ತಾಯಿಯ ಖಾಸಗಿ ಫೋಟೋ ತೆಗೆದು ಪ್ರಿಯಕರನಿಗೆ ಕಳುಹಿಸಿದ ಮಗಳು ಪ್ರಕರಣ ದಾಖಲು

2

“ಬೆಂಗಳೂರು: ತಾಯಿಯ ಒಪ್ಪಿಗೆ ಇಲ್ಲದೆ ಆಕೆಯ ಖಾಸಗಿ ಪೋಟೋಗಳನ್ನು ತನ್ನ ಲವರ್ ಗೆ ಕಳುಹಿಸಿದ 23 ವರ್ಷದ ಮಗಳ ವಿರುದ್ಧವೇ ಪೊಲೀಸರು ದೂರು ದಾಖಲಿಸಿದ್ದಾರೆ. ತನ್ನ ಒಪ್ಪಿಗೆಯಿಲ್ಲದೆ ಖಾಸಗಿ ಫೋಟೋಗಳನ್ನು ಶೇರ್ ಮಾಡಲಾಗಿದೆ ಎಂದು ತಾಯಿ ಆರೋಪಿಸಿದ್ದಾರೆ.

ವಿದ್ಯಾಭ್ಯಾಸಕ್ಕೆ ಅಗತ್ಯವಾಗಿದೆ ಎಂದು ಹೇಳಿ ಮಗಳು ಈ ಹಿಂದೆ ಪೋಷಕರಿಂದ ಮೊಬೈಲ್ ಪಡೆದಿದ್ದಳು ಎನ್ನಲಾಗಿದೆ. ಸುಮಾರು ಒಂದು ತಿಂಗಳಿನಿಂದ ಆಕೆ ಅಪರಿಚಿತ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದನ್ನು ಕುಟುಂಬ ಪತ್ತೆ ಮಾಡಿದೆ. ಮಗಳ ಫೋನ್ ನನ್ನು ತಾಯಿ ಪರಿಶೀಲಿಸಿದಾಗ ಮತ್ತೋರ್ವ ಮಹಿಳೆ ಜೊತೆಗೆ ತನ್ನ ಖಾಸಗಿ ಫೋಟೋಗಳಿರುವುದು ಗೊತ್ತಾಗಿದೆ. ತನ್ನ ಒಪ್ಪಿಗೆ ಇಲ್ಲದೆ ಈ ಪೋಟೋಗಳನ್ನು ತೆಗೆದಿರುವುದಲ್ಲದೇ ಅದನ್ನು ತನ್ನ ಪ್ರಿಯಕರೊಂದಿಗೆ ಹಂಚಿಕೊಂಡಿದ್ದಾಳೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಕೆಲವು ವಾರಗಳ ಹಿಂದೆ ಅದೇ ವ್ಯಕ್ತಿಯನ್ನು ಮದುವೆಯಾಗಿರುವುದಾಗಿ ಮಗಳು ಹೇಳಿದ್ದಳು ಎನ್ನಲಾಗಿದೆ. ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಗಳು ಮತ್ತು ಆಕೆಯ ಪತಿ ಇಬ್ಬರ ಫೋನ್ ಗಳನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಎಲ್ಲ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದು, ಫೊರೆನ್ಸಿಕ್ ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

10ನೇ ತರಗತಿ ಬಾಲಕಿ ಗರ್ಭಿಣಿ,ಪೋಕ್ಸೊ ಪ್ರಕರಣದಾಖಲು ಆರೋಪಿ ಬಂಧನ ಶಾಲೆಯ ಪ್ರಾಂಶುಪಾಲ ಹಾಗೂ ವಾರ್ಡನ್ ಅಮಾನತು

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ವಸತಿ ಶಾಲೆಯಲ್ಲಿ ಓದುತ್ತಿರುವ 10 ನೇ ತರಗತಿಯ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ....

ಅನ್ಯಕೋಮಿನ  ಗಂಡ ಹೆಂಡತಿ ಜಗಳ ನಿಲ್ಲಿಸಲು ಹೋದ ನೆರೆಮನೆಯ ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ

ಮುಸ್ಲಿಂ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಹಿಂದೂ ಯುವಕನೊಬ್ಬನ ಮೇಲೆ ಬರ್ಬರ ರೀತಿಯಲ್ಲಿ ಹಲ್ಲೆ...

ಹಿಂದೂ ಯುವಕನ ಮನೆಗೆ ಬೆಂಕಿ ಹಚ್ಚಿದ ಮುಸ್ಲಿಂ ಯುವಕನನ್ನು ತಕ್ಷಣ  ಬಂಧಿಸಿದ ಪೊಲೀಸರು ತಪ್ಪಿದ ಅನಾಹುತ

“ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಹಿಂದೂ ವ್ಯಕ್ತಿಯೊಬ್ಬರ ಮನೆಗೆ...

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಮೂವರು ಪೊಲೀಸರಿಂದ ಮಹಿಳಾ ಕಾನ್‌ಸ್ಟೆಬಲ್ ಮೇಲೆ ಅತ್ಯಾಚಾರ

“ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಮೂವರು ಪೊಲೀಸರು ಸೇರಿದಂತೆ ನಾಲ್ವರು ಮಹಿಳಾ...