ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ರಾಷ್ಟ್ರ ಒಂದು ಕಾರ್ಡ್‌’ ಯೋಜನೆ ಕರ್ನಾಟಕದಲ್ಲಿ ಜಾರಿ

52

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಒಂದು ರಾಷ್ಟ್ರ ಒಂದು ಕಾರ್ಡ್‌ ಯೋಜನೆಯು ಕರ್ನಾಟಕದಲ್ಲಿ ಅನುಷ್ಠಾನಕ್ಕೆ ಬಂದಿದ್ದು, ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಕಾರ್ಡ್‌ಗಳು ಇನ್ನಷ್ಟು ಹೈಟೆಕ್ ರೂಪ ಪಡೆದಿವೆ.

ದೇಶಾದ್ಯಂತ ಒಂದೇ ಮಾದರಿಯ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ಈ ಯೋಜನೆಯು ರಾಜ್ಯದ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಕೇಂದ್ರೀಕೃತ ಮುದ್ರಣ ಸೌಲಭ್ಯ ವ್ಯವಸ್ಥೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದ್ದಾರೆ.

ಈ ಹಿನ್ನೆಲಯಲ್ಲಿ ಏನಿದು ಸ್ಮಾರ್ಟ್‌ ಕಾರ್ಡ್‌ ವಿತರಣೆ ಯೋಜನೆ? ಇದರ ಪ್ರಯೋಜನಗಳೇನು? ಪಡೆಯುವುದು ಹೇಗೆ? ಇತ್ಯಾದಿ ಮಾಹಿತಿಗಳನ್ನು ತಿಳಿಯೋಣ. ಒಂದು ರಾಷ್ಟ್ರ ಒಂದು ಕಾರ್ಡ್‌ ಯೋಜನೆ ಏನಿದು ಹೈಟೆಕ್ ಸ್ಮಾರ್ಟ್ ಕಾರ್ಡ್‌? ಕೇಂದ್ರ ಸರ್ಕಾರದ ‘ಒನ್ ನೇಷನ್ ಒನ್ ಕಾರ್ಡ್’ ಯೋಜನೆಯಡಿ ಕರ್ನಾಟಕದಲ್ಲಿ ಇನ್ನು ಮುಂದೆ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ( ಕಾರ್ಡ್‌ಗಳನ್ನು ದೇಶಾದ್ಯಂತ ಒಂದೇ ಮಾದರಿಯಲ್ಲಿ ವಿತರಿಸಲಾಗುವುದು.

ಈ ಹೈಟೆಕ್ ಸ್ಮಾರ್ಟ್ ಕಾರ್ಡ್‌ಗಳು ಹೆಚ್ಚು ಬಾಳಿಕೆ ಬರುವ ಪಾಲಿ ಕಾರ್ಬೋನೇಟ್ ವಸ್ತುವಿನಿಂದ ಮಾಡಲ್ಪಟ್ಟಿದ್ದು, ಮಾಹಿತಿ ಅಳಿಸಿಹೋಗದಂತೆ ಲೇಸರ್ ಎನ್‌ಗ್ರೇವಿಂಗ್ ತಂತ್ರಜ್ಞಾನದಿಂದ ಮುದ್ರಿಸಲ್ಪಟ್ಟಿರುತ್ತವೆ. ಪ್ರತಿ ಕಾರ್ಡ್‌ನಲ್ಲಿ 64 KB ಮೈಕ್ರೋ ಚಿಪ್ ಮತ್ತು ಕ್ಯೂಆರ್ ಕೋಡ್ ಇರಲಿದ್ದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ವಾಹನ ಮತ್ತು ಮಾಲೀಕರ ಸಂಪೂರ್ಣ ಮಾಹಿತಿ ಪೊಲೀಸರಿಗೆ ಕ್ಷಣಾರ್ಧದಲ್ಲಿ ಲಭ್ಯವಾಗುತ್ತದೆ.

