ಪರಿಸರದ ಮೇಲೆ ಭಾರಿ ಹಾನಿ : ಎತ್ತಿನ ಹೊಳೆ ಯೋಜನೆಗೆ ಕೇಂದ್ರ ತಡೆಯಾಜ್ಞೆ

29

ಮಾಗಡಿ ಗ್ರಾಮಾಂತರ: 2027 ಮಾರ್ಚ್ ವೇಳೆಗೆ ಬೆಂಗಳೂರು ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ಕುಡಿಯುವ ನೀರು ಪೂರೈಕೆಗೆ ಯೋಜನೆ ಬೇಗ ಜಾರಿ ಮಾಡಲು ಪಟ್ಟು ಹಿಡಿದಿದ್ದ ರಾಜ್ಯ ಸರಕಾರ ಕಾಮಗಾರಿಗಳನ್ನು ಪರಿಶೀಲಿಸಿದ ಹೊರತು ಯೋಜನೆಯ ಮುಂದುವರಿದ ಭಾಗಕ್ಕೆ ಅನುಮತಿ ನೀಡದಂತೆ ಸಲಹೆ ನೀಡಲಾಗಿದೆ. ಕೇಂದ್ರದ ಆಕ್ಷೇಪಕ್ಕೆ ರಾಜ್ಯ ಸರಕಾರ ಉತ್ತರಿಸಿದೆ ಮತ್ತು ಕೇಂದ್ರಕ್ಕೆ ಯೋಜನೆ ಪೂರ್ಣಗೊಳಿಸಲು ಮನವಿ ಮಾಡಿದೆ ಎಂದಿದ್ದಾರೆ ಡಿ.ಕೆ ಶಿವಕುಮಾರ್‌ ಡಿಸಿಎಂ, ಜಲಸಂಪನ್ಮೂಲ ಸಚಿವ.

ಪರಿಸರದ ಮೇಲೆ ಭಾರಿ ಹಾನಿಯಾಗಿದೆ ಎಂದು ಬಯಲು ಸೀಮೆ ಜಿಲ್ಲೆಗಳ ಮಹತ್ವಾಂಕಾಕ್ಷಿ ಯೋಜನೆ ಎತ್ತಿನ ಹೊಳೆ ಯೋಜನೆಗೆ ಕೇಂದ್ರ ತಡೆಯಾಜ್ಞೆ ನೀಡಿದೆ.! ಕೇಂದ್ರ ಪರಿಸರ ಇಲಾಖೆಯ ಸಲಹಾ ಸಮಿತಿ ವರದಿ ನೀಡಿ ಎತ್ತಿನ ಹೊಳೆ ಕಾಮಗಾರಿ ವೇಗ ತಗ್ಗಿಸಿದ್ದು, ಈಗ ಕೇಂದ್ರ ಹಸಿರು ನಿಶಾನೆ ತೋರುವವರೆಗೂ ಕಾಮಗಾರಿ ನಿಂತಲ್ಲೆ ನಿಲ್ಲುವಂತಾಗಿದೆ.

ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳ ಹಲವು ಭಾಗಗಳಿಗೆ ಎತ್ತಿನ ಹೊಳೆ ಯೋಜನೆಯಿಂದ ಕುಡಿಯುವ ನೀರು ಒದಗಿಸುವ ಉದ್ದೇಶ ಸರಕಾರ ಮೊದಲ ಹಂತದ ಯೋಜನೆಗೆ ಚಾಲನೆ ನೀಡಿತ್ತು. ಹಾಸನದ ಬಳಿ ಪ್ರಾಯೋಗಿಕ ಪರೀಕ್ಷೆ ನಡೆಸಿ ಎತ್ತಿನ ಹೊಳೆ ನೀರನ್ನು ಸಕಲೇಶಪುರ ಘಟ್ಟದಿಂದ ತಿರುಗಿಸಿ ನೇರ ಚಿತ್ರದುರ್ಗ ಮಾರಿಕಣಿವೆ ಜಲಾಶಯಕ್ಕೆ ಹರಿಸಿ ಯಶಸ್ವಿಯೂ ಆಗಿತ್ತು.

