ಇವಿ ಬಸ್‌ ಆಪರೇಟರ್‌ಗಳ ವಿರುದ್ಧ ಬಿಎಂಟಿಸಿ ಕಠಿಣ ಕ್ರಮ

19

ಕಾರ್ಯಕ್ಷಮತೆ ತೋರುವಲ್ಲಿ ವಿಫಲ, ಬ್ಯಾಟರಿ ಸಂಬಂಧಿತ ಸಮಸ್ಯೆಗಳಿಂದ ಸಂಚಾರಕ್ಕೆ ಅಡ್ಡಿ ಎನ್‌ಟಿಪಿಸಿ ವಿದ್ಯುತ್‌ ವ್ಯಾಪಾರ ನಿಗಮ ಲಿಮಿಟೆಟ್‌ಗೆ 9.80 ಕೋಟಿ ರೂ. ದಂಡ ಸ್ವಿಚ್‌ ಮೊಬಿಲಿಟಿ ಸಂಸ್ಥೆಗೆ 3 ಕೋಟಿ ರೂ. ದಂಡ ವಿಧಿಸಿದ ಬಿಎಂಟಿಸಿ ಟಿಎಂಎಲ್‌ ಸ್ಮಾರ್ಟ್‌ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್‌ ಲಿಮಿಟೆಟ್‌ಗೆ ಗರಿಷ್ಠ 11.99 ಕೋಟಿ ರೂ. ಓಎಚ್‌ಎಂ ಗ್ಲೋಬಲ್‌ ಮೊಬಿಲಿಟಿ ಪ್ರೈವೆಟ್‌ ಲಿಮಿಟೆಡ್‌ಗೆ 67 ಲಕ್ಷ ರೂ. ಫೈನ್‌ ಇವಿ ಬಸ್‌ ಆಪರೇಟರ್‌ಗಳ ವಿರುದ್ಧ ಬಿಎಂಟಿಸಿ ಕಠಿಣ ಕ್ರಮಕ್ಕೆ ಮುಂದಾಗಿದೆ.

ಜಿಸಿಸಿ ಮಾದರಿಯಡಿ ಬಿಎಂಟಿಸಿ ಪರಿಚಯಿಸಿರುವ ವಿದ್ಯುತ್‌ಚಾಲಿತ ಬಸ್‌ಗಳು ಅಪಘಾತದ ಕುಖ್ಯಾತಿಗೆ ಒಳಗಾಗಿವೆ. ಈ ಹಿನ್ನೆಲೆಯಲ್ಲಿ ಒಪ್ಪಂದದಂತೆ ಕಾರ್ಯಕ್ಷಮತೆ ತೋರುವಲ್ಲಿ ವಿಫಲವಾದ ನಾಲ್ಕು ಖಾಸಗಿ ಆಪರೇಟರ್‌ ಸಂಸ್ಥೆಗಳಿಗೆ ಬಿಎಂಟಿಸಿ ಈವರೆಗೆ 25 ಕೋಟಿ ರೂ.ಗೂ ಅಧಿಕ ದಂಡ ವಿಧಿಸಿದೆ.

ವಿದ್ಯುತ್‌ಚಾಲಿತ ಬಸ್‌ಗಳಲ್ಲಿ ನಿರ್ದಿಷ್ಟವಾಗಿ ಬ್ಯಾಟರಿ ಸಂಬಂಧಿತ ಸಮಸ್ಯೆಗಳೇ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿವೆ. ವೇಗವಾಗಿ ಚಾರ್ಜ್‌ ಕಳೆದುಕೊಳ್ಳುವುದು ಅಥವಾ ಬ್ಯಾಟರಿ ಓವರ್‌ ಹೀಟಿಂಗ್‌ನಂತಹ ಸಮಸ್ಯೆಯೂ ಕಾಣಿಸಿಕೊಳ್ಳುತ್ತಿದೆ. ಬಸ್‌ನಲ್ಲಿನ ಇನೊಟೈನ್‌ಮೆಂಟ್‌, ಎಸಿ ಮತ್ತು ಇತರೆ ಎಲೆಕ್ಟ್ರಾನಿಕ್‌ ಸಿಸ್ಟಂ, ಹೊಸ ತಂತ್ರಜ್ಞಾನದ ಬ್ರೇಕ್‌ ಮತ್ತು ಸಸ್ಪೆನ್ಷನ್‌ ಸಿಸ್ಟಂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಇವಿ ಬಸ್‌ಗಳ ಕಾರ್ಯಾಚರಣೆ ಆಗಾಗ್ಗೆ ಸ್ಥಗಿತಗೊಳ್ಳುತ್ತಿವೆ.

