಕಡೆಗೆ KA.05.MF.787 ನೇ ಮಾರುತಿ ಬೆಲನೋ ಕಾರಿನಲ್ಲಿ ದನವನ್ನು ಕಳ್ಳತನ ಮಾಡಿ ತುಂಬಿಕೊಂಡು ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಪಡೆದ ಪಿಎಸ್ಐ ನವೀನ್ ಬೋರ್ಕರ್  ಹೈವೆ ಮೊಬೈಲ್‌ನಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಠಾಣಾ ಸಿಬ್ಬಂದಿಯೊಂದಿಗೆ ಅಲ್ಲಿಗೆ ಬಂದಿದ್ದು ಸುಮಾರು ಬೆಳಿಗ್ಗೆ 4:30 ಗಂಟೆಗೆ ರಾ.ಹೆ 66 ರಲ್ಲಿ ಶಿರೂರು ಕಡೆಯಿಂದ ಮಾಹಿತಿ ಬಂದ ಕಾರುನ್ನು ಪಿಎಸ್ಐ  ಹಾಗೂ ಸಿಬ್ಬಂದಿಗಳು ಯಡ್ತರೆ ಜಂಕ್ಷನ್‌ ಸಮೀಪ ಬರುವಾಗ ನಿಲ್ಲಿಸುವಂತೆ ಸೂಚನೆ ನೀಡಿದರೂ ಸಹಾ ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿ ಕೊಂಡು ಹೋಗಿದ್ದು ಕೂಡಲೇ  ಪಿಎಸ್ಐ ಅವರು ಸಿಬ್ಬಂದಿಯೊಂದಿಗೆ ಇಲಾಖಾ ಜೀಪು ಹಾಗೂ ಹೈವೆ ಮೊಬೈಲ್‌ ನೊಂದಿಗೆ ಕಾರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದಾಗ ಸದ್ರಿ ಕಾರು ಕಂಬದಕೊಣೆ ಜಂಕ್ಷನ್‌ ನಿಂದ ಒಳಗೆ ಹೋಗಿ ರೈಲ್ವೆ ಗೇಟ್‌ ಹತ್ತಿರ ಎಡಕ್ಕೆ ಕಚ್ಚಾ ರಸ್ತೆ ಯಲ್ಲಿ ಹೋಗಿ ಶ್ರೀ ಗೊವಿಂದ ದೇವಸ್ಥಾನ ಹರಿಕೇರೆ ಮನೆಯ ಹತ್ತಿರ ಕಾಡಿನಲ್ಲಿ  ಕಾರನ್ನು ಬಿಟ್ಟು ಕಾರಿನಲ್ಲಿ ಇದ್ದ ಇಬ್ಬರು ಓಡಿ ಹೋಗಿರುತ್ತಾರೆ.

ಸಬ್ ಇನ್ಸ್ಪೆಕ್ಟರ್  ಹೋಗಿ ಕಾರನ್ನು ಪರಿಶೀಲಿಸಲಾಗಿ KA.05.MF.0787 ನೇ ಮಾರುತಿ ಬೆಲೇನೋ ಗ್ರೇ ಬಣ್ಣದ ಕಾರಾಗಿದ್ದು ಕಾರಿನ ಹಿಂದಿನ ಶೀಟ್‌ನ್ನು ಮಡಚಿ ಬ್ಲ್ಯೂ ಬಣ್ಣದ ಟಾರ್ಪಾಲ್‌ ಹಾಸಿ ಒಂದು ದನದ ಕಾಲು ಮತ್ತು ಕುತ್ತಿಗೆ ಒಟ್ಟಿಗೆ ಕಟ್ಟಿ ಹಿಂಸಾತ್ಮಕವಾಗಿ ತುಂಬಿಸಿರುವುದು ಕಂಡು ಬಂದಿದ್ದು. ಸದ್ರಿ ಅರೋಪಿತರು ಎಲ್ಲಿಂದಲೂ ದನವನ್ನು ಕಳವು ಮಾಡಿಕೊಂಡು ಕಟ್ಟ್‌ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಸದ್ರಿ ಕಾರಿನಲ್ಲಿ ಹಿಂಸ್ಮಾತಕವಾಗಿ ಯಾವುದೇ ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ

. ದನವನ್ನು ನೋಡಿದಾಗ ಅದು ಕಂದು ಮಿಶ್ರಿತ್‌ ಕಪ್ಪು ಬಣ್ಣದ ದನವಾಗಿದ್ದು ಅದರ ಅಂದಾಜು ಮೌಲ್ಯ 5,000/- ರೂ ಕಾರಿನ ಮೌಲ್ಯ ಸುಮಾರು 4ಲಕ್ಷ ರೂ ಅಗಬಹುದು. ಆರೋಪಿತರು KA.05.MF.787 ನೇ ಮಾರುತಿ ಬೆಲನೋ ಕಾರಿನಲ್ಲಿ ಎಲ್ಲಿಂದಲೋ ದನವನ್ನು ಮಾಂಸ ಮಾಡುವ ಉದ್ದೇಶದಿಂದ ಕಳವು ಮಾಡಿಕೊಂಡು ಹಿಂಸಾತ್ಮಕವಾಗಿ ಯಾವುದೇ ಪರವಾನಿಗೆ ಇಲ್ಲದೇ ತುಂಬಿಸಿಕೊಂಡು ಸಾಗಾಟ ಮಾಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ಪ್ರಕರಣ ದಾಖಲಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ಪ್ರೀತಿ ನಾಟಕವಾಡಿ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಕೈಕೊಟ್ಟು ಪರಾರಿಯಾದ ಮುಸ್ಲಿಂ ಯುವಕ

“ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ,...

ತಾಯಿಯ ಖಾಸಗಿ ಫೋಟೋ ತೆಗೆದು ಪ್ರಿಯಕರನಿಗೆ ಕಳುಹಿಸಿದ ಮಗಳು ಪ್ರಕರಣ ದಾಖಲು

“ಬೆಂಗಳೂರು: ತಾಯಿಯ ಒಪ್ಪಿಗೆ ಇಲ್ಲದೆ ಆಕೆಯ ಖಾಸಗಿ ಪೋಟೋಗಳನ್ನು ತನ್ನ ಲವರ್ ಗೆ ಕಳುಹಿಸಿದ 23...

10ನೇ ತರಗತಿ ಬಾಲಕಿ ಗರ್ಭಿಣಿ,ಪೋಕ್ಸೊ ಪ್ರಕರಣದಾಖಲು ಆರೋಪಿ ಬಂಧನ ಶಾಲೆಯ ಪ್ರಾಂಶುಪಾಲ ಹಾಗೂ ವಾರ್ಡನ್ ಅಮಾನತು

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ವಸತಿ ಶಾಲೆಯಲ್ಲಿ ಓದುತ್ತಿರುವ 10 ನೇ ತರಗತಿಯ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ....

ಅನ್ಯಕೋಮಿನ  ಗಂಡ ಹೆಂಡತಿ ಜಗಳ ನಿಲ್ಲಿಸಲು ಹೋದ ನೆರೆಮನೆಯ ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ

ಮುಸ್ಲಿಂ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಹಿಂದೂ ಯುವಕನೊಬ್ಬನ ಮೇಲೆ ಬರ್ಬರ ರೀತಿಯಲ್ಲಿ ಹಲ್ಲೆ...