ಮಹಿಳೆಯರ ಭದ್ರತೆ ಹಾಗೂ ಸಾಮಾಜಿಕ ಸಬಲೀಕರಣದ ಗುರಿಯೊಂದಿಗೆ ಎಚ್ ಎಮ್ ಆರ್ ಎಲ್  ಹೊಸ ಹೆಜ್ಜೆ

58

ಹೈದರಾಬಾದ್ :‌ ಹೈದರಬಾದ್ ಮೆಟ್ರೋ ರೈಲು, ಭಾರತದ ಅತ್ಯಂತ ದೊಡ್ಡ ಮತ್ತು ಆಧುನಿಕ ನಗರ ಸಾರಿಗೆ ವ್ಯವಸ್ಥೆಗಳಲ್ಲೊಂದಾಗಿದ್ದು, 3 ಕಾರಿಡಾರ್ ಮಾರ್ಗಗಳಲ್ಲಿರುವ 57 ನಿಲ್ದಾಣಗಳ ಮೂಲಕ ಪ್ರತಿದಿನ ಸುಮಾರು 5 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ.

ಹೈದರಾಬಾದ್ ಮೆಟ್ರೋ ಭದ್ರತಾ ಸೇವೆಯಲ್ಲಿ 20 ಮಂಗಳಮುಖಿಯರನ್ನು ನೇಮಿಸಿ ವಿನೂತನ ಪ್ರಯತ್ನ ಮಾಡಿದ ತೆಲಂಗಾಣ ಸರ್ಕಾರ ಮಹಿಳೆಯರ ಭದ್ರತೆ ಹಾಗೂ ಸಾಮಾಜಿಕ ಸಬಲೀಕರಣದ ಗುರಿಯೊಂದಿಗೆ HMRL ಹೊಸ ಹೆಜ್ಜೆ ಈ ಹಿಂದೆಯೂ ಮಂಗಳಮುಖಿಯರನ್ನು ಟ್ರಾಫಿಕ್‌ ಮಾರ್ಷಲ್‌ ಗಳಾಗಿ ನೇಮಿಸಿದ್ದ ತೆಲಂಗಾಣ ಸರ್ಕಾರ ಹೈದರಾಬಾದ್‌ ಮೆಟ್ರೋ ಸೇವೆಯಲ್ಲಿ 20 ಮಂಗಳಮುಖಿಯರ ನೇಮಕ

ಈ ಮೆಟ್ರೋ ನಿಗಮದಲ್ಲಿ ಸಾಮಾಜಿಕ ಸಬಲೀಕರಣ ಹಾಗೂ ಪ್ರಯಾಣಿಕರ ಭದ್ರತೆಯನ್ನು ಬಲಪಡಿಸುವ ದಿಸೆಯಲ್ಲಿ ಮಹತ್ತರ ಹೆಜ್ಜೆಯಾಗಿ, ಹೈದರಾಬಾದ್ ಮೆಟ್ರೋ ರೈಲು ಲಿಮಿಟೆಡ್  20 ಮಂಗಳಮುಖಿಯರನ್ನು ಮುಂಚೂಣಿ ಭದ್ರತಾ ತಂಡಕ್ಕೆ ಸೇರಿಸಿಕೊಳ್ಳುವುದಾಗಿ ಘೋಷಿಸಿದೆ.

ಮಹಿಳೆಯರ ಸುರಕ್ಷತೆಗೆ ಆದ್ಯತೆ ಹೈದರಬಾದ್ ಮೆಟ್ರೋದಲ್ಲಿ ಪ್ರತಿದಿನ ಪ್ರಯಾಣಿಸುವವರಲ್ಲಿ ಸುಮಾರು 30% ಮಹಿಳೆಯರು. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರ ಭದ್ರತೆ, ಆರಾಮ ಮತ್ತು ವಿಶ್ವಾಸವನ್ನು ಖಾತ್ರಿ ಪಡಿಸುವ ಮಹತ್ವವನ್ನು ಅರಿತ HMRL ಈ ನಿರ್ಧಾರ ಕೈಗೊಂಡಿದೆ.

ಈಗಾಗಲೇ, ಭದ್ರತಾ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಈ ಹೊಸ ನೇಮಕಾತಿ ಸದಸ್ಯರು ಸೋಮವಾರದಿಂದ ಆಯ್ಕೆಯಾದ ಮೆಟ್ರೋ ನಿಲ್ದಾಣಗಳು ಮತ್ತು ಮೆಟ್ರೋ ರೈಲುಗಳಲ್ಲಿಯೇ ತಮ್ಮ ಕರ್ತವ್ಯಗಳನ್ನು ಪ್ರಾರಂಭಿಸಿದ್ದಾರೆ. ಇದರಿಂದ ಮಹಿಳಾ ಭದ್ರತೆ ವಿಚಾರದಲ್ಲಿ ಮೆಟ್ರೋ ನೀಡುತ್ತಿರುವ ಆದ್ಯತೆ ಮತ್ತಷ್ಟು ಬಲಗೊಂಡಿದೆ.

