ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 3 ಪೈಸೆ ಇಳಿಕೆ ಕಂಡು 89.25 ರೂ.ಗೆ ಕುಸಿತ

41

ಮುಂಬೈ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 3 ಪೈಸೆ ಇಳಿಕೆ ಕಂಡು 89.25 ರೂ.ಗೆ ಕುಸಿತ ರೂಪಾಯಿ ಚೇತರಿಸಿಕೊಂಡಾಗಲೆಲ್ಲಾ ಡಾಲರ್ ಖರೀದಿಗೆ ಮುಂದಾಗುತ್ತಿರುವ ಆಮದುದಾರರು ಅಮೆರಿಕದ ಆರ್ಥಿಕ ದತ್ತಾಂಶಗಳ ನಿರಾಸೆಯಿಂದಾಗಿ ಡಾಲರ್ ಇಂಡೆಕ್ಸ್ ಇಳಿಕೆ, ಆದರೂ ರೂಪಾಯಿ ಕುಸಿತ ಡಿಸೆಂಬರ್‌ನಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತಗೊಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಡಾಲರ್‌ ಇಳಿಕೆ ರೂಪಾಯಿ ದರ ಒಂದೇ ಸಮನೆ ಇಳಿಕೆ ಕಾಣುತ್ತಾ ಸಾಗಿದ್ದು 89 ರೂ. ಮಟ್ಟವನ್ನೂ ಮೀರಿ ಮುಂದುವರಿದಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಮೌಲ್ಯ ದುರ್ಬಲವಾಗಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಆಮದುದಾರರಿಂದ ಕಂಡುಬಂದ ನಿರಂತರ ಬೇಡಿಕೆಯಿಂದಾಗಿ ಭಾರತೀಯ ರೂಪಾಯಿ ಮೌಲ್ಯ ತನ್ನ ಕುಸಿತದ ಸರಣಿಯನ್ನು ಮುಂದುವರಿಸಿದೆ.

ಬುಧವಾರದ (ನವೆಂಬರ್‌ 26) ಆರಂಭಿಕ ವಹಿವಾಟಿನಲ್ಲಿ ಡಾಲರ್‌ ವಿರುದ್ಧ ರೂಪಾಯಿ ಮತ್ತೆ ಹಿನ್ನಡೆ ಅನುಭವಿಸಿದೆ. ಮಂಗಳವಾರದ ವಹಿವಾಟಿನ ಅಂತ್ಯಕ್ಕೆ 89.22 ರೂ.ನಷ್ಟಿದ್ದ ರೂಪಾಯಿ ಮೌಲ್ಯ, ಇಂದು ಅಂದರೆ ಬುಧವಾರ ಬೆಳಗ್ಗೆ 3 ಪೈಸೆ ಕುಸಿತದೊಂದಿಗೆ 89.25 ರೂ.ನಲ್ಲಿ ವಹಿವಾಟು ಆರಂಭಿಸಿತು.

ರೂಪಾಯಿ ಮೌಲ್ಯ ಚೇತರಿಸಿಕೊಂಡ ಸಂದರ್ಭದಲ್ಲೆಲ್ಲಾ ಆಮದುದಾರರು ಡಾಲರ್ ಖರೀದಿಗೆ ಮುಗಿಬೀಳುತ್ತಿದ್ದಾರೆ. ಹೀಗಾಗಿ ರೂಪಾಯಿ ಮೌಲ್ಯ ಸ್ಥಿರವಾಗಿ ಏರಿಕೆಯಾಗಲು ಸಾಧ್ಯವಾಗುತ್ತಿಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಡಾಲರ್ ಸೂಚ್ಯಂಕವೂ ಇಳಿಕೆ ಅಮೆರಿಕದ ಗ್ರಾಹಕ ದತ್ತಾಂಶಗಳು ನಿರೀಕ್ಷೆಗಿಂತ ದುರ್ಬಲವಾಗಿರುವ ಕಾರಣ, ಆರು ಪ್ರಮುಖ ಕರೆನ್ಸಿಗಳ ಎದುರು ಡಾಲರ್‌ನ ಸಾಮರ್ಥ್ಯವನ್ನು ಅಳೆಯುವ ‘ಡಾಲರ್ ಇಂಡೆಕ್ಸ್’ (ಡಾಲರ್‌ ಸೂಚ್ಯಂಕ) 100ರ ಗಡಿಗಿಂತ ಕೆಳಗೆ ಕುಸಿದಿದೆ. 99.66ಕ್ಕೆ ತಲುಪಿದೆ. ಅಮೆರಿಕದಲ್ಲಿ ದುರ್ಬಲ ಆರ್ಥಿಕ ವರದಿಗಳು ಮತ್ತು ಫೆಡರಲ್ ರಿಸರ್ವ್ ಅಧಿಕಾರಿಗಳ ಮೃದು ಧೋರಣೆಯ ಹೇಳಿಕೆಗಳು, ಡಿಸೆಂಬರ್‌ನಲ್ಲಿ ಬಡ್ಡಿ ದರ ಕಡಿತವಾಗುವ ಸಾಧ್ಯತೆಯನ್ನು ಹೆಚ್ಚಿಸಿವೆ.

ಇದರಿಂದ ವಿಶ್ವದ ಪ್ರಮುಖ ಕರೆನ್ಸಿಗಳ ವಿರುದ್ಧ ಅಮೆರಿಕದ ಡಾಲರ್‌ನ ಮೌಲ್ಯವನ್ನು ಅಳೆಯುವ ಡಾಲರ್‌ ಸೂಚ್ಯಂಕವು 100ಕ್ಕಿಂತ ಕೆಳಕ್ಕೆ ಕುಸಿದಿದೆ. 1 ರೂಪಾಯಿಗೆ 1 ಡಾಲರ್ ಆದರೆ ಏನಾಗುತ್ತೆ? 1947ರಲ್ಲಿ ಎಷ್ಟಿತ್ತು? ಈಗ ಎಷ್ಟಿದೆ? ಭಾರತಕ್ಕೆ ಲಾಭವೋ? ನಷ್ಟವೋ? ಫೆಡ್ ಮುಖ್ಯಸ್ಥ ಜೆರೋಮ್ ಪೊವೆಲ್‌ ಬದಲಾವಣೆ? ಪ್ರಮುಖ ವಾಣಿಜ್ಯ ಸುದ್ದಿ ಸಂಸ್ಥೆ ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಮೇ ತಿಂಗಳಲ್ಲಿ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌ನ ಹಾಲಿ ಮುಖ್ಯಸ್ಥ ಜೆರೋಮ್ ಪೊವೆಲ್‌ ಅವರ ಅಧಿಕಾರಾವಧಿ ಮುಗಿಯಲಿದ್ದು, ಕೆವಿನ್ ಹ್ಯಾಸೆಟ್ ಅವರು ನೂತನ ಮುಖ್ಯಸ್ಥರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ.

ಈ ಸುದ್ದಿ ಕೂಡ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಮಾರುಕಟ್ಟೆ ತಜ್ಞರು ಹೇಳುವುದೇನು? “ಸದ್ಯದ ಮಟ್ಟಿಗೆ ಡಾಲರ್‌ ಎದುರು ರೂಪಾಯಿ ಮೌಲ್ಯವು 88.90 ರಿಂದ 89.80 ರೂ. ವ್ಯಾಪ್ತಿಯಲ್ಲಿ ವಹಿವಾಟು ನಡೆಸುವ ಸಾಧ್ಯತೆಯಿದೆ.

88.80 ರಿಂದ 89.00 ರೂ. ಮಟ್ಟವು ರೂಪಾಯಿಗೆ ಬಲವಾದ ಬೆಂಬಲ ವಲಯವಾಗಿ (ಸಪೋರ್ಟ್‌ ಝೋನ್‌) ಮುಂದುವರಿಯಲಿದೆ,” ಎಂದು ಸಿಆರ್ ಫಾರೆಕ್ಸ್ ಅಡ್ವೈಸರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಪಬಾರಿ ಅವರು ಹೇಳಿದ್ದಾರೆ.”

Leave a comment

Leave a Reply

Your email address will not be published. Required fields are marked *

Related Articles

ಕೊಡಗು, ಬೀದರ್, ಬಳ್ಳಾರಿ, ಚಿತ್ರದುರ್ಗ ಮತ್ತು ಮೈಸೂರು ಸೇರಿದಂತೆ ರಾಜ್ಯದ ಎಂಟು ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭ್ರಷ್ಟ ಅಧಿಕಾರಿಗೆ...

ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆ ಯ ಚಿಂತೆ ಬಿಟ್ಟು ಐಪಿಎಲ್ ಪಂದ್ಯಾಟದ ಉಚಿತ ಟಿಕೆಟ್ ಗೆ ಮುಗಿಬಿದ್ದ ರಾಜ್ಯದ 221 ಶಾಸಕರು

ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್  ಟೂರ್ನಿಯ 11ನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ...

ದಾವಣಗೆರೆ ಉಪ ಚುನಾವಣೆ ಯಾರಿಗೆ ಟಿಕೆಟ್ ಕೊಟ್ಟರೂ ನಾಯಕರಿಂದ ಒಟ್ಟಾಗಿ ಕೆಲಸ ಮಾಡುವ ಭರವಸೆ:: ಡಿಕೆ ಶಿವಕುಮಾರ್

ಬೆಂಗಳೂರು: ಉಪಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಒಮ್ಮತದಿಂದ ಕೆಲಸ ಮಾಡುವುದಾಗಿ ಸಚಿವ ಎಸ್ ಎಸ್...

ಮದುವೆಯಾಗಬೇಕಿದ್ದ ಬಾಲಕಿಯ ಎದೆ ಭಾಗ ಕತ್ತರಿಸಿ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಭಾವಿ ಪತಿ ಸೈಯದ್

ಬೆಂಗಳೂರು: ತನ್ನನ್ನು  ಮದುವೆಯಾಗಬೇಕಿದ್ದ ಬಾಲಕಿಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಭಾವಿ ಪತಿಯೇ ಬರ್ಬರವಾಗಿ...