ಒಪ್ಪಂದದಂತೆ ಉತ್ತಮ ಕಾರ್ಯಕ್ಷಮತೆ ತೋರುವಲ್ಲಿ ಖಾಸಗಿ ಆಪರೇಟರ್‌ಗಳು ವಿಫಲವಾಗಿವೆ. ಇದೇ ಕಾರಣಕ್ಕೆ ಈವರೆಗೆ ನಾಲ್ಕು ಸಂಸ್ಥೆಗಳಿಗೆ 25 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ್‌ ರೆಡ್ಡಿ ಮಾಹಿತಿ ನೀಡಿದರು.

”ನಗರದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲ ವಿದ್ಯುತ್‌ ಚಾಲಿತ ಬಸ್‌ಗಳ ಸಮಸ್ಯೆಗಳ ಕುರಿತು ಖಾಸಗಿ ಆಪರೇಟರ್‌ಗಳಾದ ಎನ್‌ಟಿಪಿಸಿ ವಿದ್ಯುತ್‌ ವ್ಯಾಪಾರ ನಿಗಮ ಲಿಮಿಟೆಡ್‌, ಸ್ವಿಚ್‌ ಮೊಬಿಲಿಟಿ ಆಟೋಮೊಟಿವ್‌ ಲಿಮಿಟೆಡ್‌, ಟಿಎಂಎಲ್‌ ಸ್ಮಾರ್ಟ್‌ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್‌ ಲಿಮಿಟೆಡ್‌ ಹಾಗೂ ಓಎಚ್‌ಎಂ ಗ್ಲೋಬಲ್‌ ಮೊಬಿಲಿಟಿ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಕೇಂದ್ರದ ಬೃಹತ್‌ ಕೈಗಾರಿಕಾ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ.

ಇವಿ ಬಸ್‌ಗಳಲ್ಲಿ ವೇಗವಾಗಿ ಚಾರ್ಜ್‌ ಕಳೆದುಕೊಳ್ಳುತ್ತಿರುವ ಬ್ಯಾಟರಿಗಳು, ಸೂಕ್ತ ತರಬೇತಿ ಇಲ್ಲದ ಚಾಲಕರ ನಿಯೋಜನೆ, ಚಾಲಕರ ನಿರ್ವಹಣೆ, ವೇತನ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಮನದಟ್ಟು ಮಾಡಲಾಗಿದೆ. ಈ ಸಮಸ್ಯೆಗಳು ಮರುಕಳಿಸದಂತೆ ಕ್ರಮ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಲ್ಲದೆ, ಚಾಲಕರ ಸಂಖ್ಯೆ ಹೆಚ್ಚಿಸುವಂತೆಯೂ ಮನವಿ ಮಾಡಲಾಗಿದೆ. ಇದಕ್ಕೆ ಆಪರೇಟರ್‌ಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ,” ಎಂದು ಅವರು ತಿಳಿಸಿದರು.

ಇವಿ ಚಾಲಕರಿಗೂ ತರಬೇತಿ ಇನ್ನು, ಇವಿ ಬಸ್‌ಗಳಿಂದ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳಡಿ ಕಾರ್ಯನಿರ್ವಹಿಸುತ್ತಿರುವ ಚಾಲಕರಿಗೂ ಸಂಸ್ಥೆಯಿಂದಲೇ ವಡ್ಡರಹಳ್ಳಿ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತಿದೆ. ಒತ್ತಡ ನಿವಾರಣೆ, ಆರೋಗ್ಯದ ಬಗೆಗಿನ ಕಾಳಜಿ, ಚಾಲನಾ ಜಾಗೃತಿ, ಸಂಚಾರ ನಿಯಮಗಳು ಮತ್ತು ಮಳೆ ಇದ್ದಾಗ, ಇಲ್ಲದಿರುವಾಗ ಹೇಗೆ ಚಾಲನೆ ಮಾಡಬೇಕು ಎಂಬ ಬಗ್ಗೆ ಮೂರು ದಿನಗಳ ತರಬೇತಿ ನೀಡಲಾಗುತ್ತಿದೆ.

