ರಾಜ್ಯದ 14 ನದಿಗಳ ನೀರು ಕಲುಷಿತ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ

38

ಶಿವಮೊಗ್ಗ : ನೀರಿನಲ್ಲಿ ಜೀವ ರಾಸಾಯನಿಕ ಆಮ್ಲಜನಕದ ಬೇಡಿಕೆ (ಬಿಒಡಿ) ಮಿತಿಗಿಂತ ಅಧಿಕವಿದ್ದು, ಕೆಲವು ನದಿಗಳ ನೀರು ಬಳಕೆಗೆ ಸೂಕ್ತವಾಗಿಲ್ಲ. ನಮ್ಮ ರಾಜ್ಯದ ನಾಲ್ಕು ನದಿಗಳು ಅತಿ ಕಲುಷಿತದ ಪಟ್ಟಿಗೆ ಸೇರುತ್ತವೆ. ನೀರಿನಲ್ಲಿ ಜೈವಿಕ ಆಮ್ಲಜನಕ ಹೆಚ್ಚಾದಾಗ ನೀರು ಕಲುಷಿತಗೊಳ್ಳುತ್ತದೆ

ನದಿಗಳನ್ನು ದೈವರೂಪದಲ್ಲಿ ಕಂಡು ಆರಾಧಿಸುವ ದೇಶದಲ್ಲಿಯೇ ಅವುಗಳ ಸ್ಥಿತಿ ಚಿಂತಾಜನಕವಾಗಿದೆ. ರಾಜ್ಯದ 14 ನದಿಗಳ ನೀರು ಕುಡಿಯುವುದಕ್ಕೆ ಯೋಗ್ಯವಿಲ್ಲಎಂಬ ಆಘಾತಕಾರಿ ವರದಿಯೊಂದನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಬಿಡುಗಡೆ ಮಾಡಿದೆ.

ಸಿಪಿಸಿಬಿಯಿಂದ 2022-23ರ ವರೆಗೆ ರಾಜ್ಯದ 125 ಸ್ಥಳಗಳಲ್ಲಿ ನೀರಿನ ಗುಣಮಟ್ಟವನ್ನು ಪರಿಶೀಲಿಸಲಾಗಿದೆ. ಅದರಲ್ಲಿ 14 ನದಿಗಳ 67 ಜಾಗಗಳಲ್ಲಿ ನೀರು ಕಲುಷಿತವಾಗಿರುವುದು ಪತ್ತೆಯಾಗಿದೆ. ಈ ನೀರಿನಲ್ಲಿ ಜೀವ ರಾಸಾಯನಿಕ ಆಮ್ಲಜನಕದ ಬೇಡಿಕೆ (ಬಿಒಡಿ) ಮಿತಿಗಿಂತ ಅಧಿಕವಿದ್ದು, ಕೆಲವು ನದಿಗಳ ನೀರು ಬಳಕೆಗೆ ಸೂಕ್ತವಾಗಿಲ್ಲ.

ನೀರಿನಲ್ಲಿ ಬಿಒಡಿ ಮಟ್ಟ ಪ್ರತಿ ಲೀಟರ್‌ಗೆ 0.5ರಿಂದ 1 ಮಿಲಿ ಗ್ರಾಂ ಇದ್ದಲ್ಲಿ ಕುಡಿಯಲು ಯೋಗ್ಯ. ಒಂದುವೇಳೆ, 1 ರಿಂದ 2 ಎಂಜಿ ಇದ್ದರೆ ಅಲ್ಪ ಪ್ರಮಾಣದಲ್ಲಿಮಲಿನ, 3-5 ಎಂಜಿ ಇದ್ದರೆ ಕಲುಷಿತ ಹಾಗೂ 8 ಎಂಜಿಗಿಂತ ಅಧಿಕವಿದ್ದರೆ ಅತೀ ಕಲುಷಿತ ಎಂದು ವಿಶ್ಲೇಷಿಸಲಾಗುತ್ತದೆ. ನಮ್ಮ ರಾಜ್ಯದ ನಾಲ್ಕು ನದಿಗಳು ಅತಿ ಕಲುಷಿತದ ಪಟ್ಟಿಗೆ ಸೇರುತ್ತವೆ.

ಅರ್ಕಾವತಿ ನದಿಯ ಐದು ಕಡೆಗಳಲ್ಲಿ ನೀರನ್ನು ಪರೀಕ್ಷಿಸಿದ್ದು, ಹೆಸರಘಟ್ಟ ಜಲಾಶಯದಿಂದ ಕನಕಪುರ ಪಟ್ಟಣದವರೆಗಿನ ನೀರಲ್ಲಿ 72 ಮಿಲಿ ಗ್ರಾಂ ಬಿಒಡಿ ಇರುವುದು ದೃಢಪಟ್ಟಿದೆ.

ಭೀಮಾದಲ್ಲಿ 20 ಎಂಜಿ, ದಕ್ಷಿಣ ಪಿನಾಕಿನಿಯಲ್ಲಿ 146 ಎಂಜಿ ಹಾಗೂ ಹೊನ್ನಾಳಿ ಸೇತುವೆ ಬಳಿ ತುಂಗಭದ್ರಾ ನದಿಯ ನೀರಿನಲ್ಲಿ 78 ಎಂಜಿ ಬಿಒಡಿ ಇರುವುದು ವೈಜ್ಞಾನಿಕ ವರದಿಗಳಿಂದ ಪತ್ತೆಯಾಗಿದೆ.

ತುಂಗೆ ಕಲುಷಿತೆ ತುಂಗಾ ನದಿ ನೀರಿನಲ್ಲಿಅಲ್ಯೂಮಿನಿಯಂ ಪ್ರಮಾಣ ಪತ್ತೆಯಾದ ಬೆನ್ನಲ್ಲೇ ಅದರೆಡೆಗೆ ಶಿವಮೊಗ್ಗ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಆದಿಯಾಗಿ ವಿವಿಧ ಇಲಾಖೆಗಳು ನಿರಂತರ ನೀರಿನ ಮಾದರಿ ಸಂಗ್ರಹಿಸುವ ಕಾರ್ಯ ಕೈಗೆತ್ತಿಕೊಂಡಿವೆ. ಆದರೆ, ಇದುವರೆಗೆ ಮಾಲಿನ್ಯ ನಿಂತಿಲ್ಲ.

ಶಿವಮೊಗ್ಗ ನಗರದಲ್ಲಿ ತುಂಗಾ ನದಿ ನೀರಿನಲ್ಲಿ 8 ಎಂಜಿ ಬಿಒಡಿ ಇರುವುದು ದೃಢಪಟ್ಟಿದೆ. ಲೋಕಾಯುಕ್ತ ನ್ಯಾಯಾಲಯ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ನದಿ ಮಾಲಿನ್ಯ ತಡೆಯುವಂತೆ ಸೂಚನೆ ನೀಡಿದರೂ ನಗರದ ಕಲುಷಿತ ನೀರು ನದಿಗೆ ಬಿಡುವುದು ನಿಂತಿಲ್ಲ.

ರಾಜಾರೋಷವಾಗಿ ಕೊಳಚೆ ನೀರು ನದಿ ಸೇರುತ್ತಿದೆ. ಇದನ್ನೇ ಮುಂದಿನ ಜಿಲ್ಲೆಗಳು ಕೃಷಿ ಮತ್ತು ಕುಡಿಯುವುದಕ್ಕಾಗಿ ಬಳಸುತ್ತಿವೆ. ನೀರಿನಲ್ಲಿ ಜೈವಿಕ ಆಮ್ಲಜನಕ ಹೆಚ್ಚಾದಾಗ ನೀರು ಕಲುಷಿತಗೊಳ್ಳುತ್ತದೆ.