ಸಾಮಾಜಿಕ ಸಬಲೀಕರಣದ ಗುರಿ ಈ ಕ್ರಮವು ತೆಲಂಗಾಣ ಸರ್ಕಾರದ ಸಮಾನತೆ, ಗೌರವ ಮತ್ತು ಪ್ರತ್ಯೇಕಗೊಂಡ ಸಮುದಾಯಗಳಿಗೆ ಸಮಾನ ಅವಕಾಶ ಒದಗಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಕಳೆದ ವರ್ಷ ಸರ್ಕಾರವು ಟ್ರಾನ್ಸ್‌ಜೆಂಡರ್‌ ಸಮುದಾಯಕ್ಕೆ ಸೇರಿದ ವ್ಯಕ್ತಿಗಳನ್ನು ಅಸಿಸ್ಟೆಂಟ್ ಟ್ರಾಫಿಕ್ ಮಾರ್ಷಲ್‌ಗಳಾಗಿ ನೇಮಕ ಮಾಡುವ ಮೂಲಕ ವಿವಿಧ ಸಾರ್ವಜನಿಕ ಸೇವಾ ಕ್ಷೇತ್ರಗಳಲ್ಲಿ ಅವರನ್ನು ಸೇರಿಸಿಕೊಳ್ಳುವ ನೀತಿಯನ್ನು ಜಾರಿಗೆ ತಂದಿತ್ತು.

ಈಗ ಮೆಟ್ರೋ ನಿಲ್ದಾಣ ಸೇವೆಗಳಲ್ಲಿ ಟ್ರಾನ್ಸ್‌ಜೆಂಡರ್‌ ಸಿಬ್ಬಂದಿಯ ಸೇರ್ಪಡೆ, ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಒಳಗೊಂಡ ವಾತಾವರಣವನ್ನು ನಿರ್ಮಿಸುವ HMRL ನ ಉದ್ದೇಶದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ‌

ಈ ಕುರಿತು ಮಾತನಾಡಿದ HMRL ನ ವ್ಯವಸ್ಥಾಪಕ ನಿರ್ದೇಶಕ ಸರ್ಫರಾಜ್ ಅಹ್ಮದ್ “ತರಬೇತಿ ಪಡೆದ ಈ 20 ಟ್ರಾನ್ಸ್‌ಜೆಂಡರ್‌ ಸಿಬ್ಬಂದಿಯ ಸೇರ್ಪಡೆ ಹೈದರಾಬಾದ್ ಮೆಟ್ರೋ ಕುಟುಂಬಕ್ಕೆ ಅಪಾರ ಹೆಮ್ಮೆಯ ವಿಚಾರ.

ಇದು ಕೇವಲ ಭದ್ರತಾ ಬಲವರ್ಧನೆಯಷ್ಟೇ ಅಲ್ಲ, ಸಾಮಾಜಿಕ ಸಬಲೀಕರಣ ಮತ್ತು ತೆಲಂಗಾಣ ಸರ್ಕಾರದ ಒಳಗೊಂಡ ಸಮಾಜ ನಿರ್ಮಾಣದ ದೃಷ್ಟಿಯ ಬಲವಾದ ಸಂದೇಶ. ಇವರ ಸೇವೆಗಳು ಮಹಿಳಾ ಪ್ರಯಾಣಿಕರ ವಿಶ್ವಾಸವನ್ನು ಬಲಪಡಿಸುವಲ್ಲಿ ಮತ್ತು ಸುರಕ್ಷಿತ ಪ್ರಯಾಣ ವಾತಾವರಣ ನಿರ್ಮಿಸಲು ಪ್ರಮುಖ ಪಾತ್ರವಹಿಸಲಿವೆ” ಎಂದು ಹೇಳಿದರು.”

Leave a comment

Leave a Reply

Your email address will not be published. Required fields are marked *

Related Articles

ನಮ್ಮಿಂದ ಬಿಜೆಪಿ ಹಾಳಾಗಿಲ್ಲ: ನಮ್ಮಿಂದಾಗಿ ಮಂತ್ರಿಯಾಗಿ ಲಂಚ ಪಡೆದು ನೀವು ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ನೀವು ಕಾರಣರಾದೀರಿ ಈಶ್ವರಪ್ಪಗೆ:: ಬಿ ಸಿ ಪಾಟೀಲ್ ತಿರುಗೇಟು

ಬೆಂಗಳೂರು: ಈ ಹಿಂದೆ ದುಡ್ಡು ಕೊಟ್ಟು ಕರೆತಂದ 17 ಕಾಂಗ್ರೆಸ್ ಶಾಸಕರಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ...

ಪಿ ಎಚ್ ಡಿ ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿವಿ ಪ್ರಾಧ್ಯಾಪಕನ ಅಮಾನತು

“ಧಾರವಾಡ: ಪಿ ಎಚ್ ಡಿ  ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪ...

ಕೊಲ್ಲೂರು ದೇವಿಗೆ 1 ಕೆಜಿ 600 ಗ್ರಾಮದ ಬೆಳ್ಳಿ ಖಡ್ಗ, ರೇಷ್ಮೆ ಸೀರೆ, ಫಲ-ತಾಂಬೂಲ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್

“ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಶುಕ್ರವಾರ ಉಡುಪಿ ಜಿಲ್ಲೆಯ ಪ್ರಸಿದ್ಧ ಮೂಕಾಂಬಿಕೆ...

ಡಬಲ್ ಡೆಕ್ಕರ್ ಯೋಜನೆಗೆ ಅನುಮತಿ, ಮೆಟ್ರೋ ಮೂರನೇ ಹಂತ ಯೋಜನೆಗಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್

“ನವದೆಹಲಿ: ಸಿಎಂ ಡಿಕೆ ಶಿವಕುಮಾರ್ ಅವರು ಇಂದು ಕೇಂದ್ರ ಇಂಧನ, ವಸತಿ ಮತ್ತು ನಗರಾಭಿವೃದ್ಧಿ ಸಚಿವ...