ಯೋಜನೆಗೆ ಹಿನ್ನಡೆ: 2027 ಮಾರ್ಚ್ ವೇಳೆಗೆ ಬೆಂಗಳೂರು ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ಕುಡಿಯುವ ನೀರು ಪೂರೈಕೆಗೆ ಯೋಜನೆ ಬೇಗ ಜಾರಿ ಮಾಡಲು ಪಟ್ಟು ಹಿಡಿದಿದ್ದ ರಾಜ್ಯ ಸರಕಾರಕ್ಕೆ ಕೇಂದ್ರದ ಆದೇಶದಿಂದ ಈಗ ಹಿನ್ನೆಡೆಯಾಗಿದೆ. ಅರಣ್ಯ ಸಮಿತಿಯ ಆಕ್ಷೇಪ: ಅ.27ರಂದು ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಸಭೆ ನಡೆಸಿದ್ದು, ಅದರಲ್ಲಿ ಯೋಜನೆಗೆ ತೀವ್ರ ಆಕ್ಷೇಪಣೆ ಎತ್ತಿದೆ.

ಎತ್ತಿನಹೊಳೆ ಜತೆಗೆ ಶರಾವತಿ ಪಂಪ್‌್ಡ ಸ್ಟೋರೇಜ್‌ ಯೋಜನೆಗೂ ಕೇಂದ್ರ ಸರಕಾರ ತಡೆಯೊಡ್ಡಿ ಯೋಜನೆಯ ಮೊದಲ ಹಂತದಲ್ಲಿ ಹಲವು ಕಾಮಗಾರಿಗಳು ಅನಧಿಕೃತವಾಗಿದೆ ಎಂದು ಕೇಂದ್ರ ಪರಿಸರ ಇಲಾಖೆಯ ಸಲಹಾ ಸಮಿತಿ ನೋಟಿಸ್‌ ಕೊಟ್ಟಿದೆ. ಕಾಮಗಾರಿಗಳನ್ನು ಪರಿಶೀಲಿಸಿದ ಹೊರತು ಯೋಜನೆಯ ಮುಂದುವರಿದ ಭಾಗಕ್ಕೆ ಅನುಮತಿ ನೀಡದಂತೆ ಸಲಹೆ ನೀಡಲಾಗಿದೆ.

ತಡೆಯಾಜ್ಞೆಗೆ ಕಾರಣಗಳಿವು: ಹಾಸನ ಮತ್ತು ತುಮಕೂರು ಜಿಲ್ಲೆಯ ಬಳಿ ಗುರುತ್ವಕಾಲುವೆ ನಿರ್ಮಿಸಲು ತುಮಕೂರಿನ ಬೆಣ್ಣೆಹಳ್ಳ ಕಾವಲ್‌, ಕಂಚಿಗಾನಹಳ್ಳಿ ಮತ್ತು ಹಾಸನ ಜಿಲ್ಲೆಯ ಐದಹಳ್ಳಿ, ಕಮರಿ ಹಳ್ಳಿ ಗ್ರಾಮದಲ್ಲಿ ಯೋಜನೆಗೆ ಅರಣ್ಯ ಭೂಮಿ ಬಳಕೆಮಾಡುತ್ತೇವೆ ಎಂದು ಅ.8 ರಂದು ಮನವಿ ಮಾಡಿತ್ತು. ಕೇಂದ್ರ ಅರಣ್ಯ ಸಲಹಾ ಸಮಿತಿ ಜಲಸಂಪನ್ಮೂಲ ಇಲಾಖೆ ಮನವಿ ತಿರಸ್ಕರಿಸಿದೆ. ಕೇಂದ್ರ ಅರಣ್ಯ ಸಲಹಾ ಸಮಿತಿಯ ಗುಪ್ತದಳ ಈಗಾಗಲೇ ಎತ್ತಿನ ಹೊಳೆ ಯೋಜನೆಗೆ ಅರಣ್ಯ ಭೂಮಿ ಬಳಕೆಯನ್ನು ಪತ್ತೆ ಹಚ್ಚಿದ್ದು, ರಾಜ್ಯ ಸರಕಾರ ತಪ್ಪು ಮಾಹಿತಿ ನೀಡಿದೆ 0.4 ಹೆಕ್ಟೇರ್‌ ಅರಣ್ಯ ಮಾತ್ರ ಅರಣ್ಯ ಪ್ರದೇಶ ಬಳಕೆಯಾಗಿದೆ ಎಂದು ರಾಜ್ಯ ಸರಕಾರ ತಿಳಿಸುತ್ತಿದೆ.

ಕೇಂದ್ರ 107 ಹೆಕ್ಟೇರ್‌ ಅರಣ್ಯ ಪ್ರದೇಶ ಈಗಾಗಲೇ ಬಳಕೆ ಮಾಡಿಕೊಂಡಿದ್ದೀರಿ ಎಂದು ರಾಜ್ಯ ಸರಕಾರಕ್ಕೆ ಸಾಕ್ಷಿ ಸಮೇತ ವಾದಕ್ಕೆ ನಿಂತಿದೆ. ಕಂದಾಯ ಭೂಮಿಯೆಂದು ಬಳಕೆ: ಈ ಹಿಂದೆ ರಾಜ್ಯ ಸರಕಾರದ ಜಲ ಸಂಪನ್ಮೂಲ ಇಲಾಖೆ ಯೋಜನೆಗೆ ಪೂರ್ಣ 423 ಎಕರೆ ಅರಣ್ಯ ಬಳಕೆಗೆ ಒಪ್ಪಿಗೆ ಕೋರಿ ಮನವಿ ಮಾಡಿತ್ತು. ಅರಣ್ಯ ಭೂಮಿ ಬಳಕೆಯಾಗಲಿದೆ ಎಂದು ಕೇಂದ್ರ ಅರಣ್ಯ ಸಲಹಾ ಸಮಿತಿ ಮೊದಲು ಯೋಜನೆಗೆ ಒಪ್ಪಿಗೆ ನೀಡಿರಲಿಲ್ಲ. ಬಳಿಕ ರಾಜ್ಯ ಸರಕಾರ 107 ಹೆಕ್ಟೇರ್‌ ಅರಣ್ಯ ಭೂಮಿಯನ್ನು ಕಂದಾಯ ಭೂಮಿ ಎಂದು ಭಾವಿಸಿ ಬಳಕೆ ಮಾಡಿಕೊಂಡಿತ್ತು.

ಈಕ್ರಮ ದುರುದ್ದೇಶವಲ್ಲ ಎಂದು ರಾಜ್ಯ ಸರಕಾರ ಹೇಳಿ ಯೋಜನೆ ಮರು ಆರಂಭಕ್ಕೆ ಹಸಿರು ನಿಶಾನೆ ತೋರಿ ಎನ್ನುತ್ತಿದೆ. ಆದರೆ ಕೇಂದ್ರ ಅರಣ್ಯ ಸಲಹಾ ಸಮಿತಿ ಏನು ಮಾಡುತ್ತದೆ ಕಾದುನೋಡಬೇಕಿದೆ. ಜಂಟಿ ವರದಿ ಸಲ್ಲಿಕೆಗೆ ಸೂಚನೆ ಎತ್ತಿನಹೊಳೆ ಯೋಜನೆ ಕೆಲಸ ಮಾಡುತ್ತಿರುವ ವಿಶ್ವೇಶ್ವರಯ್ಯ ಜಲನಿಗಮ ಅರಣ್ಯ ಭೂಮಿ ಬಳಕೆ ಲೋಪವಾಗಿದೆಯೇ ಎಂಬ ಬಗ್ಗೆ ರಾಜ್ಯ ಅರಣ್ಯ ಇಲಾಖೆ ಮತ್ತು ಸಚಿವಾಲಯದ ಪ್ರಾದೇಶಿಕ ಕಚೇರಿ ಜಂಟಿ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲು ಕೇಂದ್ರ ಸಮಿತಿ ನಿರ್ದೇಶನ ನೀಡಿದೆ.

ಕೇಂದ್ರದ ಆಕ್ಷೇಪಕ್ಕೆ ರಾಜ್ಯ ಸರಕಾರ ಉತ್ತರಿಸಿದೆ ಮತ್ತು ಕೇಂದ್ರಕ್ಕೆ ಯೋಜನೆ ಪೂರ್ಣಗೊಳಿಸಲು ಮನವಿ ಮಾಡಿದೆ ಎಂದಿದ್ದಾರೆ ಡಿ.ಕೆ ಶಿವಕುಮಾರ್‌ ಡಿಸಿಎಂ, ಜಲಸಂಪನ್ಮೂಲ ಸಚಿವ. ಯೋಜನೆಗೆ ಕೆಲ ಭಾಗದಲ್ಲಿಅರಣ್ಯಭೂಮಿ ಬಳಕೆಯಾಗಬೇಕಿದೆ ಇದು ತಾಂತ್ರಿಕ ಬಿಕ್ಕಟಿನ ವಿಚಾರ ಎಂದಿದ್ದಾರೆ (ಹೆಸರೇಳದ ಎತ್ತಿನ ಹೊಳೆ ಯೋಜನೆ ಅಧಿಕಾರಿ)”

Leave a comment

Leave a Reply

Your email address will not be published. Required fields are marked *

Related Articles

ಮೂಡುಬೆಳ್ಳೆಯಲ್ಲಿ ಹಿಂದೂ ಜನ ಸೇವಾ ಟ್ರಸ್ಟ್ ವತಿಯಿಂದ ಹಿಂದೂ ಜನಸೇವಾ ಗೌರವ ಪುರಸ್ಕಾರ- 2026

ಹಿಂದೂ ಜನಸೇವಾ ಟ್ರಸ್ಟ್ (ರಿ) ವತಿಯಿಂದ ಪ್ರತಿ ವರ್ಷ ನಡೆಯುವ ಸಮಾಜದಲ್ಲಿ ಸಮಾಜಮುಖಿ ಚಟುವಟಿಕೆ ನಡೆಸಿಕೊಂಡು...

ಮೈಲಾರ ಲಿಂಗೇಶ್ವರನ ಐತಿಹಾಸಿಕ ಕಾರ್ಣಿಕೋತ್ಸವ – 2026 18 ಅಡಿ ಎತ್ತರದ ಬಿಲ್ಲೇರಿ ನುಡಿದ ದೈವವಾಣಿ

“ವಿಜಯನಗರ: ಉತ್ತರ ಕರ್ನಾಟಕದ ಹಾಗೂ ಕೋಟಿ ಕೋಟಿ ಭಕ್ತರ ನಂಬಿಕೆಯ ಕೇಂದ್ರವಾಗಿರುವ ವಿಜಯನಗರ ಜಿಲ್ಲೆಯ ಹೂವಿನ...

ಬೇಲಿಕೇರಿ ಕಬ್ಬಿಣದ ಅದಿರು ಅಕ್ರಮ ಸಾಗಾಟ ಪ್ರಕರಣ ತಂದೆ ಮಗನಿಗೆ ಮೂರು ವರ್ಷ ಜೈಲು ಶಿಕ್ಷೆ, 52.55ಲಕ್ಷ ದಂಡ ವಿಧಿಸಿದ  ನ್ಯಾಯಾಲಯ

“ಬೆಂಗಳೂರು: ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದಲ್ಲಿ ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರನ್ನು...

ಇಂಧನ ಖಾತೆ ಕೆಲಸಗಳಲ್ಲಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ರಾಜೀನಾಮೆಗೆ ಮುಂದಾದರೆ ಇಂಧನ ಸಚಿವ ಕೆ ಜೆ ಜಾರ್ಜ್

“ಇಂಧನ ಸಚಿವ ಕೆ.ಜೆ ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರೇ, ಈ ವಿಚಾರ ಮಾಧ್ಯಮಗಳಲ್ಲಿ...