ಹೊಸದಿಲ್ಲಿ/ಶಾಂಘೈ : 32 ವರ್ಷಗಳ ಬಳಿಕ ಚೀನಾದ ವ್ಯಾಪಾರ ಕೇಂದ್ರವಾದ ಶಾಂಘೈನಲ್ಲಿ ಭಾರತದ ನೂತನ ರಾಯಭಾರ ಕಚೇರಿ ಉದ್ಘಾಟನೆ ಚೀನಾ-ಭಾರತದ ದ್ವಿಪಕ್ಷೀಯ ಸಂಬಂಧದ 75ನೇ ವರ್ಷದಲ್ಲಿ ಉಭಯದೇಶಗಳ ನಡುವೆ ಮಹತ್ವದ ಸುಧಾರಣೆ ಪ್ರಧಾನಿಗಳ ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಪರಿಕಲ್ಪನೆಯಿಂದ ಆರಂಭವಾದ ನೂತನ ಕಟ್ಟಡ
ಭಾರತ ಹಾಗೂ ಚೀನಾ ನಡುವಿನ ಸಂಬಂಧ ವೃದ್ದಿಗೊಳಿಸಲು ಹಲವು ಕ್ರಮಗಳನ್ನು ಉಭಯ ದೇಶಗಳೂ ತೆಗೆದುಕೊಳ್ಳುತ್ತಿದ್ದು, ಇದರ ಮುಂದಿನ ಹಂತವಾಗಿ 32 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಯಭಾರ ಕಚೇರಿಯನ್ನು ಸ್ಥಳಾಂತರಿಸಲಾಗಿದ್ದು, ಚೀನಾದ ಪ್ರಮುಖ ವ್ಯಾಪಾರ ಕೇಂದ್ರವಾದ ಶಾಂಘೈನಲ್ಲಿ ಭಾರತ ತನ್ನ ನೂತನ, ಅತ್ಯಾಧುನಿಕ ರಾಯಭಾರ ಕಚೇರಿ ಕಟ್ಟಡವನ್ನು ಉದ್ಘಾಟಿಸಿದೆ.
ಪೂರ್ವ ಚೀನಾದ ಯಿವೂನಂತಹ ಭಾರತೀಯ ಸಮುದಾಯದ ಪ್ರಮುಖ ವ್ಯಾಪಾರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾರತೀಯ ವ್ಯಾಪಾರಿ ಸಮುದಾಯದ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದಾಗಿ ಈ ನೂತನ ಕಟ್ಟಡವನ್ನು ತೆರೆಯಲಾಗಿದೆ.

ಚೀನಾದಲ್ಲಿ ಹೊಸ ರಾಯಭಾರ ಕಚೇರಿ ಉದ್ಘಾಟನೆ ಈ ಕುರಿತು ಪ್ರತಿಕಾ ಪ್ರಕಟಣೆ ನೀಡಿರುವ ರಾಯಭಾರ ಕಚೇರಿ ಭಾರತದ ರಾಯಭಾರಿ ಪ್ರದೀಪ್ ಕುಮಾರ್ ರಾವತ್ ಅವರು ಚಾಂಗ್‌ನಿಂಗ್ ಜಿಲ್ಲೆಯ ಡಾನಿಂಗ್ ಸೆಂಟರ್‌ನಲ್ಲಿರುವ ಈ ವಿಶಾಲವಾದ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿದ್ದಾರೆ. ಈ ನೂತನ ಕಟ್ಟಡವು 1,436.63 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ಹಿಂದಿನ ಕಚೇರಿಗಿಂತ ಎರಡೂವರೆ ಪಟ್ಟು ದೊಡ್ಡದಾಗಿದೆ. ಡಿ.8 ರಿಂದ ಈ ನೂತನ ಕಚೇರಿಯಿಂದ ಸಂಪೂರ್ಣ ಕಾರ್ಯಾಚರಣೆಗಳು ಆರಂಭವಾಗಲಿವೆ ಎಂದು ತಿಳಿಸಿದೆ.
ಭಾರತ-ಚೀನಾ ರಾಜತಾಂತ್ರಿಕ ಸಂಬಂಧಕ್ಕೆ 75 ವರ್ಷ ಈ ಕುರಿತು ಮಾತನಾಡಿದ ಚೀನಾದಲ್ಲಿನ ಭಾರತದ ರಾಯಭಾರಿ ಪ್ರದೀಪ್ ರಾವತ್ ಈ ವರ್ಷ ಭಾರತ ಮತ್ತು ಚೀನಾ ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷಾಚರಣೆಯನ್ನು ಆಚರಿಸುತ್ತಿದ್ದು, ಈ ವಿಶೇಷದ ನಡುವೆ 1992ರ ಬಳಿಕ ಇದೇ ಮೊದಲ ಬಾರಿಗೆ ರಾಯಭಾರ ಕಚೇರಿ ಸ್ಥಳಾಂತರಗೊಂಡಿರುವುದು ಮಹತ್ವದ ಸಂಗತಿಯಾಗಿದೆ. ಶಾಂಘೈ ಭಾರತದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. ಈಗ ಇಲ್ಲಿ ವಿಶ್ವದರ್ಜೆಯ ರಾಯಭಾರ ಕಚೇರಿ ಸ್ಥಾಪನೆಯಾಗಿದೆ ಎಂದು ತಿಳಿಸಿದ್ದಾರೆ.
ಭಾರತದ ಪವರ್‌ಗೆ ಚೀನಾ ಫಿದಾ, ಇಂಡಿಯಾವನ್ನು ಹಾಡಿ ಹೊಗಳಿದ ವೈರಿ ರಾಷ್ಟ್ರ, ಸ್ನೇಹಕ್ಕಾಗಿ 4 ಸೂತ್ರಗಳ ಆಫರ್! ಪ್ರಧಾನಿಯವರ ʼಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ʼ ಪರಿಕಲ್ಪನೆಯ ಭಾಗ ಈ ವೇಳೆ ಮಾತನಾಡಿದ ಕಾನ್ಸುಲ್ ಜನರಲ್ ಪ್ರತೀಕ್ ಮಾಥುರ್ ಪ್ರಧಾನಿ ನರೇಂದ್ರ ಮೋದಿ ಅವರ ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ʼ ಎಂಬ ಪರಿಕಲ್ಪನೆಯ ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ನೂತನ ಕಚೇರಿ ಎಲ್ಲ ಭಾರತೀಯ ಸಮುದಾಯದವರಿಗೆ ಮತ್ತು ರಾಯಭಾರ ಕಚೇರಿಯೊಂದಿಗೆ ತೊಡಗಿಸಿಕೊಳ್ಳುವ ಎಲ್ಲ ಪಾಲುದಾರರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಸಹಕಾರಿಯಾಗಿದೆ.

ಈ ವಿಸ್ತರಣೆಯು ರಾಯಭಾರಿ, ವಾಣಿಜ್ಯ, ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಕಾರ್ಯಗಳನ್ನು ಒಂದೇ, ಸುರಕ್ಷಿತ ಮತ್ತು ಆಧುನಿಕ ಸ್ಥಳದಲ್ಲಿ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಕಾರ್ಯಕ್ಷಮತೆ ಹೆಚ್ಚಾಗುತ್ತದೆ ಮತ್ತು ಸಾರ್ವಜನಿಕ ಸೇವೆಗಳ ಸುಧಾರಣೆಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.
ಇತ್ತೀಚೆಗೆ ಭಾರತ ಮತ್ತು ಶಾಂಘೈ ನಡುವೆ ಆರಂಭವಾದ ನೇರ ವಿಮಾನಗಳಂತಹ ಉಪಕ್ರಮಗಳು ವ್ಯಾಪಾರ, ಪ್ರಯಾಣ ಮತ್ತು ವ್ಯವಹಾರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿವೆ. ಈ ಹಿನ್ನೆಲೆಯಲ್ಲಿ ನೂತನ ರಾಯಭಾರ ಕಚೇರಿಯ ಹೆಚ್ಚಿದ ಸಾಮರ್ಥ್ಯವು ಸಮಯೋಚಿತವಾಗಿದೆ.
“ಈ ಸುಂದರವಾದ ಹೊಸ ಅಧ್ಯಾಯಕ್ಕೆ ಪಾದಾರ್ಪಣೆ ಮಾಡುತ್ತಿರುವಾಗ ಈ ರಾಯಭಾರ ಕಚೇರಿಯನ್ನು ಕೇವಲ ಒಂದು ಕಚೇರಿಯಾಗಿ ಅಲ್ಲದೆ, ಭಾರತ ಮತ್ತು ಪೂರ್ವ ಚೀನಾ ಪ್ರದೇಶದ ನಡುವಿನ ಸ್ನೇಹ, ವಾಣಿಜ್ಯ, ಸಂಸ್ಕೃತಿ ಮತ್ತು ಜನರ ನಡುವಿನ ಸಂಬಂಧಗಳ ಒಂದು ರೋಮಾಂಚಕ ಕೇಂದ್ರವನ್ನಾಗಿ ರೂಪಿಸಲಿದೆ ಎಂದು ತಿಳಿಸಿದ್ದಾರೆ.
ಶಾಂಘೈ ಒಕ್ಕೂಟದ ಶೃಂಗಸಭೆಯ ನಂತರ ಭಾರತ ಹಾಗೂ ಚೀನಾದ ದ್ವಿಪಕ್ಷೀಯ ಸಂಬಂಧಗಳಲ್ಲಿ ಹಲವು ಸುಧಾರಣೆಗಳು ಕಾಣ ಸಿಗುತ್ತಿದ್ದು, ನೇರ ವಿಮಾನ ಸೇವೆಯಿಂದ ಹಿಡಿದು ಹೊಸ ರಾಯಭಾರ ಕಚೇರಿವರೆಗೂ ಎಲ್ಲ ವಲಯಗಳಲ್ಲೂ ಉಭಯದೇಶಗಳು ಸಾಮರಸ್ಯ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿವೆ.”

Leave a comment