ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಗೆ ಸರಕಾರ ಭೂಮಿ ಗುತ್ತಿಗೆ ನೀಡಿರುವುದನ್ನು ಖಂಡಿಸಿರುವ ನೀವುಗಳು ತಾಕತ್ತಿದ್ದರೆ ಇದನ್ನೂ ಖಂಡಿಸಿ. ::.ದಲಿತ ಮುಖಂಡ, ಸಾಮಾಜಿಕ ಹೋರಾಟಗಾರ ಶೇಖರ್ ಹಾವಂಜೆ ಸವಾಲು.

63

ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ 9. 50 ಎಕರೆ ಬಂದರು ವ್ಯಾಪ್ತಿಯ ಭೂಮಿಯನ್ನು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಗೆ ಗುತ್ತಿಗೆ ನೀಡಿರುವುದನ್ನು ಖಂಡಿಸುತ್ತಾ.ಈ ಭೂಮಿಯನ್ನು ಫೆಡರೇಷನ್ ಗೆ ನೀಡಿರುವ ಸರಕಾರದ ನಿಲುವಿನ ವಿರುದ್ಧ ಅನೇಕ ಪ್ರಜ್ಞಾವಂತರು ಎನಿಸಿಕೊಂಡವರು, ಕೆಲವು ರಾಜಕಾರಣಿಗಳು ಖಂಡಿಸಿದ್ದಾರೆ.

ಆದರೆ ಈ ವಿಷಯದ ಬಗ್ಗೆ ಮಾತನಾಡಿರುವ ಪ್ರತಿಯೊಬ್ಬರ ಗಮನಕ್ಕೂ ಇರಲಿ ಏನೆಂದರೆ ಮೀನುಗಾರಿಕಾ ಇಲಾಖೆಯ ಹಾಗೂ ಬಂದರು ಇಲಾಖೆಯ ನೂರಾರು ಎಕರೆ ಸರಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳು, ಪ್ರಭಾವಿಗಳು, ಕೆಲವು ರಾಜಕಾರಣಿಗಳು ಅಕ್ರಮವಾಗಿ ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಂಡು ಅದರಲ್ಲಿ ಅಕ್ರಮವಾಗಿ ಯಾವುದೇ ಇಲಾಖೆಗಳ ಅನುಮತಿ, ಪರವಾನಿಗೆ ಇಲ್ಲದೆ ನಿರ್ಮಿಸಿರುವ ಬೃಹತ್ ಬಹುಮಹಡಿ ಕಟ್ಟಡಗಳು ಇಂದಿಗೂ ರಾಜಾರೋಷವಾಗಿ ಕಾರ್ಯಚರಿಸುತ್ತಿವೆ.

ಮೀನು ಫ್ಯಾಕ್ಟರಿಗಳು, ಬೃಹತ್ ಬಹುಮಹಡಿ ಕಟ್ಟಡಗಳು, ವಾಣಿಜ್ಯ ಮಾಲ್ ಗಳು ಇದರಿಂದ ಸರಕಾರಕ್ಕೆ ಒಂದೇ ಒಂದು ರೂಪಾಯಿ ಲಾಭವಂತು ಖಂಡಿತ ಇಲ್ಲವೇ ಇಲ್ಲ. ಮಲ್ಪೆ ಫಿಶ್ ಟ್ರೇಡ್ ಸೆಂಟರ್ ಎಂಬ ಹೆಸರಿನ ಬೃಹತ್ ವಾಣಿಜ್ಯ ಕಟ್ಟಡ, ಪಡುಕೆರೆಗೆ ಹೋಗುವ ಮಾರ್ಗದ ಬದಿಯಲ್ಲಿ ಅಯ್ಯಪ್ಪ ಮಂದಿರದ ಹಿಂದುಗಡೆ ಬೃಹತ್ ಮೂರು ಅಂತಸ್ತಿನ ವಾಣಿಜ್ಯ ಬಹುಮಹಡಿ ಕಟ್ಟಡವನ್ನು ಸರಕಾರಿ ಭೂಮಿಯಲ್ಲಿ ಯಾವುದೇ ಪರವಾನಿಗೆ, ನಿರಕ್ಷೇಪಣಾ ದೃಢಪತ್ರ ಯಾವುದೇ ಇಲಾಖೆಗಳ ಅನುಮತಿಗಳೇ… ಇಲ್ಲದೆ ನಿರ್ಮಿಸಿರುವ ಬಹುಮಹಡಿ ಕಟ್ಟಡಗಳು

ಅದೇ ಮಾರ್ಗವಾಗಿ ಮುಂದೆ ಹೋಗುವಾಗ ಅಕ್ರಮವಾಗಿ ನಿರ್ಮಾಣವಾಗಿರುವ ಜೈ ಸಂತೋಷ್ ಮಾತಾ ಎಂಬ ಹೆಸರಿನ ಬೃಹತ್ ವಾಣಿಜ್ಯ ಕಟ್ಟಡ ಅಷ್ಟೇ ಅಲ್ಲ ಇನ್ನು ಬಗೆದಷ್ಟು ಸಿಗುತ್ತದೆ ಇಲ್ಲಿ ಅಕ್ರಮಗಳು ಕಾಣ‌ಸಿಗುತ್ತವೆ.

ಸರಕಾರದ ಮೀನುಗಾರಿಕಾ ಇಲಾಖೆ, ಬಂದರು ಇಲಾಖೆಯ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಿಸಿ ಅದರಲ್ಲಿ ಅಕ್ರಮವಾಗಿ ನಿರ್ಮಿಸಿರುವ ಬೃಹತ್ ಬಹುಮಹಡಿಗಳ ಕಟ್ಟಡಗಳು ,ವಾಣಿಜ್ಯ ಮಳಿಗೆಗಳು, ಲಾಡ್ಜ್ ಗಳು ,ಒಂದಾ ಎರಡ…?

ಈ ಮಲ್ಪೆ ಸುತ್ತಮುತ್ತಲಿನ ಸರಕಾರದ ಭೂಮಿಯನ್ನು ಕೊಳ್ಳೆ ಹೊಡೆದು ಸರಕಾರಕ್ಕೆ ಕೋಟಿಗಿಂತಲೂ ಹೆಚ್ಚು ವಂಚಿಸಲಾಗಿದೆ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ. ಇಷ್ಟು ವರ್ಷದಿಂದ ಬಾಯಿಯೇ ಬಿಡದವರು ಇಂದು ಪತ್ರಿಕಾಗೋಷ್ಠಿಗಳು, ಮಾಧ್ಯಮ ಹೇಳಿಕೆಗಳು, ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಂದರಲ್ಲಿ ಖಂಡಿಸುವ ನೀವುಗಳು…. ಈ ಮೇಲಿನ ಪ್ರಕರಣಗಳು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ..? ಅಥವಾ ಹಿಂದಿನ ಎಲ್ಲಾ ಅಕ್ರಮಗಳಲ್ಲಿ ನಿಮ್ಮದು ಪಾಲು ಇದೆಯಾ..?

ಈ ಮೇಲಿನ ಅಷ್ಟೂ ಪ್ರಕರಣಗಳು ನಡೆದಾಗ ನಮ್ಮ ಕ್ಷೇತ್ರದ ಶಾಸಕರು ಕೂಡ ಮಾತನಾಡಿಲ್ಲ. ಅಂದರೆ ನೀವೆಲ್ಲರೂ ಒಂದೇ ಎನ್ನುವುದು ಸಾಬೀತಾಗುತ್ತದೆ. ಜನಗಳನ್ನು ದಿಕ್ಕು, ದಾರಿ ತಪ್ಪಿಸಿ ನಿಮ್ಮ ಹೊಲಸು ರಾಜಕೀಯ ಬೆಳೆಸಲು ಹೊರಟಿದ್ದೀರಿ ಎನ್ನುವುದು ಸ್ಪಷ್ಟ.

ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಗೆ ನೀಡಿದ ಭೂಮಿಯ ಬಗ್ಗೆ ಇಷ್ಟೊಂದು ಕೂಗಾಡುವ ನೀವುಗಳು ತಾಕತ್ತಿದ್ದರೆ ಈ ಅಕ್ರಮ ಮಲ್ಪೆ ಫಿಶ್ ಟ್ರೇಡ್ ಸೆಂಟರ್,ಜೈ ಸಂತೋಷ್ ಮಾತಾ, ಅಯ್ಯಪ್ಪ ದೇವಸ್ಥಾನದ ಹಿಂದುಗಡೆ ನಿರ್ಮಾಣವಾಗಿರುವ ಬಹುಮಹಡಿ ಕಟ್ಟಡಗಳ ಬಗ್ಗೆ ಹಾಗೂ ಇನ್ನಿತರ ಕೊಳ್ಳೆ ಹೊಡೆದಿರುವ ಸರಕಾರದ, ಇಲಾಖೆಯ ಭೂಮಿಗಳ ಬಗ್ಗೆ ಮಾತನಾಡಿ ನೋಡೋಣ.
ಇದು ನಿಮಗೆ ನನ್ನ ಸವಾಲು ನಿಮ್ಮೆಲ್ಲರಿಗೂ ತಾಕತ್ತಿದ್ದರೆ ಸವಾಲು ಸ್ವೀಕರಿಸಿ.

ಎಂದು ದಲಿತ ಮುಖಂಡ, ಸಾಮಾಜಿಕ ಹೋರಾಟಗಾರ ಶೇಖರ್ ಹಾವಂಜೆ ಸವಾಲು ಹಾಕಿದ್ದಾರೆ.

Leave a comment

Leave a Reply

Your email address will not be published. Required fields are marked *

Related Articles

ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ, ರಾಜ್ಯ ಯುವಜನ...

ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಶಿಶಿರ್ ಶೆಟ್ಟಿ ಆಯ್ಕೆ

“ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ಹಳೆ ವಿದ್ಯಾರ್ಥಿ ಸಂಘವು ಪುನರ್...

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...