ಈ ಕಾರ್ಡ್‌ಗಳ ಮುದ್ರಣವನ್ನು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕೇಂದ್ರೀಕೃತಗೊಳಿಸಲಾಗಿದ್ದು, ಹೊಸ ಕಾರ್ಡ್‌ಗೆ ಅರ್ಜಿದಾರರು ನಿಗದಿತ ಶುಲ್ಕ ಪಾವತಿಸಬೇಕು. ಹಾಗೆಂದು ಇದು ಕಡ್ಡಾಯವೇನಲ್ಲ. ಹಳೆಯ ಕಾರ್ಡ್‌ಗಳು ಕೂಡ ಚಾಲ್ತಿಯಲ್ಲಿರುತ್ತವೆ ಅಥವಾ ಶುಲ್ಕ ನೀಡಿ ಹೊಸ ಕಾರ್ಡ್ ಪಡೆಯಲು ಅವಕಾಶವಿದೆ.

ಏನಿದು ಒಂದು ರಾಷ್ಟ್ರ, ಒಂದು ಚಾಲನಾ ಪರವಾನಗಿ? “ಒಂದು ರಾಷ್ಟ್ರ, ಒಂದು ಚಾಲನಾ ಪರವಾನಗಿ” ಯೋಜನೆಯು ಭಾರತದಾದ್ಯಂತ ಚಾಲನಾ ಪರವಾನಗಿಗಳು ಮತ್ತು ವಾಹನ ನೋಂದಣಿ ಪ್ರಮಾಣಪತ್ರಗಳನ್ನು ಸಮಾನೀಕರಿಸುವ ಗುರಿಯನ್ನು ಹೊಂದಿದೆ.

ಇದನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ) ಕಡ್ಡಾಯಗೊಳಿಸಿದ್ದು, ಈ ಉಪಕ್ರಮವು ಏಕರೂಪ, ಬಾಳಿಕೆ ಬರುವ ಮತ್ತು ಚಿಪ್-ಸಕ್ರಿಯಗೊಳಿಸಿದ ಸ್ಮಾರ್ಟ್ ಕಾರ್ಡ್ ಸ್ವರೂಪವನ್ನು ಪರಿಚಯಿಸುತ್ತದೆ.

ಇದರಿಂದ ರಾಜ್ಯ-ನಿರ್ದಿಷ್ಟ ವ್ಯತ್ಯಾಸಗಳು ದೂರವಾಗಿ, ಕ್ಯೂಆರ್‌ ಕೋಡ್‌ಗಳ ಮೂಲಕ ವಿವರಗಳನ್ನು ತಕ್ಷಣ ಪ್ರವೇಶಿಸಲು ಸಾಧ್ಯವಾಗುವುದರಿಂದ ದೇಶಾದ್ಯಂತ ಪರಿಶೀಲನೆ ಸುಲಭವಾಗುತ್ತದೆ. ಹೊಸ ಅರ್ಜಿಗಳಿಗೆ ಈ ಹೊಸ ಕಾರ್ಡ್‌ಗಳನ್ನು ನೀಡಲಾಗುವುದು.”

Leave a comment

Leave a Reply

Your email address will not be published. Required fields are marked *

Related Articles

ಗ್ಯಾರೆಂಟಿ ಯೋಜನೆ ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್

ಬೆಂಗಳೂರು: ಗ್ಯಾರೆಂಟಿ ಯೋಜನೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುದ್ಧ ಮತ್ತು ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು...

ವಿಧಾನಪರಿಷತ್ ಚುನಾವಣೆ ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಗೆಲುವು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆಲುವಿನ ನಗೆ

“ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಗೆಲುವು ಸಾಧಿಸಿದ್ದು ಜೆಡಿಎಸ್ ಅಭ್ಯರ್ಥಿಗೆ ಸೋಲಾಗಿದೆ. ಕಾಂಗ್ರೆಸ್...

ಕೊಲ್ಲೂರು ಮೂಕಾಂಬಿಕಾ ತಾಯಿಯ ದರ್ಶನ ಪಡೆದ ಉದ್ಯಮಿ ಅನಂತ ಅಂಬಾನಿ

“ಉಡುಪಿ: ಸದ್ದು ಗದ್ದಲವಿಲ್ಲದೆ ದೇಶದ ಪ್ರತಿಷ್ಠಿತ ಉದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಂಬಾನಿ ಕುಟುಂಬದ ಅನಂತ ಅಂಬಾನಿ...

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿಕೆ ಶಿವಕುಮಾರ್ ರಾಜ್ಯದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಎಲ್ಲಾ ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ

“ಬೆಂಗಳೂರು: ಡಿಕೆ ಶಿವಕುಮಾರ್ ಅವರು ಬುಧವಾರ ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ...