ಗಜೇಂದ್ರಗಡ ತಾಲೂಕಿನ ಕಡಲೆ ಬೆಳೆ ಉತ್ತಮವಾಗಿದ್ದು, ರೈತರು ಸಂತಸಗೊಂಡಿದ್ದಾರೆ. ಕೀಟ ಬಾಧೆ ತಡೆಯಲು ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ಉತ್ತಮ ಮಳೆ ಮತ್ತು ಹವಾಮಾನದಿಂದ ಬೆಳೆ ಚೆನ್ನಾಗಿ ಬೆಳೆದಿದೆ. ಈ ಕಡಲೆಗೆ ವಿದೇಶದಲ್ಲೂ ಬೇಡಿಕೆ ಇದೆ.
ಮುಂಗಾರು ಬೆಳೆ ಲಭಿಸದೇ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದ ಅನ್ನದಾತನಿಗೆ ಹಿಂಗಾರು ಬೆಳೆ ನಿರೀಕ್ಷೆ ಕೈಗೂಡಿದೆ ಮಳೆಯಾಶ್ರಿತ ಕಪ್ಪು ಮಣ್ಣಿನ ಯರಿಭೂಮಿಯಲ್ಲಿಬೆಳೆದ ಅಣ್ಣಿಗೇರಿ ತಳಿಯ ಕಡಲೆ ಕಾಳುಗಳಿಗೆ ವಿದೇಶದಲ್ಲೂ ಭಾರಿ ಬೇಡಿಕೆ ಇದೆ ಗದಗ ಕೃಷಿ ಮಾರುಕಟ್ಟೆ ವಹಿವಾಟು ಮೇಲೆ ಭಾಗಶಃ ಅವಲಂಬಿತವಾಗಿರುವ ಈ ಕಡಲೆ ವಿದೇಶಕ್ಕೂ ರಫ್ತು ಆಗುತ್ತಿದೆ.

ಗಜೇಂದ್ರಗಡ: ಹಿಂಗಾರು ಹಂಗಾಮಿನ ಹೆಸರು ಬೆಳೆ ಧಾರಾಕಾರ ಮಳೆಯಿಂದ ಕೈಗೆ ತುತ್ತು ಬಾಯಿಗೆ ಬರದಂತಾಗಿದ್ದು, ಹಿಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆ ಕಡಲೆ, ಜೋಳದತ್ತ ಅನ್ನದಾತರ ಚಿತ್ತ ಹರಿದಿದೆ. ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದರಿಂದ ಮುಂಗಾರಿನ ಹೆಸರು, ಉಳ್ಳಾಗಡ್ಡಿ ಬೆಳೆ ರೈತರನ್ನು ನಷ್ಟಕ್ಕೆ ದೂಡಿದೆ.

ಹೀಗಾಗಿ, ಹಿಂಗಾರು ಬೆಳೆ ಮೇಲೆ ನಿರೀಕ್ಷೆ ಇಟ್ಟು ಕೊಂಡಿದ್ದಾರೆ. ತಿಂಗಳ ಹಿಂದೆ ಬಿತ್ತನೆ ಮಾಡಿರುವ ಜೋಳ, ಕಡಲೆ, ಶೇಂಗಾ, ಸೂರ್ಯಕಾಂತಿಗೆ ಕೀಟ ಬಾಧೆ ತಪ್ಪಿಸಲು ರೈತರು ರಾಸಾಯನಿಕ ಸಿಂಪರಣೆ ಕಡೆ ದೃಷ್ಟಿ ಹರಿಸಿದ್ದಾರೆ.”

Leave a comment