ಈಗಾಗಲೇ 150 ಚಾಲಕರು ತರಬೇತಿ ಪೂರ್ಣಗೊಳಿಸಿದ್ದಾರೆ. ಅಲ್ಲದೆ, ಚಾಲಕರ ಮೇಲಿನ ಒತ್ತಡ ಕಡಿಮೆ ಮಾಡಲೆಂದೇ ವಿವಿಧ ಮಾರ್ಗದಲ್ಲಿನ 3 ಸಾವಿರ ಟ್ರಿಪ್‌ಗಳ ಸಮಯ ಬದಲಾವಣೆ ಮಾಡಲಾಗಿದೆ ಎಂದು ಜಿ.ಟಿ. ಪ್ರಭಾಕರ್‌ ರೆಡ್ಡಿ ತಿಳಿಸಿದರು. ವೇತನ ಪಾವತಿಗೆ ನಿರ್ದಿಷ್ಟ ದಿನಾಂಕ ನಿಗದಿ ಖಾಸಗಿ ಆಪರೇಟರ್‌ಗಳನ್ನು ನಿಯಂತ್ರಿಸುವುದಕ್ಕಾಗಿ ಸಂಸ್ಥೆಯು ತಿಂಗಳಿಗೊಮ್ಮೆ ನಿರ್ದಿಷ್ಟ ದಿನಾಂಕದಂದು ವೇತನ ಪಾವತಿಸಲು ನಿರ್ಧರಿಸಿದೆ. ಅದಕ್ಕಾಗಿ ಹೊಸ ನಿಯಮ ಜಾರಿಗೊಳಿಸಲಾಗುವುದು.

ಈ ಹಿಂದೆ ಆಯಾ ತಿಂಗಳಲ್ಲಿ ಬೇರೆ ಬೇರೆ ದಿನಾಂಕಗಳಂದು ಪಾವತಿಸಲಾಗುತ್ತಿತ್ತು. ಅದೀಗ ಬದಲಾಗಲಿದೆ. ಅದೇ ರೀತಿ ಚಾಲಕರ ವೇತನಕ್ಕೂ ನಿರ್ದಿಷ್ಟ ದಿನಾಂಕ ನಿಗದಿಪಡಿಸುವಂತೆ ಆಪರೇಟರ್‌ಗಳಿಗೆ ನಿರ್ದೇಶನ ನೀಡಲಾಗುವುದು. ಇದರಿಂದ ವೇತನ ಪಾವತಿ ವಿಳಂಬದಿಂದ ತೊಂದರೆ ಅನುಭವಿಸುವ ಚಾಲಕರಿಗೂ ಅನುಕೂಲವಾಗಲಿದೆ ಎಂದು ಅವರು ಮಾಹಿತಿ ನೀಡಿದರು”

Leave a comment

Leave a Reply

Your email address will not be published. Required fields are marked *

Related Articles

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಕಲು ಹದಿನೆಂಟು ಅಭ್ಯರ್ಥಿಗಳ ಬಂಧನ

“ಬೆಂಗಳೂರು: ಇತ್ತೀಚೆಗೆ ನಡೆದ ಸೇನಾ ಗ್ರೂಪ್ ಸಿ ನೇಮಕಾತಿ ಪರೀಕ್ಷೆಗೆ ಹಾಜರಾದ ಹದಿನೆಂಟು ಅಭ್ಯರ್ಥಿಗಳನ್ನು ವಂಚನೆ...

ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೈಕೋರ್ಟ್ ಬಿಗ್ ಶಾಕ್  ನಿರೀಕ್ಷಣಾ ಜಾಮೀನು ಅರ್ಜಿ ವಜಾ

“ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್...

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ ದಾಖಲಿಸದಂತೆ ಹೊಸ ಮಾರ್ಗಸೂಚಿ

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ “ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂಬುದನ್ನು ಗಮನಿಸಿದ...

ಅಲ್ಪಸಂಖ್ಯಾತರ ಸಾಲದ ಬಡ್ಡಿ ಮನ್ನಾ ತುಷ್ಟಿಕರಣದಲ್ಲಿ ತೊಡಗಿಕೊಂಡ ಸರಕಾರದ ವಿರುದ್ಧ:: ಸಿಟಿ ರವಿ ವಾಗ್ದಾಳಿ

“ಬೆಂಗಳೂರು: ಬಿಜೆಪಿಯ ಹಿರಿಯ ನಾಯಕರು ಸಿದ್ದರಾಮಯ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, ರೈತರು, ಹಿಂದುಳಿದ...