ಶಾಲೆಗೆ ಗೈರಾಗುವ  ವಿದ್ಯಾರ್ಥಿಗಳಿಂದ ಫಲಿತಾಂಶಕ್ಕೆ ಪೆಟ್ಟು ಬೀಳುತ್ತದೆಂದು ಮಕ್ಕಳ ನೋಂದಣಿಗೆ ಶಿಕ್ಷಕರ ಹಿಂದೆಟು

82

ಕಲಬುರಗಿ : ರಾಜ್ಯದಲ್ಲಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 40 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ನೋಂದಣಿಯೇ ಇಲ್ಲ ಶಾಲೆಗೆ ಗೈರಾಗುವ ಈ ವಿದ್ಯಾರ್ಥಿಗಳಿಂದ ಫಲಿತಾಂಶಕ್ಕೆ ಪೆಟ್ಟು ಬೀಳುತ್ತದೆಂದು ಮಕ್ಕಳ ನೋಂದಣಿಗೆ ಶಿಕ್ಷಕರ ಹಿಂದೆಟು ಈ ವಿದ್ಯಾರ್ಥಿಗಳೆಲ್ಲಾ ಬಹುತೇಕ 15-16 ವರ್ಷದ ವ್ಯಾಪ್ತಿಯಲ್ಲಿರುವುದರಿಂದ ಕಡ್ಡಾಯ ಶಿಕ್ಷಣ ನಿಯಮವೂ ಅನುಷ್ಠಾನ ಕಷ್ಟ SSLC ಪರೀಕ್ಷೆ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಈ ಬಾರಿ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುಳೆ, ಗೈರು, ಡ್ರಾಪೌಟ್‌ನಿಂದ ಪರೀಕ್ಷೆಯಿಂದ ಹೊರಗುಳಿಯವ ಪರಿಸ್ಥಿತಿ ನಿರ್ಮಾಣವಾಗಿದೆ. 40 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ನೋಂದಣಿಯೇ ಇಲ್ಲ ರಾಜ್ಯದಲ್ಲಿ 2025-26ರಲ್ಲಿದ್ದಂತೆ ಒಟ್ಟು 84,0196 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಗೆ ನೋಂದಣಿ ಮಾಡಿಕೊಂಡಿದ್ದಾರೆ.

ಇದರಲ್ಲಿ 79,97,62 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, 40,434 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳದಿರುವುದರಿಂದ ಇವರೆಲ್ಲಾ ಪರೀಕ್ಷೆಯಿಂದ ಹೊರಗುಳಿಯವಂತಾಗಿದ್ದು, ಶಿಕ್ಷಕರು, ಮುಖ್ಯ ಶಿಕ್ಷಕರು ಸಹ ಏನೂ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲೆಗಳು ಜೂನ್‌ನಿಂದ ಆರಂಭಗೊಂಡಿವೆ. ಆದರೆ, ಅಂದಿನಿಂದ ರಾಜ್ಯದ ಪ್ರತಿಯೊಂದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಶಾಲೆಯ ಶಿಕ್ಷಕರು, ಮುಖ್ಯ ಶಿಕ್ಷಕರು ಮೇಲಧಿಕಾರಿಗಳು ಬಹುತೇಕ ಕಣ್ಣಿಟ್ಟಿದ್ದಾರೆ. ಆದರೆ, ಈ ಬಾರಿ 40,434 ವಿದ್ಯಾರ್ಥಿಗಳು ನೋಂದಣಿಯಿಂದ ಹೊರಗಳಿದ್ದಾರೆ.

