ಮಲ್ಪೆ ಮುಗ್ಧ ಜನರನ್ನ ದಾರಿ ತಪ್ಪಿಸಿ ಷಡ್ಯಂತರ ರಚಿಸುವುದನ್ನು ಕೂಡಲೇ ನಿಲ್ಲಿಸಿ ಮಾಜಿ ಶಾಸಕ ರಘುಪತಿ ಭಟ್ ಗೆ ಸನತ್ ಸಾಲಿಯಾನ್ ಎಚ್ಚರಿಕೆ

138

ಮಲ್ಪೆ ಹಲವಾರು ದಶಕಗಳಿಂದ ಉಡುಪಿಯ ಶಾಸಕರಾಗಿದ್ದ ರಘುಪತಿ ಭಟ್ ನೀವು ಮಲ್ಪೆ ಕಡಲ ತಡಿಯ ಜನರ ಬಹು ಬೇಡಿಕೆಯನ್ನು ಈಡೇರಿಸದೆ ಹಲವಾರು ವರ್ಷಗಳಿಂದ ಹನುಮಾನ್ ನಗರದ ಜನರು ನೀವು ಶಾಸಕರಾಗಿದ್ದ ಸಂದರ್ಭದಲ್ಲಿ ಬಯಲು ರಂಗಮಂದಿರ ಹಾಗೂ ಇನ್ನಿತರ ಚಟುವಟಿಕೆಗಳಿಗಾಗಿ ನಿಮ್ಮ ಬಳಿ ಬೇಡಿಕೆಟ್ಟು ಹಲವಾರು ಬಾರಿ ಭೇಟಿ ಮಾಡಿದರು ಕೂಡ ಯಾವುದೇ ರೀತಿಯ ಸಹಾಯವನ್ನು ಮಾಡದೆ ಇದೀಗ ಪ್ರಸ್ತುತ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಮಲ್ಪೆಯ ಭಜನಾ ಮಂದಿರ ಹಾಗೂಮುಗ್ದ ಜನರನ್ನಮತ್ತು ಕೆಲವೇ ಕೆಲವು ಬೆರಳೆಣಿಕೆಯ ನಿಮ್ಮ ಹಿಂಬಾಲಕರನ್ನು ಹಿಡಿದುಕೊಂಡು ದಾರಿ ತಪ್ಪಿಸುವ ಕೆಲಸವನ್ನು ಕೂಡಲೇ ನಿಲ್ಲಿಸುವಂತೆ ತಮಗೆ ಈ ಮೂಲಕ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದು ಸಮಾಜ ಸೇವಕ ಸನತ್ ಸಾಲಿಯಾನ್ ಮಲ್ಪೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ

ಇದೇ ರೀತಿ ತಾವು ಅಮಾಯಕ ಜನರನ್ನು ದಾರಿ ತಪ್ಪಿಸಿ ಷಡ್ಯಂತರ ರಚಿಸಿದರೆ ತಾವು 15 ವರ್ಷ ಮೂರು ಬಾರಿ ಶಾಸಕರಾಗಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಾಡಿದ ಎಲ್ಲಾ ಅಕ್ರಮಗಳನ್ನು ಬಹಿರಂಗಪಡಿಸಲು ನಾವು ಸಿದ್ಧರಿದ್ದೇವೆ ಕೇವಲ ತಮ್ಮ ಹಿಂಬಾಲಕರಿಗೋಸ್ಕರ ಮಲ್ಪೆ ಹಾಗೂ ಇನ್ನಿತರ ಸ್ಥಳಗಳಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಏನೆಲ್ಲಾ ಕೆಲಸಗಳನ್ನು ಮಾಡಿದ್ದೀರಿ ಅನ್ನೋದು ಈ ಭಾಗದ ಹೆಚ್ಚಿನ ಜನರಿಗೆ ತಿಳಿದಿದೆ ಮಲ್ಪೆ ಜನರನ್ನ ಜನರ ಒಗ್ಗಟ್ಟನ್ನು ಹೊಡೆಯಲು ನೀವು ಮಾಡಿದ ಷಡ್ಯಂತರ ಎಲ್ಲರಿಗೂ ತಿಳಿದ ವಿಚಾರವಾಗಿದೆ ನಿಮ್ಮ ಎಲ್ಲಾ ಅಕ್ರಮಗಳ ಹೆಚ್ಚಿನ ಮಾಹಿತಿ ಸಾರ್ವಜನಿಕರಿಗೆ ಇದೆ

ಮೊದಲ ಬಾರಿ ಶಾಸಕರಾಗಿದ್ದಾಗ ನೀವು ಹೇಗಿದ್ದವರು ನಂತರ ದಿನಗಳಲ್ಲಿ ಹೇಗೆ ಬದಲಾಗಿದ್ದಿರಿ ಏನೆಲ್ಲ ಮಾಡಿದ್ದಿರಿ ಯಾರ್ಯಾರನ್ನು ಬೆಳೆಸಲು ಯಾರ್ಯಾರನ್ನು ಕೂಡ ತುಳಿದಿದ್ದೀರಿ, ನೀವು ಯಾವ ಯಾವ ರೀತಿ ಸಂಬಂಧ ಹೊಂದಿದ್ದೀರಿ ಯಾವ ರೀತಿ ಸಂಪಾದನೆ ಮಾಡಿದ್ದೀರಿ ಎನ್ನುವುದು ಸಾರ್ವಜನಿಕರಿಗೆ ತಿಳಿದ ವಿಚಾರ ಇನ್ನಾದರೂ ಕೂಡ ಜನರ ನಡುವೆ ಒಗ್ಗಟ್ಟನ್ನು ಮುರಿಯುವ ನಿಮ್ಮ ಪ್ರಯತ್ನವನ್ನು ನಿಲ್ಲಿಸಿ, 3 ಬಾರಿ ಅಧಿಕಾರ ಅನುಭವಿಸಿದರು ಕೂಡ ಇನ್ನೂ ನಿಮ್ಮ ಅಧಿಕಾರದ ಆಸೆಯಿಂದ ಸಮಾಜವನ್ನು ವಿಂಗಡಣೆ ಮಾಡಿ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದೀರಿ ಇಂಥ ಚಟುವಟಿಕೆಗಳಿಂದ ದೂರವಿದ್ದು ನಿಮ್ಮ ಗೌರವವನ್ನು ನೀವು ಉಳಿಸಿಕೊಳ್ಳಿ

Leave a comment

Leave a Reply

Your email address will not be published. Required fields are marked *

Related Articles

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...

ಲೈಂಗಿಕ ದೌರ್ಜನ್ಯ ಆರೋಪ ಮೂಡಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಬಿಜಿ ಅಮಾನತು

ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದ್ದು,...

ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಸಿದ್ಧ ರಂಗೋಲಿ ಕಲಾವಿದೆ ಶ್ರೀಮತಿ ವಿಶಾಲ ಮಹೇಶ್ ರವರಿಗೆ ಸನ್ಮಾನ

ಬ್ರಹ್ಮಾವರ : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಜರಗಿದ ಸರಳ...