ಆಮ್ಲಜನಕದ ಕೊರತೆಯಿಂದ ವಿವಿಧ ಬಗೆಯ ಹಾನಿಕಾರಕ ಸೂಕ್ಮಾಣು ಜೀವಿಗಳು ಉತ್ಪತ್ತಿ ಆಗುತ್ತವೆ. ಇವುಗಳಿಗೆ ಆಮ್ಲಜನಕದ ಅವಶ್ಯಕತೆ ಇರುವುದಿಲ್ಲ. ಇಂತಹ ಜೀವಿಗಳ ಸಂಖ್ಯೆ ಹೆಚ್ಚಳದಿಂದಾಗಿ ಜಲಮೂಲ ಕೊಳೆಯುವ ಸ್ಥಿತಿಗೆ ತಲುಪುತ್ತವೆ.

ಜತೆಗೆ ಸ್ಥಳೀಯ ಜೀವ ಪ್ರಭೇದಗಳು ಕಡಿಮೆಯಾಗುತ್ತವೆ ಎಂದಿದ್ದಾರೆ ಪ್ರೊ.ಕೆ.ಯೋಗೇಂದ್ರ, ಮುಖ್ಯಸ್ಥ, ಪರಿಸರ ವಿಜ್ಞಾನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ ನದಿಗಳು ಬಿಒಡಿ ಪ್ರಮಾಣ (ಮಿಲಿ ಗ್ರಾಂ)

ಅರ್ಕಾವತಿ 72

ಭದ್ರಾ 3.8

ಭೀಮಾ 20

ಕಾವೇರಿ 12

ಘಟಪ್ರಭ 5.2

ಕಬಿನಿ 6

ಕಾಗಿಣ 6

ಕೃಷ್ಣ 17

ಲಕ್ಷ್ಮಣತೀರ್ಥ 8

ಮಲಪ್ರಭ 4.6

ಶಿಂಷಾ 18

ತುಂಗಭದ್ರಾ 78

ದಕ್ಷಿಣ ಪಿನಾಕಿನಿ 146

ತುಂಗಾ 8

Leave a comment

Leave a Reply

Your email address will not be published. Required fields are marked *

Related Articles

ವರ್ಷಾಂತ್ಯದಲ್ಲಿ ಗ್ರಾಮ ಪಂಚಾಯತ್ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆ ::ಸಚಿವ ಪ್ರಿಯಾಂಕ ಖರ್ಗೆ

ಕಲಬುರಗಿ: ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ...

ಮೂರು ವರ್ಷಗಳ ಬಳಿಕ ಇಂದು ಶೃಂಗೇರಿ ನೂತನ ಶಾಸಕರಾಗಿ ಡಿ ಎನ್ ಜೀವರಾಜ್ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಕೊನೆಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಇಂದು ಡಿ ಎನ್ ಜೀವರಾಜ್ ಪ್ರಮಾಣ ವಚನ...

ಶೃಂಗೇರಿ ಮರುಮತ ಎಣಿಕೆ ಪ್ರಕರಣ ಅಂಚೆ ಮತಗಳಲ್ಲಿ ಅಕ್ರಮ ಆರೋಪ ಶಾಸಕ ಜೀವರಾಜ್ ಸೇರಿ ಮೂವರ ವಿರುದ್ಧ  ಎಫ್ಐಆರ್ ದಾಖಲು

“ಚಿಕ್ಕಮಗಳೂರು ಶೃಂಗೇರಿ ಮತ ಎಣಿಕೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದ್ದು, ಅಂಚೆ ಮತಗಳಲ್ಲಿ ಅಕ್ರಮ ಆರೋಪದ...

52 ಮತಗಳಿಂದ ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆಲುವು, ನೂತನ ಶಾಸಕರಾಗಿ ಘೋಷಣೆ..

ಬೆಂಗಳೂರು: ಹೈಕೋರ್ಟ್‌ ಆದೇಶದಂತೆ ನಡೆದ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ, ಕಾಂಗ್ರೆಸ್ ಶಾಸಕ...