ಇದಕ್ಕೆ ಕಾರಣಗಳೇನು ಎಂದು ಈಗಾಗಲೇ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯ ಪ್ರೌಢ ಶಿಕ್ಷಣ ನಿರ್ದೇಶಕರು ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ಪತ್ರ ಬರೆದು ನೋಂದಣಿಯನ್ನು ಪೂರ್ಣಗೊಳಿಸಲು ತಿಳಿಸಿದ್ದಾರೆ. ಆದರೆ, ಬಹುತೇಕ ಈ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯಿಂದ ಔಟ್‌ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಶಾಲೆಗೆ ಗೈರಾಗುವ ಮಕ್ಕಳನ್ನು ಪರೀಕ್ಷೆಗೆ ನೋಂದಾಯಿಸಿದರೆ ಫಲಿತಾಂಶಕ್ಕೂ ಪೆಟ್ಟು ಬೀಳುತ್ತದೆ ಎಂಬ ದೃಷ್ಟಿಕೋನದಿಂದ ಮುಖ್ಯ ಶಿಕ್ಷಕರೂ ಹೆಚ್ಚಿನ ಗೈರು, ಡ್ರಾಪೌಟ್‌ , ಗುಳೆ ಹೋದವರನ್ನು ಪರೀಕ್ಷೆಗೆ ನೋಂದಣಿಗೆ ಗಮನಹರಿಸುತ್ತಿಲ್ಲ. ಕಡ್ಡಾಯ ಶಿಕ್ಷಣ ವ್ಯಾಪ್ತಿಗೂ ಬರಲ್ಲ ಎಸ್ಸೆಸ್ಸೆಲ್ಸಿ ಬಹುತೇಕ ವಿದ್ಯಾರ್ಥಿಗಳು 15ರಿಂದ 16 ವರ್ಷದ ಮಕ್ಕಳಾಗಿರುತ್ತಾರೆ.

ಕಡ್ಡಾಯ ಶಿಕ್ಷಣ ನಿಯಮಗಳಂತೆ 14 ವರ್ಷದೊಳಗಿನ ಮಕ್ಕಳಿಗೆ ಅನ್ವಯಿಸುತ್ತದೆ. ಒಂದನೇ ತರಗತಿಯಿಂದ ಒಂಭತ್ತನೇ ತರಗತಿವರೆಗೆ ಇವರು ಪ್ರಮೋಟ್‌ ಆಗಿ ಬಂದಿರುತ್ತಾರೆ. ಈ ಕಾರಣಗಳಿಗಾಗಿ ಈ ಹಿಂದೆ ಗೈರಾಗಿದ್ದರೂ ಮುಖ್ಯ ಶಿಕ್ಷಕರು ಇವರನ್ನು ಮುಂದಕ್ಕೆ ತಳ್ಳುತ್ತಾ ಬಂದಿರುತ್ತಾರೆ. ಈಗ ಇವರು ಕಡ್ಡಾಯ ಶಿಕ್ಷಣ ವ್ಯಾಪ್ತಿಗೆ ಬರುವುದಿಲ್ಲ ಕಾರಣ ಶಾಲೆಗೆ ಬಾರದವರ ನೋಂದಣಿಗೆ ಆಸಕ್ತಿಯೂ ತೋರುತ್ತಿಲ್ಲ.”

Leave a comment

Leave a Reply

Your email address will not be published. Required fields are marked *

Related Articles

ಸಚಿವ ಸ್ಥಾನಗಳಿಗಾಗಿ ಲಾಬಿ ಮಾಡುವವರನ್ನು ಪಕ್ಷ ಸಹಿಸುವುದಿಲ್ಲ. ಲಾಬಿಗಳಿಗೆ ಮಣಿಯಬೇಡಿ- ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಹೈಕಮಾಂಡ್ ಸೂಚನೆ

ಬೆಂಗಳೂರು: ಜುಲೈ ಮೊದಲ ವಾರದಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಸಮಯದಲ್ಲಿ ಸಂಪುಟಕ್ಕೆ ಸೇರ್ಪಡೆಗೊಳ್ಳಲು...

ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಡಿಜಿಟಲ್ ಅಂಕಪಟ್ಟಿ ಲಭ್ಯ : ಸಚಿವ ಮಧು ಬಂಗಾರಪ್ಪ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಮುದ್ರಿತ ಅಂಕಪಟ್ಟಿ ನೀಡುವುದಿಲ್ಲ....

ಸನ್ನಡತೆಯ ಆಧಾರದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ಕಾರಾಗೃಹಗಳಲ್ಲಿರುವ 30 ಕೈದಿಗಳ ಬಿಡುಗಡೆ ಆದೇಶ

“ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ಬೇರೆಬೇರೆ ಕಾರಾಗೃಹಗಳಲ್ಲಿರುವ 30 ಕೈದಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿ ರಾಜ್ಯ...

ಬಳ್ಳಾರಿ ಬ್ಯಾನರ್ ಗಲಾಟೆ ನಿನ್ನೆ ಅಧಿಕಾರ ಸ್ವೀಕರಿಸಿದ್ದ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರ್ ಅಮಾನತು

ಬೆಂಗಳೂರು: ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾದ...